ಬೀದರ್ನಲ್ಲಿ ಜಾನಪದ ಸಂಭ್ರಮ, ಕವಿಗೋಷ್ಠಿ ಹಾಗೂ ಪ್ರತಿಭಾ ಪುರಸ್ಕಾರ
ಬೀದರ್ ಮೇ 24 ಃ ನಾವೆಲ್ಲರೂ ರಾಜ್ಯ, ಭಾಷೆ, ಪ್ರಾಂತ್ಯ, ನಾಡು ನುಡಿ ಬಗ್ಗೆ ಹೇಗೆ ಹೆಮ್ಮೆ ಪಡುತ್ತೇವೆ. ಅದೇ ರೀತಿಯಲ್ಲಿ ನಮ್ಮ ಗಡಿ ಭಾಗದ ಬಗ್ಗೆ ಸಹ ಹೆಮ್ಮೆಪಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ ಹೇಳಿದರು.ಅವರು ಶನಿವಾರ ಬೀದರ ನಗರದ ಮೈಲೂರ ಕ್ರಾಸ್ ಬಳಿಯ ಕೃಷ್ಣ ಉಡುಪಿ ಹೊಟೇಲ್‌ನಲ್ಲಿರುವ ಮಹಾ ಲಕ್ಷಿö್ಮÃ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತಿಕ ಲೋಕಮಂಚ್ ಟ್ರಸ್ಟ್, ಬೀದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರದಲ್ಲಿ 2025-26ನೇ ಸಾಲಿನ ಸಾಮಾನ್ಯ ಸಂಘ ಸಂಸ್ಥೆಗಳ ಸಾಂಸ್ಕೃತಿ ಚಟುವಟಿಕೆಗೆ ಧನ ಸಹಾಯ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕವಿಗೋಷ್ಠಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮುಂದುವರೆದು ಮಾತನಾಡುತ್ತಾ, ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿಶೇಷವಾಗಿ ಯುವ ಪೀಳಿಗೆಗೆ ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಪರಿಚಯ ಮಾಡಿಕೊಡುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಅವರು ಮಾತನಾಡಿ, ಜನಪದ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕಲಾವಿದರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಯೋಜನೆಗಳನ್ನು ತಲುಪಿಸಲು ಇಲಾಖೆ ಸದಾ ಬದ್ಧವಾಗಿದೆ ಎಂದು ಹೇಳಿದರು.ಅಣ್ಣಾಭಾವು ಸಾರೆ ಸಾಂಸ್ಕೃತಿಕ ಮತ್ತು ಸಾಹಿತಿಕ ಲೋಕಮಂಚ್ ಟ್ರಸ್ಟ್, ಅಧ್ಯಕ್ಷರಾದ ಎಂ,ಎಸ್, ಮನೋಹರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಅಸ್ತಿತ್ವವನ್ನು ಉಳಿಸುವ ಶಕ್ತಿಯಾಗಿದ್ದು, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ನಾಡಿನ ಪರಂಪರೆ ಹಾಗೂ ಜನಪದ ಕಲೆಯನ್ನು ಜೀವಂತವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.ಯಾರಾದರು ದಾನಿಗಳು ಸಹಾಯ ಸಹಕಾರ ಮಾಡಿದರೇ ನಮ್ಮ ಸಂಘ ಇರುವರೆಗೂ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಪ್ರತಿವರ್ಷ ಒಂದು ಪುಸ್ತಕ ಪ್ರಕಟಿಸುವಂತೆ ಕೆಲಸ ಮಾಡಲಾಗುವುದು ಎಂದು ಹೇಳಿದರು.ಪಂಚಾಯತ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಖಚಾಂಚಿ ಶರತಕುಮಾರ ಅಭಿಮಾನ, ಜೆಸ್ಕಾಂ ಬೀದರನ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ, ಹಿರಿಯ ಕಲಾವಿದರಾದ ಶಂಭುಲಿAಗ ವಾಲ್ದೊಡ್ಡಿ ಮಾತನಾಡಿದರು, ಬೀದರ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಸುಭಾಷ ರತ್ನ ಸೇರಿ ಇತರರು ವೇದಿಕೆ ಮೇಲಿದ್ದರು.ಪ್ರಾರಂಭದಲ್ಲಿ ಸುಮಂತ ಕಟ್ಟಿಮನಿ ಪ್ರಸ್ತಾವಿಕ ಮಾತನಾಡಿದರು, ಪ್ರವೀಣ ಚಂದ್ರ ಸ್ವಾಗತಿಸಿದರು, ಪ್ರೇಮ ಅವಿನಾಶ ನಿರೂಪಿಸಿದರೇ, ಸಮೃತ ಸೂರ್ಯವಂಶಿ ವಂದಿಸಿದರು.ಕಾರ್ಯಕ್ರಮದ ನಂತರ ಪ್ರಚಲಿತ ವಿದ್ಯಮಾನಗಳ ಕುರಿತು ಕವಿಗೋಷ್ಠಿ ನಡೆಯಿತು.ಹಿರಿಯ ಸಾಹಿತಿ ಎಂ. ಜಿ. ದೇಶಪಾಂಡೆ ಉದ್ಘಾಟಿಸಿದರು, ಹಿರಿಯ ಸಾಹಿತಿ ಗುರುನಾಥ ಅಕ್ಕಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ್ ಅತಿವಾಳೆ, ಅವರು ಭಾಗವಹಿಸಿ ಮಾತನಾಡಿದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾ ತಂಡಗಳಾದ, ಶ್ರೀಮತಿ ಪ್ರಿಯಾಂಕ ಗುರುದೇವ ಮತ್ತು ತಂಡದಿAದ ಜನಪದ ಗೀತೆ, ಶ್ರೀಮತಿ ರಾಣಿ ಸತ್ಯಮೂರ್ತಿ ಮತ್ತು ತಂಡದಿAದ ಭರತ ನಾಟ್ಯ, ಮಹೇಶ ಕುಮಾರ ಕುಂಬಾರ ಸಾರಿಗಮಪ ಕಲಾ ತಂಡದಿAದ ತತ್ವಪದ, ಶ್ರೀಮತಿ ಚಿನ್ನಮ್ಮಾ ಲಾಧಾ ಮತ್ತು ತಂಡದಿAದ ಮಹಿಳಾ ಡೊಳ್ಳು ಕುಣಿತ, ಸೋಬಾನ ಪದ ಶ್ರೀಮತಿ ಡಿಲ್ಲೆಮ್ಮಾ ಮತ್ತು ತಂಡದಿAದ ಸೋಬಾನ ಪದ, ರಮೇಶ ಅಮಲಾಪೂರ ಮತ್ತು ತಂಡದಿAದ ಬೌದ್ಧ ಗೀತೆ, ಶ್ರೀಮತಿ ಸೀಮಾ ಮತ್ತು ತಂಡದಿAದ ಲಮಾಣಿ ನೃತ್ಯ, ಶ್ರೀಮತಿ ಕೀರ್ತಿ ಮತ್ತು ತಂಡದಿAದ ಭುಲಾಯಿ ಹಾಡು, ಕುಮಾರಿ ಜಯಲಕ್ಷ್ಮಿ ಕಟ್ಟಿಮನಿ ಮತ್ತು ತಂಡದಿAದ ಭರತ ನಾಟ್ಯ, ದೇವಪ್ಪ ಮತ್ತು ತಂಡದಿAದ, ಕನ್ನಡ ಗೀತೆ, ಡಾ. ಜೈ ಭಾರತ ಮಂಗೆಸ್ಕರ್ ತಂಡದಿAದ ದೇಶ ಭಕ್ತಿಗೀತೆ, ಸುನೀತಾ ಸಿ.ಬಿ. ಬಸವ ಪ್ರಸಾದ ಕಲಾ ತಂಡದಿAದ ವಚನ ಗಾಯನ, ರಾಜಕುಮಾರ ಕರುಣಾ ಸಾಗರ ಮತ್ತು ತಂಡದಿAದ ಅಂಬೇಡ್ಕರ್ ಗೀತೆಗಳು, ಕಂಟೆಪ್ಪಾ ಪೂಜಾರಿ ಮತ್ತು ತಂಡದಿAದ ಸುಗಮ ಸಂಗೀತೆ, ಶಿವಾಜ ಮಾನಕರೆ ಮತ್ತು ತಂಡದಿAದ ಕ್ರಾಂತಿಗೀತೆ, ತುಕಾರಾಮ ನಾಗೂರೆ ತಂಡದಿAದ ಜಾನಪದ ಜಾದು, ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆದವು.ಅದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಸಾಹಿತಿಗಳು, ಯುವ ಬರಹಗಾರರು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವನ ವಾಚನ ಮಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ಕಲಾವಿದರು, ಯುವಕರು, ಮಹಿಳೆಯರು, ನಾಗರಿಕರು, ಇತರರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.