logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ

ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಹೇಳಿದರು. ವಿಜಯಪುರ ನಗರದಲ್ಲಿ ಮಂಗಳವಾರ 12 ಗಂಟೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಬೈಕ್ ಕಳ್ಳತನ ಮಾಡುತ್ತಿದ್ದ ಸುನೀಲ ಗಡ್ಡಿ, ಮೊಶಿನ್ ಕಲಾದಗಿ, ಸದ್ದಾಂ ಮುತವಲ್ಲಿ ಬಂಧಿತ ಆರೋಪಿಗಳು. ಇನ್ನು ಬಂಧಿತ ಆರೋಪಿಗಳಿಂದ 15.60 ಲಕ್ಷ ಮೌಲ್ಯದ 26 ಬೈಕ್‌ಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಅಲ್ಲದೇ, ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು. ವಿಜಯಪುರ ನಗರದಲ್ಲಿ ಕಳೆದುಹೋಗಿದ್ದ 2.90 ಲಕ್ಷ ಮೌಲ್ಯದ 29 ಮೊಬೈಲ್‌‌ಗಳನ್ನು ಸಿಇಆರ್ ಪೋರ್ಟಲ್ ಮ‌ೂಲಕ ವಶಕ್ಕೆ ಪಡೆಯಲಾಗಿದೆ ಎಂದರು.

126
1982 views

Comment