logo

ದಾವಣಗೆರೆ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ 10 ಲಕ್ಷ ಮೌಲ್ಯದ ಗಾಂಜಾ ವಶ; ಮೂವರು ಆರೋಪಿಗಳ ಬಂಧನ. Davanagere: Cannabis worth 1

ದಾವಣಗೆರೆ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ 10 ಲಕ್ಷ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳ ಬಂಧನ ಮಾಡಿದ್ದಾರೆ.

ಸಾಮಾಜಿಕ ದೊಡ್ಡ ಪಿಡುಗಾದ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಹಾಗೂ ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಸ್ಪಿ ಉಮಾ ಪ್ರಶಾಂತ್ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳ ಸೇವೆನೆ ಹಾಗು ಮಾರಾಟ ಮಾಡುವವರ ಮೇಲೆ ನಿಗಾವಹಿಸಿ ಮಾಹಿತಿ ತೆಗೆದು ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಅದರಂತೆ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಪ್ರತಿದಿನ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

ಅದರಂತೆ ಹರಿಹರ ನಗರದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವವರನ್ನು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸುತಿದ್ದು, ಈ ಸಂಧರ್ಭದಲ್ಲಿ ಮಾದಕ ವ್ಯಸನಿಗಳಿಗೆ ಸಿಗುತ್ತಿದ್ದ ಗಾಂಜಾದ ಮೂಲವನ್ನು ಬೆನ್ನೆತ್ತಿದಾಗ, ಪೊಲೀಸರಿಗೆ ಹರಿಹರ ನಗರದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಇರುತ್ತದೆ. ದಿನಾಂಕ: 09-08-2024 ರಂದು ಹರಿಹರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿರುವ ಬಗ್ಗೆ ಹಾಗು ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆದಿದೆ.

ಡಿವೈಎಸ್ಪಿ ಬಸವರಾಜ್.ಬಿ.ಎಸ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವು ಮೇಲ್ಕಂಡ ಸ್ಥಳದಲ್ಲಿ ಹೋಗಿ ದಾಳಿ ಮಾಡಿದ್ದು, ಈ ಸಮಯದಲ್ಲಿ ಆರೋಪಿಗಳಾದ ಕೇಸಬಾ ಮೊಹಂತಿ(24) ಕಾಂಕ್ರಿಟ್ ಕೆಲಸ, ವಾಸ: ಕಂಚನ್ ಗ್ರಾಮ, ಖಾಲಿಕೋಟೆ ತಾಲೂಕ್, ಗಂಜಾಮ್ ಜಿಲ್ಲೆ, ಓಡಿಶಾ ರಾಜ್ಯ , ಸುಮಂತ ಸಾಹು (25), ಕೂಲಿ ಕೆಲಸ, ವಾಸ: ಕಂಚನ್ ಗ್ರಾಮ, ಖಾಲಿಕೋಟೆ ತಾಲೂಕ್, ಗಂಜಾಮ್ ಜಿಲ್ಲೆ, ಓಡಿಶಾ ರಾಜ್ಯ, ಸೈಯದ್ ಸಾಧಿಕ್ (27), ಕಾಂಕ್ರಿಟ್ ಕೆಲಸ, ವಾಸ: 1ನೇ ಮೇನ್, ಸರ್ಕಾರಿ ಶಾಲೆ ಹತ್ತಿರ, ಬೆಂಕಿನಗರ, ಹರಿಹರ ಇವರುಗಳನ್ನು ವಶಕ್ಕೆ ಪಡೆದು. ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ ಸುಮಾರು 10,00,000/- (10 ಲಕ್ಷ ರೂ) ಮೌಲ್ಯದ ಸುಮಾರು 10 ಕೆಜಿ ಗಾಂಜಾವನ್ನು ಹಾಗು ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತರುಗಳನ್ನು ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಎ1 & ಎ2 ಆರೋಪಿತರುಗಳು ಹಾಲಿ ಹರಿಹರ ವ್ಯಾಪ್ತಿಯಲ್ಲಿ ರೆಲ್ವೇ ಹಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಕಾಂಕ್ರಿಟ್ ಕೆಲಸ ಮಾಡಲು ಬಂದಿದು,್ದ ಸದರಿ ಗಾಂಜಾವನ್ನು ಒಡಿಶಾ ರಾಜ್ಯದಿಂದ ತೆಗೆದುಕೊಂಡು ಬಂದು ಹರಿಹರದಲ್ಲಿ ಮರಾಟ ಮಾಡುತ್ತಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿರುತ್ತದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

0
24 views