logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕರ್ನಾಟಕದ ಎರಡನೆಯ ಅತಿ ದೊಡ್ಡ ಶಿವಮೊಗ್ಗದ ದಸರಾ ಮಹೋತ್ಸವಕ್ಕೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರಿಂದ ಚಾಲನೆ

ಮಹಾನಗರ ಪಾಲಿಕೆ ನಗರದ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ನಾಡ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತವಾಗಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರೊಂದಿಗೆ ಚಾಲನೆ ನೀಡಿದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು
ನಮ್ಮ ನಾಡಿನ ಅತ್ಯಂತ ಸಾಂಸ್ಕೃತಿಕ ಶ್ರೀಮಂತಿಕೆ ತುಂಬಿದ ವೈಭವದ ನಾಡಹಬ್ಬ ದಸರಾ ನಮ್ಮ ರಾಜ್ಯದ ಒಂದು ಹೆಮ್ಮೆಯ ಪ್ರತೀಕ. ನಾಡಿನ ಶ್ರೀಮಂತ ಸಾಂಸ್ಕೃತಿಕ ಗತವೈಭವವನ್ನು ವಿಶ್ವಕ್ಕೆ ಪರಿಚಯಿಸಿದ ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆಯು ಹೌದು. ಹತ್ತು ದಿನಗಳ ಕಾಲ ಅತ್ಯಂತ ವೈಭವಪೂರಿತವಾಗಿ ಈ ವಿಶೇಷ ಹಬ್ಬವನ್ನು ಆಚರಿಸಲಾಗುತ್ತದೆ. ನವದುರ್ಗಿಯರನ್ನು ಪೂಜಿಸಿ ಆರಾಧಿಸುವ ಪರಂಪರೆ ಇದರಲ್ಲಿ ಅಡಕವಾಗಿದೆ. ಬನ್ನಿ ಸರ್ವರೂ ಈ ಹಬ್ಬದಲ್ಲಿ ಮಿಂದೇಳೋಣ, ಹಬ್ಬದ ಸ್ವಾದವನ್ನು ಉಣಬಡಿಸೋಣ.

ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

122
2913 views

Comment