logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಶಿರಾ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಶುದ್ಧೀಕರಣ ಘಟಕ /ಡಯಾಲಿಸಿಸ್ ಸೆಂಟರ್ ನ್ನು ಉದ್ಘಾಟಿಸಲಾಯಿತು.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಶುದ್ಧೀಕರಣ ಘಟಕ ಉದ್ಘಾಟನೆಯನ್ನು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ತಾಲೂಕಿನ ಶಾಸಕರಾದ T B ಜಯಚಂದ್ರರವರು ಉದ್ಘಾಟಿಸಿದರು. ಇನ್ಫಾರ್ ಮ್ಯಾಟಿಕ್ ಸಲ್ಯುಷನ್ ಪ್ರೈ.ಲಿ.ಇವರು ವೈದ್ಯಕೀಯ ಸಲಕರಣೆಗಳನ್ನು ಕೊಡುಗೆಯಾಗಿ ಈ ಅಸ್ಪತ್ರೆಗೆ ನೀಡಿದ್ದಾರೆ 8 ಬೆಡ್ ಗಳ dialysis ವ್ಯವಸ್ಥೆ. ಎರಡು ಡಯಾಲಿಸಿಸ್ ಮಿಶನ್ ಗಳು 15ಐಸಿಯು ಡಯಾಲಿಸಿಸ್ ಕಾಟ್ಗಳು,40 ಹೊಸತರದ ಮಾಡ್ಯುಲರ್ ಕಾಟ್ ಗಳು csr ನಿಧಿಯಲ್ಲಿ ಕೊಟ್ಟಿದ್ದಾರೆ . ಆಸ್ಪತ್ರೆಯ ಕಾರ್ಯ ನಿರೀಕ್ಷಣಾ ಸಮಿತಿಯ ಸದಸ್ಯರಾದ ಮಣಿ, ದೇವರಾಜ್, ಪಾಪಣ್ಣ, ಶಿವಣ್ಣ, ಕಂಬಣ್ಣ, ರಮೇಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ dr: B M ಗೌಡ ರವರು ಮತ್ತು ಸಿಬ್ಬಂದಿ ವರ್ಗದವರು , ಸದಸ್ಯರಾದ ಶೋಭಕ್ಕ, ತ್ಯಾಗರಾಜ್, ಸಾಹಿನ್ ಬಾನು ಇತರರು ಉಪಸ್ಥಿತರಿದ್ದರು. ಮಾನ್ಯ ಶಾಸಕರು ಮಾತನಾಡಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದ್ದು ರೋಗಗಳು ಹೆಚ್ಚಾಗುತ್ತಿವೆ ಆದ್ದರಿಂದ ಇನ್ನೂ ಹೆಚ್ಚಿನ ಬಿಲ್ಡಿಂಗ್ ಗಳ ವ್ಯವಸ್ಥೆ ಆಗಬೇಕು ಇದೇ ರೀತಿ ಪ್ರೈವಿಟ್ ಕಂಪನಿಗಳಿಂದ ಸಿಎಸ್ಆರ್ ಫಂಡ್ ನಡಿ ಹೆಚ್ಚಿನ ಸಹಕಾರ ಪಡೆದುಕೊಳ್ಳಬೇಕೆಂದು ಹೇಳಿದರು .

121
4128 views

Comment