logo

ಹುಕ್ಕೇರಿ:ಯೋಧನಿಂದ ನೀಚ ಕೃತ್ಯ:ಬಾಲಕಿ ಮೇಲೆ‌ ಲೈಂಗಿಕ ದೌರ್ಜನ ಎಸಗಿದ್ದ ಸೈನಿಕ‌ ಗಹಬರಸಾಬ ಅರೆಸ್ಟ್

ಹುಕ್ಕೇರಿ: ದೇಶ ಕಾಯುವ ಯೋಧನೊಬ್ಬ 14 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನೀಡುವ ಘಟನೆ ಹುಕ್ಕೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಜಬರಸಾಬ್‌ ತಹಶೀಲ್ದಾರ 25 ಬಂಧಿತ ಯೋಧ. ಈತ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದವನಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಈ ಇಬ್ಬರನ್ನು ಸದ್ಯ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಯೋಧ ರಜೆ ಮೇಲೆ ಊರಿಗೆ ಬಂದಾಗ ಈ ನೀಚ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿದಾಗ ಹಿಂದೂ ಸಂಘಟನೆಗಳ ಯುವಕರ ಕೈಯಲ್ಲಿ ಈ ನೀಚ ಯೋಧ ಸಿಕ್ಕಿ ಬಿದಿದ್ದಾನೆ.

ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನೀಡಿದ ಗಜಬರಸಾಬ್ ನ ವಿರುದ್ಧ ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಫೋಕ್ಸ್ ಕಾನೂನಿನನ್ವಯ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

146
16401 views