logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹಳೆಯ ವಿದ್ಯಾರ್ಥಿಗಳಿಂದ ಅಭಿನಂದನಾ ಸಮಾರಂಭ: ಡಾ ll ಶಿವಕುಮಾರ ಸ್ವಾಮೀಜಿ ಕಿವಿಮಾತು ಸಣ್ಣ ಗುರಿ ಇಟ್ಟುಕೊಳ್ಳದಿರಿ

ಬೀದರ್‍ನ ಸಿದ್ಧಾರೂಢ ಮಠದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಗೋಪಾಲ್ ರೆಡ್ಡಿ, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಲಕ್ಷ್ಮಣ ಪೂಜಾರಿ, ಬಸವರಾಜ ಮ್ಯಾಗೇರಿ ಹಾಗೂ ನಿರ್ಮಲಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು

ಬೀದರ್: ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಜೀವನದಲ್ಲಿ ಸಣ್ಣ ಗುರಿ ಇಟ್ಟುಕೊಳ್ಳಬಾರದು ಎಂದು ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಕಿವಿಮಾತು ಹೇಳಿದರು.
ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ 2002ನೇ ಬ್ಯಾಚ್ ಗೆಳೆಯರ ಬಳಗದ ವತಿಯಿಂದ ನಗರದ ಸಿದ್ಧಾರೂಢ ಮಠದಲ್ಲಿ ಶನಿವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕರ ಅಭಿನಂದನೆ ಹಾಗೂ ಪ್ರಶಸ್ತಿ ಪುರಸ್ಕøತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತವಾದುದ್ದನ್ನು ಸಾಧಿಸುವ ಗುರಿ ಇಟ್ಟುಕೊಳ್ಳಬೇಕು. ಅದರ ಸಾಕಾರಕ್ಕೆ ಕಠಿಣ ಪರಿಶ್ರಮ ವಹಿಸಬೇಕು ಎಂದು ಸಲಹೆ ಮಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳಂತೆ ಬೋಧನೆ ಮಾಡಬೇಕು ಎಂದು ಹೇಳಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಶಿವಾನಂದ ವಿಶ್ವಕರ್ಮ ಮಾತನಾಡಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಸಂಚಾಲಿತ ಶ್ರೀ ಕುಮಾರೇಶ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುದ್ದೆಯಿಂದ ನಿವೃತ್ತರಾದ ಗೋಪಾಲ್ ರೆಡ್ಡಿ ಅವರನ್ನು ಅಭಿನಂದಿಸಲಾಯಿತು.
ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮುಖ್ಯಶಿಕ್ಷಕರಾದ ಲಕ್ಷ್ಮಣ ಪೂಜಾರಿ, ಬಸವರಾಜ ಮ್ಯಾಗೇರಿ ಹಾಗೂ ಸಹ ಶಿಕ್ಷಕಿ ನಿರ್ಮಲಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಆನಂದ ಗಾದಗಿ, ಲೋಕೇಶ ಮಸ್ಕಲೆ, ಬಸವರಾಜ ಮಸ್ಕಲೆ, ರಮೇಶ ಬಿರಾದಾರ, ಅಂಬರೀಷ್ ಬಿಲಗುಂದೆ, ಕಲ್ಯಾಣಕುಮಾರ, ಆನಂದ ಬೆಟ್ಟದ, ಶಿವಕುಮಾರ ಕನೇರಿ, ಉಮೇಶ ಬಿರಾದಾರ, ಸಂತೋಷ ಚಿದ್ರಿ, ಪ್ರಶಾಂತ ಸ್ವಾಮಿ, ಸುದರ್ಶನ್, ಅಕ್ಷಯ ಪಟಪಳ್ಳಿ, ಸುವರ್ಣ ಸುಂಕದ, ಅಂಬಿಕಾ ಕಮಲಾಪುರಕರ್, ಮಲ್ಲಿಕಾರ್ಜುನ, ಜ್ಯೋತಿ, ಡಾ. ನಂದಿನಿ, ಶ್ರೀಕಾಂತ, ಹರೀಶ್, ಶ್ವೇತಾ, ಡಾ. ಶ್ರೀಮಂತ ರೆಡ್ಡಿ, ಶ್ರವಣ್, ರೇಣುಕಾ, ಮಂಜುನಾಥ, ಸುಮಂಗಲಾ, ಉದಯ, ದೇವೇಂದ್ರ, ರಾಜೇಶ್, ಓಂಕಾರ ಮತ್ತಿತರರು ಇದ್ದರು.

220
12776 views

Comment