logo

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಸಮಾಜವೇ ತಲೆ ತಗ್ಗಿಸುವ ಘಟನೆ ನಡೆದಿದೆ

ಬೆಳಗಾವಿ: ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಅತ್ತೆಯೊಂದಿಗೆ ತಾಯಿ ಪರಾರಿ ಆಗಿದ್ದಾಳೆ. ಅವಧಿ ಪೂರ್ವ ಜನ್ಮತಾಳಿದ ಕಂದಮ್ಮ 48 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಅಸುನೀಗಿದೆ. ಹೆಣ್ಣು ಮಗು ಅನ್ನೋ ಕಾರಣಕ್ಕೆ ಅತ್ತೆಯೊಂದಿಗೆ ತಾಯಿ ಪರಾರಿ ಆಗಿರ ಬಹುದು ಅನ್ನೋ ಅನುಮಾನ ಪೊಲೀಸರಿಗೆ ಕಾಡುತ್ತಿದೆ.

ಬೆಳಗಾವಿ ಬಿಮ್ಸ್​​​ ಆಸ್ಪತ್ರೆ ಕಳೆದ ಕೆಲವು ದಿನಗಳಿಂದ ಒಂದಿಲ್ಲೊಂದು ಘಟನೆಗಳಿಂದ ಸದ್ದು ಮಾಡುತ್ತಿದೆ. ಕಳೆದ ತಿಂಗಳವಷ್ಟೇ ಬಾಣಂತಿ ಸಾವು ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಬಿಮ್ಸ್​​ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಆಗತಾನೆ ಹುಟ್ಟಿದ ನವಜಾತ ಶಿಶುವನ್ನ ಬಿಟ್ಟು ಅತ್ತೆಯೊಂದಿಗೆ ತಾಯಿ ಪರಾರಿ ಆಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ದುರಂತ ಅಂದ್ರೆ ಹುಟ್ಟಿ 48 ಗಂಟೆಯಲ್ಲೇ ಆ ಹೆಣ್ಣು ಮಗು ಸಾವನ್ನಪ್ಪಿದೆ.

ಏನಿದು ಘಟನೆ !

ಡಿಸೆಂಬರ್ 8 ರಂದು ರಾತ್ರಿ 12 ಕ್ಕೆ ಅತ್ತೆಯೊಂದಿಗೆ ಬಾಣಂತಿ ಬಿಮ್ಸ್​ ಆಸ್ಪತ್ರೆ ಗೆ ಬಂದಿದ್ದಳು. ಬಿದ್ದಿದ್ದರಿಂದ ಪೆಟ್ಟಾಗಿದೆ, ತುಂಬಾ ನೋವಿನಿಂದ ಬಳಲುತ್ತಿದ್ದಳು. ತಕ್ಷಣವೇ ಬೀಮ್ಸ್ ಆಸ್ಪತ್ರೆ ವೈದ್ಯರು ಹೆರಿಗೆ ವಾರ್ಡ್ ಗೆ ಶಿಫ್ಟ್ ಮಾಡಿ ಹೆರಿಗೆ ಮಾಡಿದ್ದಾರೆ. ಹುಟ್ಟಿದ ನವಜಾತ ಶಿಶುವಿಗೆ ಜನ್ಮತಃ ಉಸಿರಾಟದ ತೊಂದರೆ ಮತ್ತು ಗಂಟಲಿನಲ್ಲಿ ರಕ್ತಸಾವ್ರವಾಗಿತ್ತು.

ಹೀಗಾಗಿ ಮಗುವನ್ನ ತೀವ್ರ ನಿಖಾ ಘಟಕಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಯಾವಾಗ ಹೆರಿಗೆ ಆಗಿ 24 ಗಂಟೆ ಆದ್ರು ಮಗುವಿನ ಆರೋಗ್ಯ ವಿಚಾರಿಸಲು ಯಾರ ಬರದೇ ಇದ್ದಾಗ ಗೊತ್ತಾಗಿದ್ದು ಅತ್ತೆಯೊಂದಿಗೆ ತಾಯಿ ಪರಾರಿ ಆಗಿ ಹೋಗಿರುವುದು. ತಾಯಿ ಇಲ್ಲದ ಮಗುವನ್ನ ನರ್ಸಗಳೇ ಆರೈಕೆ ಮಾಡುತ್ತಿದ್ದರು. ಆದ್ರೆ ತೂಕ ಕಡಿಮೆ ಇದ್ದರಿಂದ ಚಿಕಿತ್ಸೆ ಫಲಿಸದೇ ಡಿಸೆಂಬರ್ 10 ರಾತ್ರಿ 10 ಗಂಟೆ ಸಾವನ್ನಪಿದೆ.

ಇನ್ನೂ ಡಿಸೆಂಬರ್ 8 ರಂದು ಬೀಮ್ಸ್ ಆಸ್ಪತ್ರೆ ಗೆ ಬಂದ ಮಗುವಿನ ತಾಯಿ ಬೈಲಹೊಂಗಲ ತಾಲ್ಲೂಕಿನವಳು ಅಂತಾ ಹೇಳಲಾಗುತ್ತಿದೆ. ತಾಯಿ ಬೀಬೀಜಾನ್ ಸದ್ದಾಂ ಸೈಯದ್ ಅಂತಾ. ಆಸ್ಪತ್ರೆ ಬಂದ ಮಗುವಿನ ತಾಯಿ ಮತ್ತು ಅತ್ತೆ ತಮ್ಮ ಯಾವುದೇ ವಿಳಾಸ ಇರೋ ದಾಖಲೆಯನ್ನ ಆಸ್ಪತ್ರೆಯಲ್ಲಿ ಒದಗಿಸಿಲ್ಲ. ತುರ್ತು ಚಿಕಿತ್ಸೆ ಅನಿವಾರ್ಯ ಆಗಿದ್ದರಿಂದ ಆಸ್ಪತ್ರೆ ಸಿಬ್ಬಂದಿಗಳೂ ಸಹ ನೇರವಾಗಿ ಹೆರಿಗೆ ವಾರ್ಡ್ ಗೆ ಶಿಫ್ಟ್ ಮಾಡಿ ಹೆರಿಗೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ.

86
10165 views