
ಹದಗೆಟ್ಟ ಗ್ರಾಮದ ಮುಖ್ಯ ರಸ್ತೆ, ಸಂಚಾರ ಅಸ್ತವ್ಯಸ್ತ- ಗ್ರಾಮಸ್ಥರ ಆಕ್ರೋಶ.
ಚಿತ್ತಾಪೂರ: ಚಿತ್ತಾಪೂರ ಪಟ್ಟಣದಿಂದ ಮೋಗಲಾ ಗ್ರಾಮಕ್ಕೆ ಸಂಚರಿಸುವ ಓವರ್ ಬ್ರಿಡ್ಜ್ ಎಡಕ್ಕೇ ಇರುವ ಮುಖ್ಯ ರಸ್ತೆಯ ಮೇಲೆ ಕಲ್ಲುಗಳನ್ನು ಹಾಕಿ ರಸ್ತೆ ಕಾಮಗಾರಿ ಮಾಡದೇ ತಡೆಹಿಡಿದ ಕಾರಣಕ್ಕಾಗಿ ಮೊಗಲಾ ಗ್ರಾಮಕ್ಕೆ ಹೋಗುವ ಗ್ರಾಮಸ್ಥರು ಪ್ರತಿದಿನ ನರಕ ಯಾತನೆ ಅನುಭವಿಸುತ್ತಿದ್ದು ರಸ್ತೆ ಸುಧಾರಣೆ ಮಾಡದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಿಂದ- ಮೊಗಲಾ ಗ್ರಾಮ ಮತ್ತು ಇನ್ನೊಂದು ಕಡೆ ಮೊಗಲಾ ತಾಂಡಾ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿ ತಗ್ಗು ಗುಂಡಿಗಳು ನಿರ್ಮಾಣವಾಗಿ ರುವುದರಿಂದ ಪ್ರಯಾಣಿಕರು ಪ್ರತಿದಿನ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿರುವುದರಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.
ಕಳೆದ 7-8 ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಆಗಿದ್ದ ರಸ್ತೆಯು ಸರಿಯಾದ ನಿರ್ವಹಣೆ ಇಲ್ಲದೆ ಇರುವುದರಿಂದ ಕಳೆದ ಐದಾರು ವರ್ಷಗಳಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ರಸ್ತೆ ಯಾವುದೋ ಎಂಬ ಅನುಮಾನ ಗ್ರಾಮಸ್ಥರಲ್ಲಿ ಕಾಡತೊಡಗಿದೆ.
ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರವಾಗುತ್ತಿದ್ದು ಪ್ರತಿದಿನ ಒಂದಿಲ್ಲೊಂದು ರಸ್ತೆ ಅಫಘಾತದಲ್ಲಿ ಸಿಲುಕಿ ನೋವು ಅನುಭವಿಸುತ್ತಿದ್ದಾರೆ.
ಅಲ್ಲದೆ ಮೊಗಲಾ ಗ್ರಾಮದ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಒಂದೆಡೆಯಾದರೆ ಇನ್ನೊಂದು ಕಡೆ ಹಳ್ಳದ ಗೋಡೆ ಕುಸಿದು ಬಿದ್ದಿದ್ದು ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ರೈತರು ತಮ್ಮ ತಮ್ಮ ಹೊಲ ಗದ್ದೆಗಳಿಗೆ ಇದೆ ಮಾರ್ಗದಿಂದ ಸಂಚರಿಸುತ್ತಾರೆ ಇಲ್ಲಿ ಹಳ್ಳದ ನೀರು ಮತ್ತು ಮಳೆಯ ನೀರು ರಸ್ತೆ ಮೇಲೆ ನಿಲ್ಲುತ್ತವೆ ಎತ್ತು ಬಂಡಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಇಲ್ಲಿಂದ ಹೋಗಲು ಕಷ್ಟಕರವಾಗುತ್ತಿದೆ
ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಇಷ್ಟೆಲ್ಲ ಗುಂಡಿ ಮಯವಾಗಿದ್ದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಿಸುವ ಹಾಗೂ ರಸ್ತೆ ನವೀಕರಣ ಕಾಯಕಕ್ಕೆ ಕೈ ಹಾಕಿಲ್ಲ ಮತ್ತು ಯಾವ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವರೇಗೂ ಕಾದು ನೋಡಬೇಕಾಗಿದೆ. ಎಂದು ಗ್ರಾಮಸ್ಥರು ಆಗ್ರಹಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಐಟಂ ಬಾಕ್ಸ
ತಾಲೂಕಿನ ಚಿತ್ತಾಪೂರ ಪಟ್ಟಣದಿಂದ ಮೊಗಲಾ ಗ್ರಾಮಕ್ಕೆ ಮತ್ತು ಮೊಗಲಾ ತಾಂಡಾ ಕ್ಕೆ ಸೇರುವ ರಸ್ತೆಯು ಕಿತ್ತು ಗುಂಡಿ ಮಯವಾಗಿದ್ದರೂ ಮತ್ತು ಬಿರುಕು ಬಿಟ್ಟಿದ್ದರು, ಸಹ ಸಂಬಂಧ ಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಿಸುವ ಹಾಗೂ ರಸ್ತೆ ನವೀಕರಣ ಕಾಯಕಕ್ಕೆ ಕೈ ಹಾಕಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ ಮುಚ್ಚುವ ಕೆಲಸಕ್ಕೆ ಯಾರು ಕೈ ಹಾಕುವ ಲಕ್ಷಣ ಕಾಣುತ್ತಿಲ್ಲ. ಅನುಮಾನ ಗ್ರಾಮಸ್ಥರಲ್ಲಿ ಕಾಡತೊಡಗಿದೆ
ಅನಿಲ್ ಪೊಲೀಸ್ ಪಾಟೀಲ್, ಗುರು ಸ್ವಾಮಿ ಹಿರೇಮಠ್, ರಾಜು ಗುತ್ತೇದಾರ್, ನಾಗೇಶ್ ವಿಶ್ವಕರ್ಮ, ಶಿವಾನಂದ್ ವಿಶ್ವಕರ್ಮ, ಸುಭಾಷ್ ಹಡಪದ್, ರಹಿಮೊದ್ದೀನ್, ರಾಮಲಿಂಗ ಪೂಜಾರಿ, ಸಾಬಣ್ಣ, ರೇವಣಸಿದ್ಧ ಪೂಜಾರಿ, ರಾಕೇಶ್ ಇವಣಿ, ರಾಮು ತಳವಾರ್, ಇಸು ಲಕ್ಕನೋರ್, ವೀರೇಶ್ ಅಲ್ಲೂರಕರ್, ರಾಮು ಪಾಟೀಲ್, ನಾಗು ಹೂಗಾರ್, ಶೇಖಪ್ಪ ಪೊಲೀಸ್ ಪಾಟೀಲ್, ನಾಗರಾಜ್ ಪೊಲೀಸ್ ಪಾಟೀಲ್, ರಾಮು ಸರಡಗಿ, ದೆವು ಲಕ್ಕನೂರ್, ದೇವು ಪಂಚಾಲ್, ಮಲ್ಲು ಪೂಜಾರಿ, ಮಹಾಂತೇಶ್, ಪ್ರಕಾಶ್ ಸ್ವಾಮಿ, ನಾರಾಯಣ ಗುತ್ತೇದಾರ್, ರಮೇಶ್ ಪೂಜಾರಿ, ಸಾಬಣ್ಣ ದೊರೆ ಮತ್ತು ಇನ್ನಿತರರು ಉಪಸ್ಥಿತರಿದ್ದರು.