logo

*ಮದುವೆ ವಾರ್ಷಿಕೋತ್ಸವದಲ್ಲಿ ಪಕ್ಷಿಗಳಿಗೆ ಅರವಟ್ಟಿಗೆ ಕಟ್ಟಿ ಪಕ್ಷಿ ಸಂಕುಲ ಉಳಿಸಲು ಮುಂದಾದ ದಂಪತಿಗಳು* ಮಾನವಿ ತಾಲೂಕಿನ ಭೋಗವತಿ ಗ್ರಾಮದ

*ಮದುವೆ ವಾರ್ಷಿಕೋತ್ಸವದಲ್ಲಿ ಪಕ್ಷಿಗಳಿಗೆ ಅರವಟ್ಟಿಗೆ ಕಟ್ಟಿ ಪಕ್ಷಿ ಸಂಕುಲ ಉಳಿಸಲು ಮುಂದಾದ ದಂಪತಿಗಳು*

ಮಾನವಿ ತಾಲೂಕಿನ ಭೋಗವತಿ ಗ್ರಾಮದ ರಾಮಲಿಂಗಶ್ವರ ದೇವಸ್ಥಾನ ಆವರಣದಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮದಲ್ಲಿ ವಿರುಪಾಕ್ಷಿ ಮತ್ತು ಮೌನೇಶ ಅವರ 1ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ಪಕ್ಷಿಗಳಿಗೆ ಅರವಟ್ಟಿಗೆ ಕಟ್ಟಿ ನೀರುಣಿಸುವ ಮೂಲಕ ವಿಶೇಷತೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ನೀಡಲಾದ ಮಣ್ಣಿನ ಮಡಿಕೆಗಳನ್ನು ಗ್ರಾಮದ ಶ್ರೀ ರಾಮಲಿಂಗಶ್ವರ ದೇವಸ್ಥಾನದ ಅವರಣದಲ್ಲಿನ ಗಿಡಮರಗಳಿಗೆ ಕಟ್ಟಿ,ನೀರು ಹಾಕಿ ಪಕ್ಷಿಗಳ ಸಂತತಿ ಹೆಚ್ಚಿಸಲು ವನಸಿರಿ ಪೌಂಡೇಷನ್ ಕಾರ್ಯಕ್ಕೆ ಕೈಜೋಡಿಸಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ.ಪರಿಸರದಲ್ಲಿನ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ.ಅದರಂತೆ ಪ್ರಾಣಿ ಪಕ್ಷಿಗಳಿಗೂ ಜೀವಿಸುವ ಹಕ್ಕು ಇದೆ.ಇತ್ತೀಚಿಗೆ ದಿನಗಳಲ್ಲಿ ಪಕ್ಷಿ ಸಂಕುಲ ನಶಿಸುತ್ತಿದೆ.ಬೇಸಿಗೆಯಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ಪ್ರಾಣಿಪಾಕ್ಷಿಗಳಿಗೆ ನೀರುಣಿಸಿ ಜೀವ ಉಳಿಸಬೇಕಾಗಿದೆ. ಇಂತಹ ಕಾರ್ಯವನ್ನ ನಮ್ಮ ವನಸಿರಿ ತಂಡ ಪ್ರತಿ ಒಂದಲ್ಲ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮುಖಾಂತರ ಪರಿಸರ ಸಂರಕ್ಷಣೆಗೆ ಮುಂದಾಗಿದೆ. ಇವತ್ತು ಕೂಡಾ ವಿರುಪಾಕ್ಷಿ ಮತ್ತು ಮೌನೇಶ ಅವರು ತಮ್ಮ ಮದುವೆ ಸಮಾರಂಭದಲ್ಲಿ 501ಸಸಿಗಳನ್ನು ವಿತರಣೆ ಮಾಡಿ ಮಾಡಿ ಪರಿಸರ ಜಾಗೃತಿ ಗೆ ಮುಂದಾಗಿದ್ದರು.ಇದೀಗ ತಮ್ಮ1ನೇ ಮದುವೆ ವಾರ್ಷಿಕೋತ್ಸವವನ್ನು ಪಕ್ಷಿ ಸಂಕುಲ ಉಳಿಸಲು ಪಕ್ಷಿಗಳಿಗೆ ಅರವಟ್ಟಿಗೆ ಕಟ್ಟುವ ಮೂಲಕ ಆಚರಿಸಿಕೊಂಡಿರುವುದು ಶ್ಲಾಘನೀಯ ಎಂದು ವನಸಿರಿ ಸಾಮಾಜಿಕ ಜಾಲತಾಣ ಅಧ್ಯಕ್ಷ ಚನ್ನಪ್ಪ ಅವರು ತಿಳಿಸಿದರು.

ಈ ಸಂಧರ್ಭದಲ್ಲಿ ವೀರಭದ್ರಪ್ಪ ವಿಶ್ವಕರ್ಮ,ಅಮರಪ್ಪ ನಾಯ್ಕರ್,ಶಿವಮೂರ್ತಿ, ಅಜಯ ಕುಮಾರ,ನಾಗರಾಜ ಹಾಗೂ ಕುಟುಂಬ ವರ್ಗದವರು ಇದ್ದರು.

0
195 views