ಮುದ್ದೇಬಿಹಾಳದಲ್ಲಿ ಎಸ್‌ಡಿಪಿಐ ಪಕ್ಷದ ಪ್ರತಿಭಟನೆ
Zaheer Mulla ABU NEWS
ಮುದ್ದೇಬಿಹಾಳ: ನಗರದ ಬಸವೇಶ್ವರ ವೃತದಲ್ಲಿ, ಎಸ್‌ಡಿಪಿಐ ಪಕ್ಷದವರು ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ಅಮಾಯಕರ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಶಾಂತಿ ಮತ್ತು ಸೌಹಾರ್ದತೆಯ ಕಾಪಾಡುವಿಕೆ ಬಗ್ಗೆ ಘೋಷಣೆಗಳನ್ನು ನೀಡಿದರು. ಎಸ್‌ಡಿಪಿಐ ಪಕ್ಷದ ನಾಯಕರು ಈ ದಾಳಿಯ ತೀವ್ರ ಖಂಡನೆ ವ್ಯಕ್ತಪಡಿಸಿದರು ಹಾಗೂ ಭದ್ರತಾ ಪಡೆ ಏಕೆ ವಿಫಲವಾಯಿತು ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಕಾಶಿ ವಕೀಲರು, ಎಸ್ ಡಿ ಪಿ ಐ ತಾಲೂಕ ಅಧ್ಯಕ್ಷರು ಸಮೀರ ಹುಣಚಗಿ, ಕಾರ್ಯದರ್ಶಿ ಸದ್ದಾಂ ಹುಸೇನ್ ನದಾಫ್, ಅತಾವುಲ್ಲಾ ಮಕಾಂದಾರ್, ಸಾಹೇಬ್ ಅಲಿ ಮುಲ್ಲಾ, ಫಾರುಕ್ ಮೂಲಿಮನಿ, ಜುಬೇರ್ ಮುದಗಲ್, ಸದ್ದಾಂ ಅವಟಿ, ಮತ್ತು ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು...