logo

ಸಿಂಧನೂರಿನ ಕಾರುಣ್ಯಾಶ್ರಮಕ್ಕೆ ಸರಸ್ವತಿ ಸಾಧಕ ಸಿರಿ ಪ್ರಶಸ್ತಿ ವಿತರಿಸಿದ್ದು ಸಂತೋಷದ ಕ್ಷಣ :ಡಾ.ನಾಗರಾಜ್ ಭೈರಿ

ಸಿಂಧನೂರು -ಎಪ್ರಿಲ್ ೨೮
ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಗಣ್ಯಾತಿ ಗಣ್ಯರ ಕಲಾ ಮತ್ತು ಸಾಹಿತಿಗಳ ಸಮ್ಮುಖದಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ನಗರದ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಮಸ್ಯೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಅವರ ಅನಾಥಪರ ಹಾಗೂ ಸಮಾಜಪರ ಮತ್ತು ಶಿಕ್ಷಣ ಪರ ಕಾರ್ಯಗಳನ್ನು ಪರಿಗಣಿಸಿ "ಸರಸ್ವತಿ ಸಾಧಕಸಿರಿ ರಾಷ್ಟ್ರ ಪ್ರಶಸ್ತಿ -2025 " ಎನ್ನುವ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿ ಗೌರವಿಸಿ ಸೇವೆಗೆ ಪ್ರೋತ್ಸಾಹಿಸಿದರು ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ಮೈಸೂರು ಜಿಲ್ಲೆಯ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಾಗರಾಜ್ ಭೈರಿ ಮಾತನಾಡಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಇಂದು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರನ್ನು ಗುರುತಿಸಿ ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿಯನ್ನು ವಿತರಿಸುತ್ತಿರುವುದು ಅತ್ಯಂತ ಶ್ರೇಷ್ಠವಾದ ಕಾರ್ಯ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಮ್ಮ ನಾಡಲ್ಲದೆ ದೇಶದಾದ್ಯಂತ ಕರುಣೆಯ ಮನೆಯಾಗಿ ಕಾರುಣ್ಯ ಎನ್ನುವ ಕುಟುಂಬದೊಂದಿಗೆ ತಮ್ಮ ಇಡೀ ಜೀವನವನ್ನೇ ಸಮಾಜಕ್ಕಾಗಿ ಅನಾಥರಿಗಾಗಿ ಮುಡುಪಾಗಿಟ್ಟಿರುವ ಸಿಂಧನೂರಿನ ಕಾರುಣ್ಯಾಶ್ರಮದ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಅವರಿಗೆ ನೀಡಿದ ಈ ಪ್ರಶಸ್ತಿಗೆ ಶೋಭೆ ತಂದಂತಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಜೊತೆ ಸಂಸ್ಕಾರವನ್ನು ವಿದ್ಯಾರ್ಥಿಗಳೆಲ್ಲರೂ ಮೈಗೂಡಿಸಿಕೊಂಡು ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಲು ಮಾಡುತ್ತಿರುವ ಅಭಿಯಾನಗಳು ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಾಗಿವೆ. ಅದೆಷ್ಟು ವೃದ್ಧಾಶ್ರಮಗಳನ್ನು ಅನಾಥಾಶ್ರಮಗಳನ್ನು ನಾನು ನೋಡಿದ್ದೇನೆ ಆದರೆ ಬರೀ ಅನಾಥಾಶ್ರಮ ವೃದ್ಧಾಶ್ರಮ ನಡೆಸುವುದಲ್ಲದೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಹೆತ್ತವರನ್ನು ಕೊನೆ ಜೀವನದ ಘಳಿಗೆಯಲ್ಲಿ ಕೈ ಬಿಡಬಾರದು ಮತ್ತು ಸಮಾಜದಲ್ಲಿರುವ ಎಲ್ಲಾ ಹಿರಿಯರನ್ನು ಗೌರವಿಸಿ ಪ್ರೀತಿಸಿ ಪೂಜಿಸಿದಾಗ ಮಾತ್ರ ಮಾನವ ಧರ್ಮ ಉಳಿಯಲು ಸಾಧ್ಯ ಎನ್ನುವ ಹಲವಾರು ಕಾರ್ಯಕ್ರಮಗಳು ನಮ್ಮ ನಾಡಿನ ಮನೆ ಮನಸುಗಳಲ್ಲಿ ಅಚ್ಚಳಿಯದೆ ಉಳಿದಿವೆ. ಸಮಾಜದ ಟೀಕೆ ಟಿಪ್ಪಣಿ ,ಅವಮಾನ ,ಅಪಪ್ರಚಾರಕ್ಕೆ ಬಗ್ಗದೆ ಪ್ರಾಮಾಣಿಕವಾದ ಸೇವೆಯನ್ನು ಸಮಾಜಕ್ಕೆ ಸಿಂಧನೂರಿನ ಕಾರುಣ್ಯ ಆಶ್ರಮಕ್ಕೆ ನಾವೆಲ್ಲರೂ ಸಹಾಯ ಸಹಕಾರ ನೀಡುತ್ತೇವೆ ಎಂದು ಮಾತನಾಡಿ ಆಶ್ರಮದ ಸೇವೆಗೆ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ ಶೆಣೈ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಡಾ. ನಾಗೇಶ ಕಿಣಿ ಅಧ್ಯಕ್ಷರು ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆ. ಡಾ. ನ. ಗಂಗಾಧರಪ್ಪ ಸಾಮಾಜಿಕ ಸಾಧಕ ರಾಜ್ಯಪಾಲರು ಮೈಸೂರು. ಡಾ. ನಾಗರತ್ನ.ಎಸ್. ಶೆಟ್ಟಿ ಸಾಹಿತಿಗಳು ಕನ್ನಡ ಉಪನ್ಯಾಸಕರು ಲೋಯಲ ಸಂಸ್ಥೆ ಪದವಿ ಪೂರ್ವ ಕಾಲೇಜು ಮುಂಡಗೋಡ ಉತ್ತರ ಕನ್ನಡ ಜಿಲ್ಲೆ. ಸಂಗೀತಾ ಪ್ರಸನ್ನ ನಾಡಿಗ ಶೈಕ್ಷಣಿಕ ಸಾಧಕಿ ಮೈಸೂರು. ಆಶಾ ಅಡಿಗ ಆಚಾರ್ಯ ಬಹುಮುಖ ಪ್ರತಿಭೆ ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಅಮೆರಿಕಾ. ಜ್ಯೋತಿ ಗಣೇಶ್ ಶೆಣೈ ಗೌರವಾಧ್ಯಕ್ಷರು ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ. ಎಚ್. ಮಂಜುನಾಥ ಅಧ್ಯಕ್ಷರು ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ. ಶ್ರೀಪತಿ ರಾಘವೇಂದ್ರ ಶೆಣೈ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ.ಕೆ. ಸಿ. ಉಮೇಶ ಕಾರ್ಯದರ್ಶಿಗಳು ಕಲಾ ಕುಂಚ ಸಾಂಸ್ಕೃತಿಯ ಸಂಸ್ಥೆ ದಾವಣಗೆರೆ ಬಸವ ಸ್ವಾಮಿ ಕಾರುಣ್ಯ ಆಶ್ರಮ ಸಿಂಧನೂರು ಹಾಗೂ ವಿವಿಧ ರಾಜ್ಯದ ಗಣ್ಯರು ಕಲಾವಿದರು ಸಾಧಕರು ಉಪಸ್ಥಿತರಿದ್ದರು.

ವರದಿ: ಎಸ್.ಎನ್‌‌.ವೀರೇಶ
ಸಿಂಧನೂರು. ರಾಯಚೂರು ಜಿಲ್ಲೆ

27
3488 views