
ಮೃತ ಬಾಣಂತಿ ಮೌನಿಕ ಸಾವಿಗೆ ನ್ಯಾಯ ಇನ್ನು ಯಾವಾಗ ಸಿಗುತ್ತೋ
ಶಿಡ್ಲಘಟ್ಟ: ತಾಲ್ಲೂಕಿನ ಅಬ್ಲೂಡು ಗ್ರಾಮದ ನಿವಾಸಿ ಮೌನಿಕ ಅವರು
ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದು, ಮೌನಿಕಳ ಸಾವಿಗೆ ಈವರೆಗೂ ನ್ಯಾಯ ಸಿಗಲಿಲ್ಲ. ಜೊತೆಗೆ ಒಂದೂ ಪೈಸೆಯೂ ಪರಿಹಾರವೂ ಬ೦ದಿರುವುದಿಲ್ಲ. ಅಮಾಯಕ ಹೆಣ್ಣು ಮಗಳ ಸಾವಿನ ನ್ಯಾಯಕ್ಕಾಗಿ ತಾಲ್ಲೂಕು ಮಟ್ಟದಿಂದ – ಜಿಲ್ಲಾ ಮಟ್ಟ ಸೇರಿದಂತೆ ಆರೋಗ್ಯ ಇಲಾಖೆಯ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳವರೆಗೆ ದೂರು ಸಲ್ಲಿಸಿದರೂ ಇದುವರೆವಿಗೂ ಯಾವುದೇ ಪ್ರಯೋಜನೆವಾಗಿರುವುದಿಲ್ಲವೆಂಬ ಗ೦ಭೀರವಾದ ಆರೋಪ ಕೇಳಿ ಬಂದಿದೆ.
ಹೌದು ಅಮಾಯಕ ಬಾಣಂತಿ ಹೆಣ್ಣು ಪ್ರಾಣ ಕಳೆದುಕೊಂಡು ಎರಡು ವರ್ಷಗಳೇ ಕಳೆದಿದೆ. ಆದರೆ ಈವರೆಗೂ ಮೃತರ ಪತಿಗಾಗಲೀ ಅಥವಾ ಆಕೆಯ ಹೆಣ್ಣು ಮಗುವಿಗಾಗಲೀ ಯಾವುದೇ ಸೂಕ್ತ ಪರಿಹಾರ, ನ್ಯಾಯ ಸಿಕ್ಕಿರುವುದಿಲ್ಲ. ಮೃತ ಮೌನಿಕಳ ಪತಿ ಮಧು ಅವರ ಮಾತನಾಡಿ ನಾನು ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲೆ, ರಾಜ್ಯ ಮಟ್ಟದವರೆಗೂ ಎಲ್ಲಾ ಕಛೇರಿಗಳಿಗೆ ಅಲೆದಾಡಿದ್ದೇನೆ. ಆದರೆ ಅಧಿಕಾರಿಗಳು ಸಬೂಬುಗಳು ಹೇಳಿಕೊಂಡು ಬರುತ್ತಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಕೆಲವು ಅಧಿಕಾರಿಗಳು ಮಾಡುತ್ತಿದ್ದಾರೆಂದು ಗಂಭೀರವಾದ ಆರೋಪವನ್ನು ಮಾಡಿದರು.
ಏನಿದು ಘಟನೆ: 2023 ರಲ್ಲಿ ತಾಲ್ಲೂಕಿನ ಅಬ್ಲೂಡು ಗ್ರಾಮದ
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮೌನಿಕಾ ಅವರನ್ನು ತನ್ನ ಪತಿ ಮಧು ಅವರು ಹೆರಿಗೆಗೆಂದು ಶಿಡ್ಲಘಟ್ಟ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಕರ್ತವ್ಯದಲ್ಲಿರಬೇಕಿದ್ದ ವೈದ್ಯರು ಇಲ್ಲದೆ ಸಿಬ್ಬಂದಿಯೇ ಪೋನ್ ಮೂಲಕ ವೈದ್ಯರ ಸಲಹೆ ಪಡೆದುಕೊಂಡು ಯಾವುದೇ ವೈದ್ಯಕೀಯ ಕ್ರಮಗಳನ್ನು ಅನುಸರಿಸದೇ ಹೆರಿಗೆ ಮಾಡಿಸಿದ್ದು, ಆ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಉಂಟಾಗಿ ಬಾಣಂತಿ ಮೌನಿಕ ಸಾವನ್ನಪ್ಪಿರುತ್ತಾಳೆ.