logo

ಸಿಂಧನೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಯನ್ನು ವಿರೋಧಿಸಿ ಕರವೇ ವತಿಯಿಂದ ಮನವಿ

ಸಿಂಧನೂರು ಎಪ್ರಿಲ್ ೨೭
"ಕೈಮುಗಿದು ಒಳಗೆ ಬನ್ನಿರಿ ಇದು ವಿದ್ಯಾರ್ಜನೆಯ ದೇಗುಲ "ಎಂದು ಹೇಳುವ ಕಾಲ ಇತ್ತು. ಆದರೆ ಇಂದು ನೀವು ಹೇಗಾದರೂ ಒಳಗೆ ಬನ್ನಿ ಝಣ ಝಣ ಕಾಂಚಾಣದೊಂದಿಗೆ ಬನ್ನಿರಿ ಆಗ ಮಾತ್ರ ನಿಮ್ಮ ಮಗಳು ಮಗನಿಗೆ ನಮ್ಮ ಶಾಲೆಯಲ್ಲಿ ಪ್ರವೇಶ ದೊರೆಯುತ್ತದೆ, ಇಲ್ಲವಾದರೆ ಮುಂದೆ ಹೋಗಿ ಎಂದು ಬಹಿರಂಗವಾಗಿ ಹೇಳುತ್ತೀವೆ ನಮ್ಮ ಸಿಂಧನೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದು ವೀರೇಶ ಭಾವಿಮನಿ ತಾಲ್ಲೂಕು ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ)ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಕರವೇ ಸಿಂಧನೂರು ತಾಲ್ಲೂಕು ಸಮಿತಿಯ ವತಿಯಿಂದ ಗ್ರಾಮೀಣ ಮತ್ತು ತಾಲ್ಲೂಕುದ್ಯಾದಂತ ಡೊನೇಷನ್ ಹಾವಳಿ ವಿರೋಧಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರನ್ನು ಸಲ್ಲಿಸಿ, ಈ ವೇಳೆ ಮುಂದುವರಿದು ಮಾತನಾಡಿದ ವೀರೇಶ್ ಬಾವಿಮನಿ ಯವರು
ಸಿಂಧನೂರು ತಾಲ್ಲೂಕಿನಲ್ಲಿ ಇರುವ ಖಾಸಗಿ ಶಾಲೆಗಳ ಕರ್ಮಕಾಂಡ ಕುರಿತಂತೆ ನಮ್ಮ ಸಂಘಟನೆ , ತಮ್ಮ ಗಮನಕ್ಕೆ ತರುತ್ತಿದ್ದು, ತಾವುಗಳು ಈ ತಾಲೂಕಿನ ಅಧಿಕಾರಿಯಾಗಿದ್ದು ಇಂತಹ ಸಂಸ್ಥೆಗಳ ವಿರುದ್ಧ ಕ್ರಮ ಬೇಕಾಗಿತ್ತು. ಆದರೆ ಈ ವಿಷಯವನ್ನು ದೂರಿನ ಮೂಲಕ ತಮ್ಮ ಗಮನಕ್ಕೆ ತರುವುದು ಮಾತ್ರ ವಿಷಾದನೀಯ ಸಂಗತಿಯಾಗಿದೆ.ಸಿಂಧನೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ತಲೆಯೆತ್ತಿರುವ ಶಿಕ್ಷಣ ಖಾಸಗಿ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಮನಬಂದಂತೆ ಡೊನೇಷನ್ ಕೇಳಿ ನಿಮ್ಮ ಪಾಲಕರಿಂದ ಈ ಮೊತ್ತ ತೊಂದರೆ ಮಾತ್ರ ನಿಮಗೆ ಪ್ರವೇಶ ಇಲ್ಲವಾದರೆ ಇಲ್ಲ ಹೋಗಿ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ ,ಸರ್ಕಾರ ಒಂದು ಕಡೆ ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರದಂತೆ ಎಂದು ಘೋಷಣೆಗಳನ್ನು ಹೇಳುತ್ತಾ ಬಂದಿದ್ದರು, ಇಂತಹ ಖಾಸಗಿ ಸಂಸ್ಥೆಯವರು ಸರ್ಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘನೆ ಮಾಡಿ ಮನಬಂದಂತೆ ಡೊನೇಷನ್ ತೆಗೆದುಕೊಳ್ಳುವರು ಅಲ್ಲದೆ ಕೆಲವು ಸಂಸ್ಥೆಗಳಲ್ಲಿ ಆಟದ ಮೈದಾನ ಇರುವುದಿಲ್ಲ, ಬೋಧನೆಗಾಗಿ ಸರಿಯಾದ ಶಿಕ್ಷೆ ಇರುವುದಿಲ್ಲ ,ಅವರನ್ನು ಅರ್ಹತೆಯ ಮೇಲೆ ನೇಮಕಾತಿ ಮಾಡಿಕೊಂಡಿರುವುದಿಲ್ಲ, ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಂಡಿರುವುದು ಒಂದು ದುರಂತದ ಸಂಗತಿ. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷೆ ದೊರೆಯದೆ, ಹೋದರೆ ಉನ್ನತ ಶಿಕ್ಷಣ ಉನ್ನತ ಮಟ್ಟದ ವ್ಯಾಸಂಗ ಹೇಗೆ ಮಾಡಲು ಸಾಧ್ಯ ಎಂಬುದು ಇಲ್ಲಿ ಪ್ರಶ್ನೆ ಯಾಗದೆ.
ಇನ್ನೂ ಕೆಲವು ಸಂಸ್ಥೆಯವರು ಅನಧಿಕೃತವಾಗಿ ವಸತಿ ಶಾಲೆಗಳನ್ನು ಮಾಡಿಕೊಂಡು ಅದಕ್ಕೆ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುತ್ತಿದ್ದು, ಇಲ್ಲಿ ಯಾವುದೇ ಅನುಕೂಲತೆಗಳು ಇರುವುದಿಲ್ಲ ,ಎಲ್ಲಾ ಋತುಮಾನಗಳಲ್ಲಿ ತಣ್ಣೀರು ಜಳಕ ಮಾಡಬೇಕು ಶುದ್ಧವಾದ ಕುಡಿಯುವ ನೀರು ಇರುವುದಿಲ್ಲ, ಗುಣಮಟ್ಟದ ಊಟ ಇಲ್ಲ ಹಾಗೂ ಉಪಹಾರ ಕೂಡ ಇರುವುದಿಲ್ಲ, ಇದೊಂದು ಕಸಾಯಿ ಖಾನೆ ಎಂದರೆ ಉಚಿತವಾಗುತ್ತದೆ.
ಇನ್ನೂ ಕೆಲವು ಖಾಸಗಿ ಸಂಸ್ಥೆಯವರು ಒಂದನೇ ತರಗತಿಯಿಂದ ಅನುಮತಿ ಪಡೆದಿದ್ದು ಆದರೆ ಈ ಸಂಸ್ಥೆಯವರು ಎಲ್ ಕೆ ಜಿ ಯುಕೆಜಿ ನರ್ಸರಿಗಳನ್ನು ನಡೆಸಿಕೊಂಡು ಬಂದಿದ್ದು ಇದಕ್ಕೆ ಯಾವುದೇ ಅನುಮತಿ ಇರುವುದಿಲ್ಲ, ಇವರು ಯಾವುದೇ ಅಧಿಕಾರಗಳ ಭಯವಿಲ್ಲದೆ ಬಹಿರಂಗವಾಗಿ ಡೊನೇಷನ್ ವಸೂಲಿ ಮಾಡುತ್ತಿದ್ದಾರೆ, ಇನ್ನು ಈ ತಾಲೂಕಿನಲ್ಲಿ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ,ತಮಗೆ ಮೇಲಾಧಿಕಾರಿಗಳ ಇಲ್ಲವೇ ಸಾರ್ವಜನಿಕರ ಭಯ ಇರುವುದಿಲ್ಲ ಯಾರಿಗೆ ಬೇಕಾದರೂ ದೂರ ಕೊಡಿ ಹೋಗಿ ನಾವುಗಳು ಮೇಲಾಧಿಕಾರಿಗಳ ಬಾಯಿ ಮುಚ್ಚಿಸುವ ಕಲೆ ಗೊತ್ತು ಅಲ್ಲಿ ಕಾಳು ಹಾಕಿದರೆ ಸಾಕು ನಮ್ಮ ಪರವಾಗಿ ಅಧಿಕಾರಿಗಳು ನಿಲ್ಲುತ್ತಾರೆ. ಎಂದು ಹೇಳುವುದು ನೋಡಿದರೆ ಸಂಬಂಧಿಸಿದ ಅಧಿಕಾರಿಗಳು ಕೂಡ ಇದರಲ್ಲಿ ಪಾಲುದಾರರು ಎಂದು ನಮ್ಮ ವೇದಿಕೆ ಭಾವಿಸುತ್ತದೆ.
ಇಂತಹ ಉದಾಹರಣೆಗಳಿಂದಾಗಿ ಬಡವರು, ಕೂಲಿಕಾರರು ,ಮಧ್ಯಮ ವರ್ಗದವರಿಗೆ, ವಿದ್ಯೆಯೆಂಬುದು ಮರಿಚೀಕೆಯಾಗಿದೆ .ಅವರಿಗೆ ಅಷ್ಟು ಡೊನೇಷನ್ ಕೊಡುವ ಸಾಮರ್ಥ್ಯ ಇರುವುದಿಲ್ಲ ಪರಿಣಾಮ ಕೂಲಿ ಅರಸಿಕೊಂಡು ಹೋಗುವ ದಯನೀಯ ಸ್ಥಿತಿ ನಮ್ಮ ವಿದ್ಯಾರ್ಥಿನಿಯರಿಗೆ ಬಂದಿದೆ, ಚೆನ್ನಾಗಿ ಓದಬೇಕು, ನಮ್ಮ ತಾಲೂಕು ,ಊರು ,ಗ್ರಾಮಕ್ಕೆ ,ಒಳ್ಳೆಯ ಹೆಸರು ತರಬೇಕು, ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ,ಅದಕ್ಕಾಗಿ ವ್ಯಾಸಂಗದ ಅವಶ್ಯಕತೆ ಎಂದು ಹೇಳುತ್ತಿರುವ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಯವರು ಡೊನೇಷನ್ ಎಂಬ ನೇಣಿಗೆ ಅವರನ್ನು ಸಿಲುಕಿಸಿ ಪುನಃ ಕೂಲಿ ನಾಲಿ ಮಾಡಿ ಬದುಕುವಂಥ ಸ್ಥಿತಿಗೆ ತಂದಿದ್ದಾರೆ, ಇದು ಅಧಿಕಾರಿಗಳ ನಿರ್ಲಕ್ಷ ಎಂದು ಬೇರೆ ಹೇಳಬೇಕಾಗಿಲ್ಲ ,
ಈ ಹಿನ್ನೆಲೆಯಲ್ಲಿ ತಾವುಗಳು ಖುದ್ದಾಗಿ ಇಂತಹ ಸಂಸ್ಥೆಗಳಿಗೆ ನೇರವಾಗಿ ಭೇಟಿ ನೀಡಿ ಸಮಗ್ರವಾಗಿ ತನಿಖೆ ಮಾಡುವುದು ,ಅವಶ್ಯಕತೆ ಇದ್ದಲ್ಲಿ ವಿದ್ಯಾರ್ಥಿಗಳ ಪಾಲಕರೊಂದಿಗೆ ರಹಸ್ಯವಾಗಿ ವಿವರಣೆ ಪಡೆಯುವುದು, ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಪಡುವ ಭವಣೆಗಳನ್ನು ಕಣ್ಣಾರೆ ನೋಡಿ ಇಂತಹ ಸಂಸ್ಥೆಗಳಿಗೆ ಯಾವುದೇ ಮುಲಾಜಿ ಇಲ್ಲದೆ ಅನುಮತಿಯನ್ನು ರದ್ದು ಪಡಿಸುವುದು , ಅನುಮತಿ ಪಡೆಯದೆ ನಡೆಸುತ್ತಿರುವ ಶಾಲೆಗಳ ವಿರುದ್ಧ ಇಲಾಖೆಯಿಂದ ವಂಚನೆ ಪ್ರಕರಣ ದಾಖಲಿಸಲು ಒತ್ತಾಯಿಸಲಾಗಿದೆ.
ಸರ್ಕಾರ ನಿಗದಿಪಡಿಸಿದ್ದ ಡೊನೇಷನ್ ಇಲ್ಲವೇ ಶುಲ್ಕವನ್ನು ಮಾತ್ರ ಬಳಸಿಕೊಂಡು ಉಳಿದ ಹೊತ್ತು ಮೊತ್ತವನ್ನು ವಿದ್ಯಾರ್ಥಿಗಳ ಪಾಲಿಗೆ ಕೊಡಿಸುವಂತಹ ಕೆಲಸವಾಗಬೇಕು, ಸರಿಯಾಗಿ 10 ದಿನಗಳ ಒಳಗಾಗಿ ಈ ವಿಷಯದ ಬಗ್ಗೆ ಸೂಕ್ತ ಕ್ರಮವಾದ ಕಾನೂನು ಕ್ರಮ ಕೈಗೊಳ್ಳದಿದ್ದಾರೆ, ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ ಶೆಟ್ಟಿ ಬಣ) ವತಿಯಿಂದ ಗಂಭೀರವಾಗಿ ಪರಿಗಣಿಸಿ ತಾವುಗಳು ಸಹ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಅವರ ಮಾಡುವ ಕೆಲಸಗಳಿಗೆ ಶಾಮೀಲಾಗಿದ್ದೀರಿ ಎಂದು ಭಾವಿಸಿ, ತಮ್ಮ ಕಾರ್ಯಗಳನ್ನು ಮುಂದೆ ವಿದ್ಯಾರ್ಥಿಗಳು, ಪಾಲಕರ ಸಹಯೋಗದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು, ಜೊತೆಗೆ ಸರ್ಕಾರದ ಗಮನಕ್ಕೂ ತರಲಾಗುವುದು, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಮ್ಮನ್ನು ಸಹ ಹೊಣೆಗಾರಿಕೆ ಮಾಡುವುದು ಅನಿವಾರ್ಯವಾಗಿರುತ್ತದೆ.ಎಂದು ವೀರೇಶ ಭಾವಿಮನಿ ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಂ.ಡಿ ಫಾರುಕ್, ಉಪಾಧ್ಯಕ್ಷರು, ಅಮಾತ್ಯಪ್ಪ, ನಗರ ಘಟಕ ಪ್ರಧಾನ ಕಾರ್ಯದರ್ಶಿ, ದಿನಕರ್ ಶೆಟ್ಟಿ ತಾಲೂಕ ಗೌರವ ಅಧ್ಯಕ್ಷರು ,ಶ್ರೀಧರ್ ಕೊಂಡಜ್ಜಿ ,ನಗರ ಘಟಕ ಅಧ್ಯಕ್ಷರು ,ಅಶೋಕ್ ಗೊರೆಬಾಳ, ನಗರ ಘಟಕ ಉಪಾಧ್ಯಕ್ಷರು ,ನಿಂಗಪ್ಪ
ಸಾಮಾಜಿಕ ಜಾಲತಾಣ ತಾಲೂಕು ಅಧ್ಯಕ್ಷರು ಹನುಮಂತ ,ನವಾಜ್ ,ಲಿಂಗರಾಜ್ ಕೆ ,ಸಲೀಂ ಆಲಂಬಾಷಾ ಸೇರಿದಂತೆ ಇತರರು ಹಾಜರಿದ್ದರು.

ವರದಿ: ಎಸ್.ಎನ್. ವೀರೇಶ
ಸಿಂಧನೂರು. ರಾಯಚೂರು .ಜಿಲ್ಲೆ

13
1277 views