logo

Asp

ASP ಅಬ್ದುಲ್ ಖಾದರ್ ಸರ್
ಕಾಯಕವೇ ಕೈಲಾಸ
ಕೈ ಕೆಸರಾದರೆ ಬಾಯಿ ಮೊಸರು. ಸರ್ಕಾರಿ ಕೆಲಸ ದೇವರ ಕೆಲಸ ಸಿಬ್ಬಂದಿಯೇ. ನನ್ನ ಕುಟುಂಬ. ಕಚೇರಿಯೇ ತನ್ನ ಮನೆ ಎಂದು ಸೇವೆ ಮಾಡಿದರು ಇವರ ಕರ್ತವ್ಯದ ಅವಧಿಯಲ್ಲಿ ಕಳ್ಳರು, ಖದೀಮರು, ರೌಡಿ, ಪುಂಡರು,ನಕ್ಸಲ್, ಭ್ರಷ್ಟರು, ಇವರಿಗೆಲ್ಲ ಆ ಕಾಲದ ಸಿಂಗಂ, ಕೆಂಪೇಗೌಡ,ಆದ ಇವರು ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಸರ್ಕಾರದ ಆಸ್ತಿಪಾಸ್ತಿ ಕಾಪಾಡುವುದರಲ್ಲಿ ಬಡವರು ದೀನ ದಲಿತರು ಬಲಹೀನರಿಗೆ ಮೋಸ ಆದ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಪಣಕ್ಕೆ ಇಟ್ಟು ಮುನ್ನುಗ್ಗಿ ಕೆಲಸ ಮಾಡಿ ಇಲಾಖೆಯ ಗೌರವ ಕಾಪಾಡಿದ ಗಂಡುಗಲಿ, ಆರೋಪಿಗಳ ಪರವಾಗಿ ರಾಜಕೀಯ ಒತ್ತಡವಿರಬಹುದು ಅಥವಾ ಹಣದ ಪ್ರಭಾವ ಇರಬಹುದು ಯಾವುದನ್ನು ಲೆಕ್ಕಿಸದೆ ನ್ಯಾಯದ ಪರವಾಗಿ ಕೆಲಸ ಮಾಡಿದ ಧೀಮಂತ ಅಧಿಕಾರಿ ಎಎಸ್‌ಪಿ ಅಬ್ದುಲ್ ಖಾದರ್ ಸರ್ .ಇವರು ಈ ದಿನ ತಮ್ಮ ದೀರ್ಘ ಸೇವಾ ಅವಧಿಯನ್ನು ಮುಗಿಸಿ ನಿವೃತ್ತಿ ಆಗಿದ್ದಾರೆ. ಸರ್ ನಿಮ್ಮ ನಿವೃತ್ತಿ ನಮ್ಮ ಪೊಲೀಸ್ ಇಲಾಖೆಗೆ ಬಹಳ ದಿನ ಕಾಡುತ್ತದೆ ನಿಮಗೆ ಮತ್ತೊಮ್ಮೆ ಸರ್ಕಾರ ನಿವೃತ್ತಿಯ ನಂತರ ಗುರುತಿಸಿ ನಮ್ಮ ಇಲಾಖೆಯಲ್ಲಿ ಸೇವೆ ಮಾಡಲು ಅವಕಾಶ ಮಾಡಿಕೊಡಲಿ ಎಂದು ಆಶಿಸುತ್ತಾ ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ ಆ ದೇವರು ನಿಮಗೆ ನಿಮ್ಮ ಕುಟುಂಬಸ್ಥರಿಗೆ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತಾ ನಿಮಗೆ ಶುಭಾಶಯಗಳು ಕೋರುತ್ತಿದ್ದೇನೆ ಸರ್

ಮೊಹಮ್ಮದ್ ರಫೀ ( ಕೊಡಿಗೇನಹಳ್ಳಿ )

0
46 views