logo

ಮಂಗಳೂರು ಬಜಪೆ: ಫಾಝಿಲ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ

ಮಂಗಳೂರು: 2022ರಲ್ಲಿ ಸುರತ್ಕಲ್ ಪಟ್ಟಣದಲ್ಲಿ‌ ನಡೆದಿದ್ದ ಫಾಝಿಲ್ ಕೊಲೆ‌ ಪ್ರಕರಣದ‌ ಪ್ರಮುಖ ಆರೋಪಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಮೇಲೆ ತಲಾವಾರು ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

5 ಮಂದಿಯ ದುಷ್ಕರ್ಮಿಗಳ ತಂಡ ಸಾರ್ವಜನಿಕರ ಎದುರಲ್ಲೇ ತಲವಾರಿನಿಂದ ದಾಳಿ ನಡೆಸಿದ್ದು, ಕೊಲೆ ಕೃತ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಫಾಝಿಲ್ ಕೊಲೆಗೆ ಪ್ರತೀಕಾರವಾಗಿ ಈ‌ ಕೊಲೆ‌ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು ಹೊರವಲಯದ ಕುಡುಪು ಮೈದಾನದಲ್ಲಿ ನಡೆದ ಗುಂಪು ಹತ್ಯೆಯ ಬೆನ್ನಲ್ಲೇ ಬಜಪೆಯಲ್ಲಿ ಕೊಲೆ ನಡೆದಿರುವುದು ಆತಂಕದ ವಾತಾವರಣ ಸೃಷ್ಟಿಸಿದೆ.

9
64 views