
ಯುದ್ಧಕ್ಕೂ ಮುನ್ನಾ ಪೂರ್ವ ಸಿದ್ಧತೆ ಮಾಡ್ಕೋಂಬೇಕು : ಶಾಸಕ ವಿಶ್ವನಾಥ್
ಆನಿಧಿ ಫಿಟ್ನೆಸ್ ಜಿಮ್ ಪ್ರಾರಂಭೋತ್ಸವದಲ್ಲಿ ಶಾಸಕ ವಿಶ್ವನಾಥ್ ಹೇಳಿಕೆ
ದೇವನಹಳ್ಳಿ: ಅತ್ಯಂತ ಚರ್ಚೆಯಲ್ಲಿರುವ ಪೆಹಲ್‌ಗಾಮ್ ಇನ್ಸಿಡೆಂಟ್ಸ್‌ಗೆ ಸಂಬಂಧಿಸಿದಂತೆ, ಯಾವುದೇ ಒಂದು ದೇಶದ ಮೇಲೆ ಯುದ್ಧ ಮಾಡುವುದೆಂದರೆ ಮೊದಲಿಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್ ಹೇಳಿದರು.
ದೇವನಹಳ್ಳಿ ನಗರದ ರಾಣಿಸಕ್ರಲ್‌ನಲ್ಲಿ ನೂತನ ಆನಿಧಿ ಫಿಟ್ನೆಸ್ ಜಿಮ್ ಉದ್ಘಾಟನಾ ಕಾರ್‍ಯಕ್ರಮದಲ್ಲಿ ಭಾಗಿಯಾಗುವುದರ ಮೂಲಕ ಶುಭಹಾರೈಸಿ ಅವರು ಮಾತನಾಡಿದರು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕಾದರೆ, ಏಕಾಏಕಿ ಯುದ್ಧ ಮಾಡುವಂತಹದ್ದಲ್ಲ. ಎಲ್ಲಾ ಬಲಗಳನ್ನು ಗುರ್ತಿಸಿಕೊಳ್ಳಬೇಕು. ಯುದ್ಧದಲ್ಲಿ ಕೇವಲ ಸೈನಿಕರು ಸಾಯುವುದಲ್ಲ. ಆರ್ಥಿಕವಾಗಿಯೂ ಕೂಡ ಹೊರೆಯಾಗುತ್ತದೆ. ಪ್ರಪಂಚದ ಇತರೆ ದೇಶಗಳ ಬೆಂಬಲವನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ನಾವೆಲ್ಲ ಶಾಂತಿ ಪರವಾಗಿರುವ ದೇಶ ಭಾರತವಾಗಿದೆ. ಯುದ್ಧ ಘೋಷಣೆ ಮಾಡಬೇಕಾದ್ರೇ ಏಕೆ ಯುದ್ಧವನ್ನು ಮಾಡುತ್ತಿದ್ದೇವೆ. ಭಯೋತ್ಪಾದನೆ ನಿರ್ಮೂಲನೆ ಮಾಡುತ್ತಿದ್ದೇವೆ ಎಂಬುವುದನ್ನು ಮನದಟ್ಟು ಮಾಡಬೇಕಾಗುತ್ತದೆ. ಆ ಕೆಲಸವನ್ನು ಯಶಸ್ವಿಯಾಗಿ ಕೇಂದ್ರ ಸರಕಾರ ಮಾಡಿದೆ. ಗಡಿಯಲ್ಲಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯುದ್ಧವನ್ನು ಮಾಡುವ ತೀರ್ಮಾನವನ್ನು ಅಲ್ಲಿನ ಹಿರಿಯ ಅಧಿಕಾರಿಗಳಿಗೆ ಪವರ್‍ಸ್ ಕೊಟ್ಟಿದೆ. ಅವರು ಎಲ್ಲಾ ರೀತಿಯಲ್ಲಿ ನಾಗರೀಕರಿಗೆ ತೊಂದರೆಯಾಗದಂತೆ, ಭಯೋತ್ಪಾದಕರೇ ಟಾರ್ಗೆಟ್ ಆಗಬೇಕು. ಕಾಶ್ಮೀರ ನಮ್ಮದೇ ಭಾಗವಾದ್ರೂ ಪಾಕಿಸ್ತಾನ ಆಡಳಿತದಿಂದ ವಶಕ್ಕೆ ಪಡೆಯುವುದು, ಸಿಮ್ಲ ಒಪ್ಪಂದ ರದ್ದಾಗಿದೆ. ಕೇಂದ್ರದಿಂದ ತೀವ್ರ ಕ್ರಮ ಕೈಗೊಳ್ಳಲಿದೆ. ಶೀಘ್ರದಲ್ಲಿಯೇ ಪಾಕಿಸ್ತಾನ ಮುಟ್ಟಿನೋಡಿಕೊಳ್ಳುವಂತೆ ಭಾರತ ಟಕ್ಕರ್ ಕೊಡಲಿದೆ ಎಂದು ಹೇಳಿದರು.
ಕನ್ನಡ ಖ್ಯಾತ ಚಲನಚಿತ್ರ ನಟ ದುನಿಯ ವಿಜಯ್ ಮಾತನಾಡಿ, ಕೋವಿಡ್ ನಂತರ ಎಲ್ಲರೂ ಫಿಟ್ನೆಸ್ ಕಡೆ ಗಮನಹರಿಸಬೇಕು. ಚಿಕ್ಕಚಿಕ್ಕ ವಯಸ್ಸಿಗೆ ಕಾರಣವಿಲ್ಲದೆ ಸಾವನ್ನಪ್ಪುತ್ತಾರೆ. ಎಲ್ಲರೂ ಆರೋಗ್ಯಕರವಾಗಿ ಬದುಕು ನಡೆಸಬೇಕು. ಅತ್ಯಂತ ವೈಜ್ಞಾನಿಕ ಮತ್ತು ಅತ್ಯಾದುನಿಕ ಸಾಮಗ್ರಿಗಳನ್ನಿಟ್ಟುಕೊಂಡು ಈ ಫಿಟ್ನೆಸ್ ಜಿಮ್ ಅನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ಪ್ರತಿಯೊಬ್ಬರು ಆರೋಗ್ಯದ ಜತೆಗೆ ಖುಷಿಯಾಗಿರಬೇಕು ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಚಲನ ಚಿತ್ರ ನಟಿ ರಾಧಿಕ ದ್ವಿವೇದಿ, ಮಂಡಿಬೆಲೆ ಕೇಶವ ರಾಮಚಂದ್ರಪ್ಪ ರೈತ, ಮಾಲೀಕ ಅಂಜನ್‌ಗೌಡ, ಮುಖಂಡರಾದ ಕೆ.ಸಿ.ಮಂಜುನಾಥ್, ಹೆಚ್.ರವಿಕುಮಾರ್, ಅಂಬರೀಶ್‌ಗೌಡ, ಕೆ.ಸಿ.ಮುನಿರಾಜ್, ಸಿ.ಜಗನ್ನಾಥ್, ಎನ್.ರಘು, ಮೂರ್ತಿ, ಗುಟ್ಟಹಳ್ಳಿ ರವಿ, ಸಿನಿಮಾ ನಿರ್ಮಾಪಕ ಕೆ.ಮಂಜುನಾಥ್, ನಟ ಶ್ರೇಯಸ್ ಕೆ.ಮಂಜು, ಚಿರಾಗ್, ಸೇರಿದಂತೆ ಹಲವಾರು ಇದ್ದರು.
ಚಿತ್ರ: