logo

ಕೇಂದ್ರದ ನಾಲ್ಕು ಕಾರ್ಮಿಕ ಕೋಡ್‌ಗಳ ಜಾರಿಗೆ ವಿರೋಧ ಸಿಐಟಿಯು. ಮೇ 20 ರಂದು ಅಖಿಲ ಬಾರತ ಸಾರ್ವತ್ರಿಕ ಮುಷ್ಕರ: ಎಸ್ ವರಲಕ್ಷ್ಮೀ

ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಐಟಿಯು ರಾಜ್ಯಾದ್ಯಕ್ಷೆ ಎಸ್ ವರಲಕ್ಷ್ಮೀ ಮಾತನಾಡಿ
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜತೆಗೆ ಅನೇಕ ಪ್ರಗತಿಪರ ಸಂಘಟನೆಗಳ ಕೇಂದ್ರ ಸರ್ಕಾರದ ನಾಲಕ್ಕು ಕಾರ್ಮಿಕ ಕೋಡ್ ಗಳ ಜಾರಿ ವಿರೋದಿಸಿ ಮೇ 20, 2025 ರಂದು ಬೃಹತ್ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು 4 ಕಾರ್ಮಿಕ ಕೋಡ್‌ಗಳು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಒಂದು ಕ್ರೂರ ಯತ್ನವಾಗಿದೆ. ಈ ಕಾನೂನುಗಳು ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಸಂಘಟನೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತವೆ. ಇದು ಕಾರ್ಪೊರೇಟ್ ಕಂಪನಿಗಳಿಗೆ ಒಲವು ತೋರುವ ಕಾನೂನಾಗಿದ್ದು, ಕಾರ್ಮಿಕರನ್ನು ಶೋಷಣೆಗೆ ಒಡ್ಡುತ್ತದೆ," ಎಂದು ತೀವ್ರವಾಗಿ ಖಂಡಿಸಿದರು.ಅವರು ಮುಂದುವರೆದು, "ಮೇ 20 ರಂದು ದೇಶಾದ್ಯಂತ ಆಯೋಜಿಸಲಾಗಿರುವ ಅಖಿಲ ಭಾರತ ಮುಷ್ಕರವು ಕಾರ್ಮಿಕರ ಒಗ್ಗಟ್ಟಿನ ಶಕ್ತಿಯನ್ನು ತೋರಿಸುವ ಸಂದರ್ಭವಾಗಿದೆ. ಈ ಚಳುವಳಿಯ ಮೂಲಕ ಸರ್ಕಾರಕ್ಕೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತೇವೆ – ಕಾರ್ಮಿಕ ವಿರೋಧಿ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು!" ಎಂದು ಎಚ್ಚರಿಕೆ ನೀಡಿದರು,
ನಾಲ್ಕು ಕಾರ್ಮಿಕ ಕೋಡ್‌ಗಳ ಜಾರಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು. ಮೇ 20 ರಂದು ಆಯೋಜಿಸಲಾದ ಅಖಿಲ ಭಾರತ ಮುಷ್ಕರದಲ್ಲಿ ಚಿಕ್ಕಬಳ್ಳಾಪುರದ ಕಾರ್ಮಿಕರು ಸಕ್ರಿಯವಾಗಿ ಭಾಗವಹಿಸುವುದು.ಸ್ಥಳೀಯ ಮಟ್ಟದಲ್ಲಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಭಾಗವಹಿಸಲು ಸಮಾವೇಶಗಳನ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಗೌರವಾಧ್ಯಕ್ಷ ಸಿದ್ದಗಂಗಪ್ಪ ತಿಳಿಸಿದರು

ಈ ವೇಳೆ ಜಿಲ್ಲಾದ್ಯಕ್ಷೆ ಗಂಜಿಗುಂಟೆ ಲಕ್ಷ್ಮೀದೇವಮ್ಮ, ಸಿದ್ದಗಂಗಪ್ಪ, ಕೆ.ಎನ್. ಪಾಪಣ್ಣ, ಜಿ. ಮುಸ್ತಪಾ, ನಾಗಲಕ್ಷ್ಮಿ ಸೇರಿದಂತೆ ಇತರ ಪ್ರಮುಖ ಕಾರ್ಮಿಕ ನಾಯಕರು ಉಪಸ್ಥಿತರಿದ್ದರು.

52
5177 views