ಬಿಜ್ಜವಾರ ಸರ್ಕಾರಿ ಪ್ರೌಢಶಾಲೆಗೆ ಶೇ.100%ರಷ್ಟು ಫಲಿತಾಂಶ
ದೇವನಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಬಿಜ್ಜವಾರ ಸರ್ಕಾರಿ ಶಾಲೆಗೆ 2025ರ ಮಾರ್ಚ್/ ಏಪ್ರಿಲ್ ನಲ್ಲಿ ನಡೆದ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ.
ಪ್ರಥಮ ಶ್ರೇಣಿಯಲ್ಲಿ 9, ದ್ವಿತೀಯ ಶ್ರೇಣಿಯಲ್ಲಿ 5 ಮತ್ತು ತೃತೀಯ ಶ್ರೇಣಿಯಲ್ಲಿ 3 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉತ್ತಮ ಸಾಧನೆಯನ್ನು ಮಾಡುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಈ ಸಾಧನೆಗೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಲಹೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರ ಮಾರ್ಗದರ್ಶನ, ಪೋಷಕರ ಬೆಂಬಲ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಸಹಕಾರಿಯಾಗಿದೆ.
ರಾಘವೇಂದ್ರ.ಎನ್ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಅಂಕಗಳು 509 ಶೇಕಡ 82 ಪರ್ಸೆಂಟ್
2025 -26 ನೇ ಸಾಲಿನ ದಾಖಲಾತಿಗಳು ಎಂಟು ಒಂಬತ್ತು ಮತ್ತು 10ನೇ ತರಗತಿ ಗಳಿಗೆ ಕನ್ನಡ ಮಾಧ್ಯಮಕ್ಕೆ ಪ್ರಾರಂಭವಾಗಿದೆ. ಉತ್ತಮವಾದ ಶಿಕ್ಷಣದ ವ್ಯವಸ್ಥೆಯಿದ್ದು, ಉತ್ತಮವಾದ ಹಾಸ್ಟೆಲ್ ಸೌಲಭ್ಯವಿದ್ದು, ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ ಎಂದು ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಚಿತ್ರ: ರಾಘವೇಂದ್ರ.ಎನ್