logo

ದೇವನಹಳ್ಳಿ ಜೇಸಿಐ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ 200 ಯೂನಿಟ್ ರಕ್ತ ಸಂಗ್ರಹ ನಿರೀಕ್ಷೆ, ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ

ದೇವನಹಳ್ಳಿ: ಮನುಷ್ಯ ಏನೆಲ್ಲಾ ಸೃಷ್ಠಿಸಿದರೂ ಒಂದು ಹನಿ ರಕ್ತವನ್ನು ಸೃಷ್ಠಿ ಮಾಡಲು ಸಾಧ್ಯವಿಲ್ಲ ಎಂದು ದೇವನಹಳ್ಳಿ ಜೇಸಿಐ ವಲಯ ಅಧ್ಯಕ್ಷ ಶಿವಕುಮಾರ್ ಹೇಳಿದರು.

ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೇಸಿಐ-ದೇವನಹಳ್ಳಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಕುಮಾರ್ ಅವರು ಮಾತನಾಡಿ, ಜೇಸಿಐ ಸಂಸ್ಥೆ ವತಿಯಿಂದ ಸರಕಾರಿ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ರಕ್ತದಾನಕ್ಕೆ ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ೨೦೦ಯೂನಿಟ್ ರಕ್ತ ಸಂಗ್ರಹಣಾ ನಿರೀಕ್ಷೆ ಇದೆ. ಪ್ರಪಂಚದಲ್ಲಿ ರಕ್ತವನ್ನು ಸೃಷ್ಠಿ ಮಾಡಲು ಆಗುವುದಿಲ್ಲ. ಜೇಸಿಐ ಸಂಸ್ಥೆಯಿಂದ ಹಲವರು ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್‍ಯಕ್ರಮವನ್ನು ಸಹ ನಡೆಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ರೆಡ್ ಕ್ರಾಸ್ ರಕ್ತ ನಿಧಿಗೆ ವಿದ್ಯಾರ್ಥಿಗಳು ಹೆಸರುಗಳನ್ನು ನೊಂದಣಿ ಮಾಡಿಸಿ, ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಜೇಸಿಐ ಸಂಸ್ಥೆ ಪ್ರಶಂಸಿದೆ.

ಇದೇ ಸಂದರ್ಭದಲ್ಲಿ ಜೇಸಿಐ ವಲಯ ಪೂರ್ವಾಧ್ಯಕ್ಷೆ ಆಶಾಜೈನ್, ಉಪಾಧ್ಯಕ್ಷ ಕಿರಣ್‌ಯಾದವ್, ವಲಯ ಪೂರ್ವ ಉಪಾಧ್ಯಕ್ಷ ಆನಂದ್, ಜೇಸಿಐ ಅನಿಲ್, ಪ್ರಾಂಶುಪಾಲ ಪ್ರೋಫೇಸರ್ ಮಂಜಯ್ಯ, ಉಪನ್ಯಾಸಕರು, ರೆಡ್‌ಕ್ರಾಸ್ ಸಂಸ್ಥೆಯವರು ಹಾಗೂ ವಿದ್ಯಾರ್ಥಿಗಳು ಇದ್ದರು.

ಚಿತ್ರ: ದೇವನಹಳ್ಳಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೇಸಿಐ-ದೇವನಹಳ್ಳಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ.

13
592 views