logo

ಪತ್ರಕರ್ತ ಶಿವಪ್ರಸಾದ್ ಆತ್ಮಹತ್ಯೆ

ಸಂ.ಕ ಸಮಾಚಾರ, ಕೋಲಾರ ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದ ಮೂಲದ ಕೋಲಾರ ಪತ್ರಕರ್ತ ಶಿವಪ್ರಸಾದ್ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದಲ್ಲಿ ಪತ್ರಕರ್ತ ವೃತ್ತಿ ಆರಂಭಿಸಿದ್ದ ಪ್ರಸಾದ್ ಸ್ನೇಹ ಮತ್ತು ಸಹೃದಯಿ ಆಗಿದ್ದರು.

ಬೆಂಗಳೂರಿನ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದ ಅವರು ಕೆಲವು ವರ್ಷಗಳಿಂದ ಹವ್ಯಾಸಿ ಪತ್ರಕರ್ತರಾಗಿ ದುಡಿಯುತ್ತಿದ್ದರು.ಗುರುವಾರ ರಾತ್ರಿ ನಗರದ ಹಾರೋಹಳ್ಳಿಯಲ್ಲಿರುವ ತಮ್ಮ ಅತ್ತೆಯ ಮನೆಗೆ ಬಂದಿದ್ದ ಶಿವಪ್ರಸಾದ್ ಕೊಠಡಿಯೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಹಾಗೂ ಮಗಳನ್ನು ಬೆಂಗಳೂರು ಮನೆಯಲ್ಲೇ ಬಿಟ್ಟು ಬಂದಿದ್ದ ಶಿವಪ್ರಸಾದ್ ಕೋಲಾರದ ಅತ್ತೆ ಮನೆಯಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ.

0
0 views