logo

ಕೊಪ್ಪಳ ಜಿಲ್ಲೆಯ ವಿವಿಧ ಅಸಂಘಟಿತ ವಲಯಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ

ಕೊಪ್ಪಳ.
ದಿನಾಂಕ 18-07-2025 ಶುಕ್ರವಾರ ರಂದು
ಕಾರ್ಮಿಕರ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಮಾಡಲಾಯಿತು

"ರಾಜ್ಯದ ಕಾರ್ಮಿಕರ ಪ್ರಗತಿಗೆ ಸರಕಾರ ಬದ್ಧವಾಗಿದೆ,'' ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಹೊಸಪೇಟೆ ರಸ್ತೆಯ ಮಧುಶ್ರೀ ಗಾರ್ಡನ್ ನಲ್ಲಿ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ನಡೆದ ಜಿಲ್ಲೆಯ ನಾನಾ ವರ್ಗಗಳ ಆಸಂಘಟಕ ಕಾರ್ಮಿಕರಿಗೆ ಸ್ಟಾರ್ಟ್ ಕಾರ್ಡ್ ವಿತರಣೆ ಮತ್ತು ನಾನಾ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

"ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ನೀಡಲಾಗುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯು 91 ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಲಿದೆ,'' ಎಂದರು.

ಸಾಮಾಜಿಕ ಭದ್ರತಾ ಮಂಡಳಿ ಜಾರಿಗೆ: ''1 ಕೋಟಿ

60 ಲಕ್ಷ ಅಸಂಘಟಿತ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಡಿ ಬರುವ ಕಾರ್ಮಿಕರಿಗೆ ನೀಡುವ ಸೌಲಭ್ಯ ಅಸಂಘಟಿತ ವಲಯದ ಕಾರ್ಮಿಕರಿಗೂ ನೀಡುವಂತೆ ಬಹಳಷ್ಟು ಜನರು ಕೇಳಿಕೊಂಡಿದ್ದರು.ಆದರೆ, ಮಂಡಳಿಯಲ್ಲಿ ನೋಂದಣಿಯಾದವರಿಗೆ ಸೌಲಭ್ಯ నిజలు ఆవకారపదే. ఆనంఘటిక వలయద ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ 91 ವಲಯಗಳ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಾರಿಗೆ ತರಲಾಗಿದೆ,'' ಎಂದರು.

ಸುರಕ್ಷತಾ ಕ್ರಮಕ್ಕೆ ಸೂಚನೆ: "ಖಾಸಗಿ ಬಸ್, ಲಾರಿ,

ಆಟೊ, ಟಂಟಂ ಹೀಗೆ ಯಾವುದೇ ಸರಕು ಮತ್ತು ಸೇವಾ ಕಂಪನಿಗಳ ವಾಹನ ಚಾಲಕರು, ಕ್ಲೀನರ್‌ಗಳು ಮತ್ತು ಇತರೆ ಕಾರ್ಮಿಕರ ಜೀವಹಾನಿಗೆ 5 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುವುದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ರಸ್ತೆ ಅಪಘಾತಗಳ ವಲಯ ಗುರುತಿಸಿ ಅಲ್ಲಿಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.' 'ಎಂದರು.

ಜೋಡಿ ಶ್ರಮಿಕಳ ಆ ಯುಕ್ತ ದೇವಿಕುಮಾರ ಪ್ರಾಸ್ತಾವಿಕ ಕಾರಣ.

ಸೌಲಭ್ಯ ವಿತರಣೆ: 91ಕ್ಕೂ ಹೆಚ್ಚಿನ ಅಸಂಘಟಿತ

ಕಾರ್ಮಿಕರಿಗೆ ಸಚಿವರು ಸ್ಟಾರ್ಟ್ ಕಾರ್ಡ್ ವಿತರಣೆ ಮಾಡಿದ ನಂತರ ಆಶಾದೀಪ ಯೋಜನೆಯಡಿ ಎಸ್ ಸಿಎಸ್‌ಟಿ ಉದ್ಯೋಗಿಗಳ ಇಎಸ್‌ಐ, ಇಪಿಫ್ ಮೊತ್ತ ಮರುಪಾವತಿ ಚೆಕ್‌ಗಳ ವಿತರಣೆ ಹಾಗೂ ಖಾಸಗಿ ವಾಣಿಜ್ಯ ಚಾಲಕರ ಮಕ್ಕಳಿಗೆ 10 ಸಾವಿರ ರೂ. ಚೆಕ್ ಗಳನ್ನು ವಿತರಣೆ ಮಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿ

ಕೊಪ್ಪಳದ ಹೊಸಪೇಟೆ ರಸ್ತೆಯ ಮಧುಶ್ರೀ ಗಾರ್ಡನ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ನಾನಾ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಟಾರ್ಟ್ ಕಾರ್ಡ್ ವಿತರಣೆ ಮತ್ತು ನಾನಾ ಯೋಜನೆಗಳ ಅರಿವು ಕಾರ್ಯಕ್ರಮಕ್ಕೆ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು.

ಅಸಂಘಟಿತ ಕಾರ್ಮಿಕರಿಗೆ ಸ್ಟಾರ್ಟ್ ಕಾರ್ಡ್ ವಿತರಣೆ ಮತ್ತು ನಾನಾ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಮಿಕರು.

ಕಾರ್ಮಿಕರಿಗೆ ಮಸೂದೆ

ಆನ್‌ಲೈನ್ ಆ್ಯಪ್ ಮೂಲಕ ಆಮೇಜಾನ್, ಫಿಪ್ ಕಾರ್ಡ್, ಸ್ವೀಗ್ಲಿ, ಜೂಮ್ಯಾಟೋದಂತಹ ಕಂಪನಿಗಳಲ್ಲಿ ನೋಂದಾಯಿಸಿಕೊಂಡು ಟ್ರಾನ್ಸ್ ಸ್ಪೋರ್ಟ್ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ರಾಜ್ಯ ಸರಕಾರ ವಿಶೇಷವಾದ ಮಸೂದೆ ತಂದಿದೆ. ರಾಜ್ಯದಲ್ಲಿ ಇಂತಹ ಸಮರ್ಪಕವಾದ ಬಲ್ ಜಾರಿಗೆ ತಂದಿರುವುದು ದೇಶದಲ್ಲಿ ಎಲ್ಲಿಯೂ ಇಲ್ಲ. ಇದರ ಜತೆಗೆ ಸಿನಿ ಬಿಲ್ ತಂದಿದ್ದು, ಸಿನಿಮಾ ಕ್ಷೇತ್ರದಲ್ಲಿ ದುಡಿಯುವ ಮೇಕಪ್ ಆರ್ಟಿಸ್ಟ್, ಡ್ಯಾನ್ಸರ್, ಪೋಷಕ ಕಲಾವಿದರು, ಪೌರಾಣಿಕ ನಾಟಕಗಳು ಮತ್ತು ಗ್ರಾಮ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿರುವ ಹಲವಾರು ಕಲಾವಿದರಿಗೆ ಇದರಿಂದ ಅನುಕೂಲವಾಗಲಿದೆ,'' ಎಂದು ಸಚಿವರು ಹೇಳಿದರು.

ಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ, ಕಾರ್ಮಿಕ ಇಲಾಖೆ ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ. ವೆಂಕಟೇಶ ಶಿಂಧಿಹಟ್ಟಿ ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮಹ್ಮದ್

ಬಶೀರ್ ಅನ್ಸಾರಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ, ಮುತ್ತುರಾಜ ಕುಷ್ಟಗಿ, ಕೊಪ್ಪಳ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಸುಧಾ ಗರಗ, ಕಾರ್ಮಿಕ ನಿರೀಕ್ಷಕರಾದ ಕೊಪ್ಪಳ ವೃತ್ತದ ಮಂಜುಳಾ ವಿಶ್ವನಾಥ, ಗಂಗಾವತಿ ವೃತ್ತದ ಎಂ.ಅಶೋಕ, ಕುಷ್ಟಗಿ ವೃತ್ತದ ನಿವೇದಿತಾ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಇತರರು ಇದ್ದರು

ವಿಚಾರ, ನಾನು ವೈಯಕ್ತಿಕವಾಗಿ ಯಾರು ಬಗ್ಗೆ ಮಾತನಾಡಲ್ಲ, ಸೈದ್ಧಾಂತಿಕವಾಗಿ ವಿಚಾರಧಾರ ವ್ಯಕ್ತಪಡಿಸಿರಬಹುದು. ಅದಕ್ಕೆ ಪ್ರತಾಪ ಸಿಂಹ ಏನಾದರೂ ಅಂದಿದ್ದರೇ ಅವರ ಬಗ್ಗೆ ನಾನು ಏನು ಮಾತನಾಡಲ್ಲ ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ 56 ಲಕ್ಷ ಲೇಬರ್ ಕಾರ್ಡ್ಗಳಿದ್ದವು. ಇದರಲ್ಲಿ ಪರಿಶೀಲನೆ ನಡೆಸಿ, 20 ಲಕ್ಷ ಕಾರ್ಡ್ ರದ್ದು ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಶೀಲನೆ ನಡೆಸಿ, ನಿಜವಾದ ಕಾರ್ಮಿಕರಿಗೆ ಮಾತ್ರ ಕಾರ್ಮಿಕರ ಕಾರ್ಡ್ ಕೊಡಲಾಗುವುದು,'' ಎಂದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. "ಆಂಧ್ರದ ಚಂದ್ರಬಾಬು ನಾಯ್ಡು ಬಾವುಟ ಅಲ್ಲಾಡಿಸಿದರೆ ಬಿಜೆಪಿ ನೇತೃತ್ವದ ಸರಕಾರವೇ ಕೇಂದ್ರದಲ್ಲಿರುವುದಿಲ್ಲ, ಇದನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಬಿಟ್ಟು ಬಿಜೆಪಿಗರು, ಸುಖಾಸುಮನೆ ರಾಜ್ಯದಲ್ಲಿ ಸರಕಾರದಲ್ಲಿ ಸಿಎಂ ಬದಲಾವಣೆಯಾಗುತ್ತದೆ ಎನ್ನುವ ಕೂಗು ಎಬ್ಬಿಸುತ್ತಿರುವುದು ಸರಿಯಲ್ಲ,'' ಎಂದರು.

"ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರ ವಾಗಿದ್ದರೇ ಪ್ರತ್ಯೇಕ ದೂರು ಕೊಟ್ಟರೇ ಖಂಡಿತ ಪರಿಶೀಲಿಸಿ, ಕ್ರಮ ಜರುಗಿಸಲು ಮೊದಲ ಆದ್ಯತೆ ನೀಡಲಾಗುವುದು,'' ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಸಭೆ ಸದಸ್ಯರಾದ ಆಕ್ಟರ್ ಪಾಷಾ ಪಲ್ಟನ್, ಮುತ್ತು ಕುಷ್ಟಗಿ,
ನಜಿರ್ ಸಾಬ ಮುಲಿಮನಿ
ಗುರುರಾಜ್ ಹಲಗೇರಿ, ಮುಖಂಡರಾದ ಶೈಲಜಾ ಹಿರೇಮಠ, ಕಿಶೋರಿ
ಇತರರಿದ್ದರು
'ಇನ್ಮುಂದೆ ಟೆಂಗಿನಕಾಯಿಗೂ ಜಿಎಸ್‌ಟಿ'

ಮಲ್ಲು ಪೂಜಾರ ಸೇರಿದಂತೆ ಇತರರು ಇದ್ದರು.

ಕೊಪ್ಪಳ: ಯಾರಾದರೂ ಸತ್ತಾಗ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಕಾಯಿಗೂ ಇನ್ನು ೦ದೆ ಕೇಂದ್ರ ಸರಕಾರ ಜಿಎಸ್‌ಟಿ ಹಾಕಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವ್ಯಂಗ್ಯವಾಡಿದರು.

ನಗರದಲ್ಲಿ ಆಯೋಜಿಸಿದ್ದ ಕಾರ್ಮಿಕರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವಸ್ತುವಿನ ಮೇಲೆ ಕೇಂದ್ರ ಸರಕಾರ ತೆರಿಗೆ ಹಾಕಲು ಹೊರಟಿದೆ. ಈಚೆಗೆ ಬೆಂಗಳೂರಿನಲ್ಲಿ ಪುಟ್ ಪಾತ್ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟುವಂತೆ ತೆರಿಗೆ ಇಲಾಖೆ

ನೋಟಿಸ್ ಕೊಟ್ಟಿದೆ. ಇವೆಲ್ಲ ಕೇಂದ್ರ ಸರಕಾರ ಜಾರಿ ಮಾಡಿರುವ ಜಿಎಸ್ಟಿಯ ಫಲ ಎಂದು ಕುಟುಕಿದರು.

ತಿನ್ನುವ ಪ್ರತಿ ಆಹಾರದ ಮೇಲೆ ಈಗಾಗಲೇ ಕೇಂದ್ರ ಸರಕಾರ ಜಿಎಸ್ಟಿ ಹಾಕಿದೆ. ಆದರಂತೆ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸತ್ತವರ ಮುಂದೆ ಪೂಜೆಗೆ ಹೊಡೆಯುವ ಕಾಯಿಗೂ ಜಿಎಸ್‌ಟಿ ಮೃತಪಟ್ಟವರ ಮನೆಯಿಂದಲೂ ಹಣ ಕೀಳುವ ಕೆಲಸ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡಲಿದೆ ಎಂದು ಆರೋಪಿಸಿದರು.

10
323 views