logo

ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದ ಗೌರಿಬಿದನೂರು ತಾಲ್ಲೂಕು ಆಡಳಿತ ಸೌಧ.

ಇದು ಕಂಡುಬಂದಿದ್ದು
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಮಿನಿ ವಿಧಾನಸೌಧದಲ್ಲಿ

ಶೌಚಾಲಯದಲ್ಲಿ ನೀರಿನ ಕೊರತೆ
ಮತ್ತು ಸ್ವಚ್ಛತೆ ಇಲ್ಲದೆ ಗಬ್ಬು ವಾಸನೆ
ಕುಡಿಯುವ ನೀರಿನ ಅಭಾವ
ಕಟ್ಟಡದ ಸುತ್ತಮುತ್ತ
ಗಿಡಗೆಂಟೆಗಳು ಬೆಳೆದಿರುವುದು.
ಆವರಣದ ಸುತ್ತಮುತ್ತ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು.
ಡೆಂಗ್ಯೂ ಸೊಳ್ಳೆಗಳ
ಉಗಮ ಸ್ಥಾನವೇ ಆಗಿ ಹೋಗಿದೆ

ತಾಲ್ಲೂಕಿನ ಆಡಳಿತ ಸೌಧವು ತಾಲ್ಲೂಕು ದಂಡಾಧಿಕಾರಿಗಳ ಕೇಂದ್ರ ಸ್ಥಾನ ವಾಗಿರುವ ಕಟ್ಟಡದಲ್ಲಿ ಸಾಮಾನ್ಯ ಸಾರ್ವಜನಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದು ನಾಚಿಕೆಗೇಡಿನ ಸಂಗತಿ
ಹಾಗೂ ತಾಲ್ಲೂಕು ಆಡಳಿತಕ್ಕೆ ಮುಜುಗರ ತರುವಂತಹ ವಿಷಯ.

ಇದೇ ಕಟ್ಟಡದಲ್ಲಿ ಶಾಸಕರ ಕೊಠಡಿ ಹಾಗೂ ಡಾ.ಎಚ್ ಎನ್.ಪ್ರಾಧಿಕಾರದ ಅಧ್ಯಕ್ಷರ ಕೊಠಡಿ ಇದ್ದು.
ಇನ್ನು ಹಲವಾರು ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳ ಕೇಂದ್ರ ಸ್ಥಾನವಾಗಿದೆ.

ಇಲ್ಲಿಗೆ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಾರೆ.
ಸಾರ್ವಜನಿಕರಿಗೆ ಸರಿಯಾದ
ಮೂಲಭೂತ ಸೌಕರ್ಯಗಳು
ನೀಡದ ತಾಲ್ಲೂಕು ಆಡಳಿತಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ತಿಂಗಳ 15 ತಾರೀಕು ಬಂದರೆ ಸಾಕು
ಸಾಮಾನ್ಯ ಜನರ ವಿದ್ಯುತ್ ಸಂಪರ್ಕ ಕಟ್ ಮಾಡುವ ಬೆಸ್ಕಾಂನವರು.

ತಾಲ್ಲೂಕು ಆಡಳಿತ ಸೌಧದ
ಸುಮಾರು 38 ಲಕ್ಷ ಬಿಲ್ ಬಾಕಿ ಉಳಿದಿದ್ದು
ಇದರ ಬಗ್ಗೆ ಹಿರಿಯ ಅಧಿಕಾರಿಗಳು
ಗಮನಹರಿಸಬೇಕು
ಎನ್ನುವುದು ಸಾರ್ವಜನಿಕರ ಮನವಿ.

35
3441 views