logo

ಉಚಿತ ಆರೋಗ್ಯ ತಪಾಸಣೆ ಬಡವರಿಗೆ ಅನುಕೂಲ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ

ಬ್ಯಾಡಗಿ ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಬ್ಯಾಡಗಿ, ಇನ್ನರ್ವಿಲ್ ಕ್ಲಬ್ ಬ್ಯಾಡಗಿ ಮತ್ತು ಎಸ್ ಎಸ್ ನಾರಾಯಣ ಹೆಲ್ತ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಉಚಿತವಾಗಿ ಇಸಿಜಿ, 2ಡಿ ಇಕೋ ಸ್ಕ್ಯಾನಿಂಗ್ ಮತ್ತು ಹೃದಯ ರೋಗ ತಜ್ಞರೊಂದಿಗೆ ಉಚಿತ ಸಮಲೋಚನೆ ಸೌಲಭ್ಯ ನೀಡಲಾಯಿತು. ಈ ಶಿಬಿರದಲ್ಲಿ 130 ಜನ ಸಾರ್ವಜನಿಕರು ಶಿಬಿರದ ಉಪಯೋಗ ಪಡೆದರು ಸುಮಾರು 22 ಜನರಿಗೆ ಹೆಚ್ಚಿನ ಪರೀಕ್ಷೆಗೆ ಶಿಫಾರಸು ನೀಡಿದರು ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಪುಟ್ಟಪ್ಪ ಉಪ್ಪಾರ ಮಾತನಾಡಿ ನಮ್ಮ ಭಾಗದ ಪ್ರಖ್ಯಾತ ಆಸ್ಪತ್ರೆಯಾದ ಎಸ್ ಎಸ್ ನಾರಾಯಣ ಆಸ್ಪತ್ರೆಯಿಂದ ಇಂದು ಈ ಉಚಿತ ಹೃದಯ ತಪಾಸಣಾ ಶಿಬಿರ ಏರ್ಪಡಿಸಿದ್ದು ಪಟ್ಟಣದ ಜನರಿಗೆ ಬಹಳ ಅನುಕೂಲಕರ ವಾಗಿದೆ ಇಂದಿನ ಶಿಬಿರದಲ್ಲಿ ಪಡೆದ ಉಚಿತ ಸೌಲಭ್ಯಗಳು ಅದೇ ಆಸ್ಪತ್ರೆಯಲ್ಲಿ ದಾವಣಗೆರೆಯಲ್ಲಿ ಹೋಗಿ ಪಡೆದರೆ ಸುಮಾರು 3000 ಒಬ್ಬರಿಗೆ ವೆಚ್ಚವಾಗುವುದು ಇಂತಹ ಸೌಲಭ್ಯ ನಮ್ಮ ಪಟ್ಟಣದಲ್ಲಿಯೇ ಪ್ರಖ್ಯಾತ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಯಿಂದಲೇ ನಾವಿದ್ದ ಸ್ಥಳದಲ್ಲಿಯೇ ಉಚಿತವಾಗಿ ಇಂದು ಸುಮಾರು 3 ಲಕ್ಷ ರೂಗಳ ಮೌಲ್ಯದ ಸೇವೆ ಲಭಿಸಿದೆ ರೋಟರಿ ಸಂಸ್ಥೆಯಿಂದ ಇಂತಹ ಸಾಕಷ್ಟು ಉಚಿತ ಆರೋಗ್ಯ ಶಿಬಿರಗಳು ಪ್ರತಿ ವರ್ಷ ನಡೆಯುತ್ತವೆ ಪಟ್ಟಣದ ಸಾರ್ವಜನಿಕರು ಇನ್ನೂ ಹೆಚ್ಚಾಗಿ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಉಚಿತ ಸೇವೆಗಳನ್ನು ಪಡೆದು ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ಮಾಲತೇಶ ಅರಳಿಮಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಹೃದಯ ರೋಗ ತಜ್ಞವೈದ್ಯರಾದ ಡಾ ರಾಕೇಶ ಟಿ ಮಾತನಾಡಿ ರೋಟರಿಯವರ ಕೋರಿಕೆ ಮೇರೆಗೆ ಹಲವು ಲಕ್ಷಗಳ ಆರೋಗ್ಯ ಸೇವೆ ಉಚಿತವಾಗಿ ಬ್ಯಾಡಗಿ ತಾಲೂಕಿನ ಜನರಿಗೆ ಲಭಿಸಿದೆ ಹೃದಯ ರೋಗ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರಿಸಿ ಅದರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ಕ್ರಮ ವಿವರಿಸಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಮಾಜಿ ಸೈನಿಕರಿಗೆ ಸನ್ಮಾನ ನಡೆಯಿತು. ಶಿಬಿರದ ಕೊನೆಯಲ್ಲಿ ಮಾನ್ಯ ಶಾಸಕರು ಶ್ರೀ ಬಸವರಾಜ ಶಿವಣ್ಣನವರ ಆಗಮಿಸಿ ರೋಟರಿ ಉತ್ತಮ ಸೇವಾಕಾರ್ಯ ಎಂದು ಅಭಿನಂದಿಸಿದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ , ಇನ್ನರ್ ವ್ಹೀಲ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಮತ್ತು ಸದಸ್ಯರಾದ ಪರಶುರಾಮ ಮೇಲಗಿರಿ, ಆನಂದಗೌಡ ಸೋರಟೂರ, ಕಿರಣ ಮಾಳೇನಹಳ್ಳಿ, ಮಂಜುನಾಥ ಉಪ್ಪಾರ, ರಮೇಶ ಕಲ್ಯಾಣಿ, ಸತೀಶ ಅಗಡಿ, ಶಿವರಾಜ ಚೂರಿ, ಬಸವರಾಜ ಸುಂಕಾಪುರ, ಮಾಲತೇಶ ಅರಳಿಮಟ್ಟಿ, ಪವಾಡಪ್ಪ ಆಚನೂರ, ಸಿದ್ದಲಿಂಗೇಶ ಮಾಳೇನಹಳ್ಳಿ, ವಿಶ್ವನಾಥ ಅಂಕಲಕೋಟಿ, ಇನ್ನರ್ ವ್ಹೀಲ್ ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ, ಪುಷ್ಪಾ ಇಂಡೀಮಠ, ಸಂಧ್ಯಾರಾಣಿ ದೇಶಪಾಂಡೆ, ಗೀತಾ ಎಲಿ, ವಿಜಯಲಕ್ಷ್ಮಿ ಪಾಟೀಲ, ಎಸ್ ಎಸ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಾದ ಸುರೇಶ ಗುಂಡಪಲ್ಲಿ, ಮಹೇಶ ಭಜಂತ್ರಿ ಇನ್ನಿತರರು ಉಪಸ್ಥಿತರಿದ್ದರು

22
6242 views