logo

'ಶ್ರೀ ಸಾನಿಧ್ಯ ಫಿಲಂಸ್'ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುವ 'ಪ್ರೊಡಕ್ಷನ್ ನಂಬರ್ ಒನ್ ' ಕನ್ನಡ ಸಿನಿಮಾ ತಂಡದಿಂದ ಮಂಗಳೂರಿನ ಕುತ್ತಾರು ಶ್ರೀ ಕೊರಗಜ್ಜ ಸನ್ನಿದಿಯಲ್ಲಿ ವಿಶೇಷ ಪ್ರಾರ್ಥನೆ

'ಶ್ರೀ ಸಾನಿಧ್ಯ ಫಿಲಂಸ್' ಪ್ರೊಡಕ್ಷನ್ ಹೌಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗಲಿರುವ 'ಪ್ರೊಡಕ್ಷನ್ ನಂಬರ್ ಒನ್ ' ಕನ್ನಡ ಸಿನಿಮಾದ ಪೂರ್ವಭಾವಿ ಸಿದ್ಧತೆಯ ಪ್ರಯುಕ್ತ, ಚಿತ್ರದ ನಿರ್ಮಾಪಕರಾದ ಎಸ್.ಕೆ. ಶೆಟ್ಟಿ ಮಂಗಳೂರು ಹಾಗೂ ಅವರ ಸಿನಿಮಾ ತಂಡದವರು ಮಂಗಳೂರಿನ ಕುತ್ತಾರು ಶ್ರೀ ಕೊರಗಜ್ಜನ ಸನ್ನಿಧಿಯಲ್ಲಿ ಪೂಜೆಯನ್ನು ಸಲ್ಲಿಸಿದರು.ಪೂಜೆಯ ವೇಳೆ ಕನ್ನಡ ಚಲನಚಿತ್ರ ನಟರು ಹಾಗೂ ನಿರ್ಮಾಪಕರಾದ ಜಿ.ಎಂ. ನಾಗರಾಜ್ ಚಿಕ್ಕಬಳ್ಳಾಪುರ ರವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಹಾಗೂ ಮುಖ್ಯ ಅತಿಥಿಗಳಾಗಿ ಕೊರಗಜ್ಜ ಸಾನಿಧ್ಯದ ಟ್ರಸ್ಟಿನ ಉಪಾಧ್ಯಕ್ಷರಾದ ಡಿ. ಮಹಾಬಲ ಹೆಗ್ಡೆ ದೆಬ್ಬೆಲಿ ಹಾಗೂ ಟ್ರಸ್ಟಿ ದೇವಿಪ್ರಸಾದ್ ಶೆಟ್ಟಿ ಮಾಗಂದಾಡಿ ರವರು ಶುಭಾಶಯಗಳನ್ನು ಕೋರಿದರು.ಈ ಸಂಧರ್ಭದಲ್ಲಿ ಚಲನಚಿತ್ರ ತಂಡದ ಸುರೇಶಬಾಬು ಮಾಣಿ, ನರಸಿಂಹಪ್ಪ ಚಿಂತಾಮಣಿ ಹಾಗೂ ಜಿ.ಎನ್. ಜೀವನ್ ಕುಮಾರ್ ಚಿಕ್ಕಬಳ್ಳಾಪುರ ಇವರು ಉಪಸ್ಥಿತರಿದ್ದರು.
'ಪ್ರೊಡಕ್ಷನ್ ನಂ.1' ಸಿನಿಮಾದ ಚಿತ್ರೀಕರಣವು ಆಗಸ್ಟ್ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು, ಮಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ನುರಿತ ತಂತ್ರಜ್ಞರನ್ನು ಚಿತ್ರೀಕರಣ ತಂಡವು ಒಳಗೊಂಡಿದ್ದು, ಉತ್ತಮವಾದ ಕಥಾಹಂದರವನ್ನು ಒಳಗೊಂಡಿದೆ

27
110 views