logo

ಗೌರಿಬಿದನೂರು ತಾಲೂಕಿನ ತೊಂಡೆಬಾವಿ ವಲಯದ ಮಲಸಂದ್ರ ಕಾರ್ಯಕ್ಷೇತ್ರ ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ.

ಗೌರಿಬಿದನೂರು ತಾಲೂಕಿನ ತೊಂಡೆಬಾವಿ ವಲಯದ ಮಲಸಂದ್ರ ಕಾರ್ಯಕ್ಷೇತ್ರ ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ. ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ 400 ಹಣ್ಣಿನ ಗಿಡಗಳ ವನದ ನಾಮಫಲಕದ ಅನಾವರಣವನ್ನು. ಸನ್ಮಾನ್ಯ ಶಾಸಕರಾಗಿರುವ ಶ್ರೀಯುತ ಪುಟ್ಟಸ್ವಾಮಿಗೌಡರವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿಗಳಾಗಿರುವ ಶ್ರೀಮತಿ ಹಂಸವಿ R. ಹಾಗೂ ಶ್ರೀಯುತ ಚಂದ್ರಶೇಖರ್ ರೆಡ್ಡಿ . ಮತ್ತು ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಸಿದ್ದಾರ್ಥ ಸ್ವಾಮಿ ಮತ್ತು ಗೌರಿಬಿದನೂರು ತಾಲೂಕಿನ ಯೋಜನಾಧಿಕಾರಿಗಳಾಗಿರುವ ಶ್ರೀಯುತ ನಾಗರಾಜ ನಾಯಕ್. ರವರು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯರು ಶ್ರೀಮತಿ ಲಕ್ಷ್ಮಿ ರವರು ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರವರು. ನರಸಿಂಹಮೂರ್ತಿ ಮತ್ತು ಕೃಷಿ ಮೇಲ್ವಿಚಾರಕರು ಕುಬೇರ್ ನಾಯಕ್ ಲೆಕ್ಕಪರಿಶೋಧಕರು ರವಿತೇಜ ಮತ್ತು ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಮತ್ತು ಶಾಲೆಯ ಎಲ್ಲಾ ಸಹ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು

57
2471 views