logo

ಅಕ್ರಮವಾಗಿ ಸಾಗಣೆ 30 ಇಂಡಿಯನ್ ನಕ್ಷತ್ರ ಆಮೆಗಳ ರಕ್ಷಣೆ

ಅಕ್ರಮವಾಗಿ ಸಾಗಣೆ 30 ಇಂಡಿಯನ್ ನಕ್ಷತ್ರ ಆಮೆಗಳ ರಕ್ಷಣೆ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿಯಿಂದ ಮಲೇಷ್ಯ ದೇಶದ ಕೌಲಲಂಪುರಕ್ಕೆ ನಗರಕ್ಕೆ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಅಕ್ರಮವಾಗಿ 30 ಜೀವಂತ ಇಂಡಿಯನ್ ನಕ್ಷತ್ರ ಆಮೆಗಳನ್ನು ಸಾಗಿಸುತ್ತಿದ್ದ ಮಾಹಿತಿ ಮೆರೆಗೆ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿ, 30 ನಕ್ಷತ್ರ ಆಮೆಗಳನ್ನು ರಕ್ಷಿಸಲಾಗಿದೆ.

ಡಾ. ಸಂತೋಷ್ ಕುಮಾರ್,ಜಿ, ಭಾ.ಅ.ಸೇ, ಇವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ, 30 ನಕ್ಷತ್ರ ಆಮೆಗಳನ್ನು ರಕ್ಷಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿ ಪ್ರಕರಣ ದಾಖಲಿಸಿ, ತಮಿಳುನಾಡು ಮೂಲದ ವ್ಯಕ್ತಿಯನ್ನು ಘನ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ದೊಡ್ಡಬಳ್ಳಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ನಿಜಾಮುದ್ದಿನ್, ದೇವನಹಳ್ಳಿ ವಲಯ ಅರಣ್ಯಅಧಿಕಾರಿ ನಾಗಾರ್ಜುನ್.ಎನ್, ಉಪವಲಯ ಅರಣ್ಯಅಧಿಕಾರಿ ಶಿವಶಂಕರ್.ಕೆ, ಮೋಜಣಿದಾರ, ದೇವನಹಳ್ಳಿ ಶಾಖೆಯ ನಿಖಿಲ್ ಪವಾರ್, ಗಸ್ತು ಅರಣ್ಯ ಪಾಲಕ ಹಾಗೂ ಸಿದ್ದಲಿಂಗ ಯಲಕಾರ್,ಗಸ್ತು ಅರಣ್ಯ ಪಾಲಕ ರವರು ಭಾಗವಹಿಸಿದ್ದರು.

ವರದಿ: ಹೈದರ್ ಸಾಬ್, 9743784848

ಚಿತ್ರ:

123
2540 views