ಸುಭಾಷ್ ವೃತ್ತಕ್ಕೆ ದೊಡ್ಡ ಹೈಮಾಸ್ಕ್ ದೀಪ ಅಳವಡಿಸಲು ಕರವೇ ಮನವಿ
ಯಾದಗಿರಿ : ನಗರದ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ದೊಡ್ಡ ಹೈಮಾಸ್ಕ್ ದೀಪ ಅಳವಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣ ಯಾದಗಿರಿ ಜಿಲ್ಲಾ ಅಧ್ಯಕ್ಷ ಸಿದ್ದುರಡ್ಡಿ ತಂಗಡಗಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ನಗರದ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ರಾಜ್ಯ ಹೆದ್ದಾರಿ ಇದ್ದು, ಚಿತ್ತಾಪೂರ ಮುಖ್ಯ ರಸ್ತೆ ಇದ್ದು, ಜಿಲ್ಲಾಡಳಿತ ಭವನಕ್ಕೆ ಬರುವ ರಸ್ತೆಯಾಗಿದ್ದು, ಮೂರು ರಸ್ತೆಗಳು ಕೂಡಿದ್ದು, ಇಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ. ಇಲ್ಲಿ ವೇಗ ತಡೆಯಲು ಹಂಸ್‌ಗಳು ಹಾಕಿ ಹಾಗೂ ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆಗಾಗಿ ದೊಡ್ಡ ಹೈಮಾಸ್ಕ್ ದೀಪ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಧಿಕಾರಿಗೆ ಮನವಿ ಮಾಡಿಕೊಂಡರು.
ನಂತರ ನೂತನ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರುದ್ರಲಿಂಗ ತೆಳಿಗೇರಿ,ಕುಮಾರ್ ಎಸ್.ತೆಳಿಗೇರಿ,ಸಾಬಣ್ಣ ಬಜೇಂತ್ರಿ, ಭೀಮಣ್ಣ ಪೂಜಾರಿ, ಖಾಸಿಂ ಪಟೇಲ್,ನಾಗು ಭೇಟಿ, ಸಿದ್ದು ಬಜೆಂತ್ರಿ,ಭೀಮು ಮಳ್ಳಹಳ್ಳಿ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಭಾಗಿಯಾಗಿದರು.