
ಹರ್ ಗರ್ ತಿರಂಗಾ ಅಭಿಯಾನಕ್ಕೆ ಶಿರಾದಲ್ಲಿ ಪೂರ್ವಭಾವಿ ಸಭೆ
ಭಾರತೀಯ ಜನತಾ ಪಕ್ಷ ಮಧುಗಿರಿ ಸಂಘಟನಾ ಜಿಲ್ಲೆ ವತಿಯಿಂದ ಸಭೆ
ಶಿರಾ:
ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುವ ಹರ್ ಗರ್ ತಿರಂಗಾ ಅಭಿಯಾನದ ಪ್ರಚಾರಕ್ಕಾಗಿ, ಭಾರತೀಯ ಜನತಾ ಪಕ್ಷ ಮಧುಗಿರಿ ಸಂಘಟನಾ ಜಿಲ್ಲೆ ವತಿಯಿಂದ ಶಿರಾ ನಗರದ ಸೇವಾಸದನದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಗೆ ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಮಧುಗಿರಿ ಸಂಘಟನಾ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಚಿದಾನಂದ ಎಂ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ತಿರಂಗಾ ನಮ್ಮ ರಾಷ್ಟ್ರದ ಘನತೆ, ಪ್ರತಿಷ್ಠೆ. ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ತಿರಂಗಾ ಹಾರಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಎಲ್ಲವೂ ಯಶಸ್ವಿಯಾಗಿ ನಡೆಸಬೇಕು," ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಪ್ರಮುಖ ನಾಯಕರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ನಗರ ಮಂಡಲ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈರಣ್ಣ ಪಟೇಲ್, ಮಾಜಿ ತಾ.ಪಂ ಸದಸ್ಯ ಚಿಕ್ಕಣ್ಣ, ಮಹಿಳಾ ಮೋರ್ಚಾ ಅಧ್ಯಕ್ಷರು ಉಮಾ ವಿಜಯರಾಜ್, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಾಗೋಡ್ ಪ್ರತಾಪ್, ಯುವ ಮೋರ್ಚಾ ಅಧ್ಯಕ್ಷ ಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಅರುಣ್, ಮಧುಗಿರಿ ಪ್ರಧಾನ ಕಾರ್ಯದರ್ಶಿ ರಮೇಶ್, ತಾಲೂಕು ಉಪಾಧ್ಯಕ್ಷರು ನಾಗರಾಜ್ ಗೌಡ, ಬಪ್ಪರಾಯಪ್ಪ, ಕೃಷ್ಣೆಗೌಡರು, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ನಗರ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಮಾಲತೇಶ್, ತಾಲೂಕು ಓಬಿಸಿ ಅಧ್ಯಕ್ಷ ಗೌಡಪ್ಪ, ಯುವ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ಹರೀಶ್, ನಗರ ಯುವ ಮೋರ್ಚಾ ಅಧ್ಯಕ್ಷ ಸ್ನೇಹ ಪ್ರಿಯ ಶಿವು, ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗರತ್ನಮ್ಮ, ಎಸ್ಸಿ ಮೋರ್ಚಾ ಅಧ್ಯಕ್ಷ ಗುರುಲಿಂಗಪ್ಪ, ಲಿಂಗರಾಜು, ಗೋಪಿ, ಕುಮಾರು ಮಾಷ್ಟ್ರು, ಬೇಕರಿ ರಾಮು, ಸೈಯದ್, ಕವಿತಾ, ಪದ್ಮ ಮಂಜುನಾಥ್, ಶೋಭಾ, ಧೀರೇಶ್, ಕೃಷ್ಣಮೂರ್ತಿ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯಲ್ಲಿ ತಿರಂಗಾ ಅಭಿಯಾನದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಯಿತು ಹಾಗೂ ಜಿಲ್ಲೆಯಾದ್ಯಂತ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.