logo

ತಿಪಟೂರು ಅರಳಗುಪ್ಪೆ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ ಕರ್ಮಕಾಂಡ – ಕಳಪೆ ಆಹಾರದಿಂದ ಆರು ಮಕ್ಕಳು ಅಸ್ವಸ್ಥ

ತಿಪಟೂರು: ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಇಂದಿರಾ ಗಾಂಧಿ ವಸತಿ ಶಾಲೆಯ ಕಳೆಪೆ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಸರ್ಕಾರ ಪ್ರತಿವರ್ಷ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಹಾಗೂ ಮಕ್ಕಳಿಗೆ ಶಿಕ್ಷಣ ಹಾಗೂ ವಸತಿ ಸೌಲಭ್ಯ ದೊರೆಯಬೇಕು ಎನ್ನುವ ಮಹದಾಸೆಯೊಂದಿಗೆ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಸುಸಜ್ಜಿತವಾದ ಕಟ್ಟಡ ಹಾಗೂ ಸೌಕರ್ಯಗಳನ್ನ ಒದಗಿಸಿದೆ, ಆದರೆ ವಸತಿ ಶಾಲೆಯ ಪ್ರಾಚಾರ್ಯರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯ ಪರಿಣಾಮ ವಸತಿ ಶಾಲೆ ಅವ್ಯವಸ್ಥೆಗಳ ಆಗರವಾಗಿದ್ದು, ಹಾಸ್ಟೆಲ್ ನಲ್ಲಿ ಕಳೆಪೆ ಗುಣಮಟ್ಟದ ಆಹಾರ ಸೇವಿಸಿ, ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದಾರೆ. ಆಗಸ್ಟ್ 04ರಾತ್ರಿ ಆಹಾರ ಸೇವಿಸಿದ ಮಕ್ಕಳಲ್ಲಿ ವಾಂತಿ ಹಾಗೂ ಬೇದಿ ಕಾಣಿಸಿಕೊಂಡಿದು,ಅಸ್ಪಸ್ಥಗೊಂಡ ಮಕ್ಕಳನ್ನ ವಸತಿ ಶಾಲೆ ಸಿಬ್ಬಂದಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿದು, ಮಕ್ಕಳು ಆರೋಗ್ಯವಾಗಿದ್ದಾರೆ.
ಗುಣಮಟ್ಟದ ಸವಲತ್ತು ನೀಡ ಬೇಕಾದ ವಸತಿ ಶಾಲೆ ಅವ್ಯವಸ್ಥೆಗಳ ಆಗರವಾಗಿದೆ.ಕೊಳೆತು ನಾರುವ ಶೌಚಾಲಯಗಳು, ಇಲಿ.ಹೆಗ್ಗಣಗಳಿಂದ ತುಂಬಿದ ಆಹಾರ ದಾಸ್ತಾನು ಕೊಠಡಿ .ಎಲ್ಲಂದರಲ್ಲಿ ಕಾಣಸಿಗುವ ಕಸಕಡ್ಡಿಗಳ ರಾಶಿ, ವಸತಿ ಶಾಲೆಗೆ ಹಿಡಿದ ಕೈಗನ್ನಡಿಯಾಗಿದೆ. ಶಾಲೆಯಲ್ಲಿ ಸರಿಯಾಗಿ ಪಾಠ ಮಾಡುವುದಿಲ್ಲ, ಅನಾಗತ್ಯವಾಗಿ ಶಿಕ್ಷಕರು,ಗೈರಾಗುತ್ತಾರೆ ವಸತಿಶಾಲೆಯ ಅವ್ಯವಸ್ಥೆಯ ಕೇಳೋರು ಹೇಳೋರು ಇಲ್ಲ ಅನೋದು ಸ್ಥಳೀಯರ ಆಕ್ರೋಶವಾಗಿದೆ.ಇನ್ನೂ ವಸತಿ ಶಾಲೆಯಲ್ಲಿ ಊಟದ ವ್ಯವಸ್ಥೆ ಸರಿಇಲ್ಲ ಎಂದು ಮಕ್ಕಳು ಪ್ರಚಾರ್ಯರು ಹಾಗೂ ಅಡುಗೆ ಸಿಬ್ಬಂದಿಗೆ ಹೇಳಿದರೆ ವಿದ್ಯಾರ್ಥಿಗಳನ್ನ ಹೊಡೆಯುತ್ತಾರೆ ಮನಬಂದಂತೆ ಬೈಯುತ್ತಾರೆ ಎನ್ನೂದು ತಂದೆ ತಾಯಿಗಳಿಂದ ದೂರವಿದ್ದು ವಿದ್ಯಾಭ್ಯಾಸ ಮಾಡುವ ಮಕ್ಕಳ ಮನಕಲಕುಮಾತು.ಅರಳಗುಪ್ಪೆ ವಸತಿಶಾಲೆಯಲ್ಲಿ ಒಟ್ಟು 220 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಪ್ರತಿ ವರ್ಷ ವಸತಿ ಶಾಲೆ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದರೂ, ಸಿಬ್ಬಂದಿಯ ಬೇಜವಾಬ್ದಾರಿಗೆ, ಮಕ್ಕಳು ಪರಿತಪಿಸುವಂತ್ತಾಗಿದೆ. ವಸತಿ ಶಾಲೆಯ ಆರು ಮಕ್ಕಳು ಕಳಪೆ ಆಹಾರ ಸೇವಿಸಿ ಅಸ್ವಸ್ಥಗೊಂಡ ವಿಷಯ ತಿಳಿದ ತಕ್ಷಣ ತಿಪಟೂರು ಉಪವಿಭಾಗಾಧಿಕಾರಿ ಶ್ರೀ ಮತಿ ಸಪ್ತಶ್ರೀ, ತಹಸೀಲ್ದಾರ್ ಮೋಹನ್ ಕುಮಾರ್, ಇಓ ಸುದರ್ಶನ್. ಸಮಾಜಕಲ್ಯಾಣಾಧಿಕಾರಿ ತ್ರಿವೇಣಿ.ಸೇರಿದಂತೆ ಇನ್ನಿತರ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿದ ವೇಳೆ ವಸತಿ ಶಾಲೆಯ ಅವ್ಯವಸ್ಥೆ ಕಂಡು ಅಧಿಕಾರಿಗಳೇ ದಿಗ್ಬ್ರಮೆಗೊಂಡ. ಘಟನೆಯೂ ನಡೆಯಿತು, ಅಧಿಕಾರಿಗಳಿಗೆ ಕೊಳೆತು ನಾರುವ ಶೌಚಾಲಯ , ಆಹಾರ ದಾಸ್ತನು ಕೊಠಡಿಯಲ್ಲಿ ಇಲಿಪಿಸಗಿ, ಅಕ್ಕಿ ಹಾಗೂ ಬೇಳೆಯಲ್ಲಿ ಹುಳುಗಳನ್ನ ಕಂಡು ಅಧಿಕಾರಿಗಳು ಇಂದಿರಾ ಗಾಂಧಿ ವಸತಿಶಾಲೆ ಪ್ರಾಚಾರ್ಯೇ ಭಾಗ್ಯಜ್ಯೋತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ವಸತಿ ಶಾಲೆ ಅಧಿಕಾರಿಗಳ ವಿರುದ್ದ ಹರಿಹಾಯ್ದ ಉಪವಿಭಾಗಾಧಿಕಾರಿಗಳು ತಂದೆ ತಾಯಿಗಳು ನಿಮ್ಮ ಮೇಲೆ ಭರವಸೆ ಇಟ್ಟು ವಸತಿ ಶಾಲೆಗೆ ಕಳಿಸುತ್ತಾರೆ, ನೀವು ತಂದೆ ತಾಯಿಗಳಂತೆ ನೋಡಿಕೊಳ್ಳ ಬೇಕು.ಇಷ್ಟೊಂದು ಬೇಜವಾಬ್ದಾರಿ ಅವ್ಯವಸ್ಥೆ ಮಾಡಿದ್ದೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ಅರಳಗುಪ್ಪೆ ವಸತಿ ಶಾಲೆ ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳ ವರ್ತನೆಬಗ್ಗೆ ಅನೇಕ ಪೋಷಕರಿಂದ ಇಲಾಖೆಗೂ ದೂರುಸಲ್ಲಿಸಿದ್ದಾರೆ ಎನ್ನಲಾಗಿದ್ದು, ವಸತಿ ಶಾಲೆಯ ಅಮಾನವೀಯ ವರ್ತನೆಗೆ ವಸತಿ ಮಕ್ಕಳ ಹಾಗೂ ಪೋಷಕರು ಬೇಸತ್ತಿದ್ದು, ಕೆಲಮಕ್ಕಳು ವಸತಿ ಶಾಲೆಯನ್ನೆ ಬಿಟ್ಟು ಹೋಗಿವೆ. ನಮ್ಮ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎನ್ನುವ ಕಾರಣಕ್ಕೆ ವಸತಿ ಶಾಲೆಗೆ ಸೇರಿಸುತ್ತೇವೆ ಆದರೆ ನಮ್ಮ ಮಕ್ಕಳಿಗೆ ತೊಂದರೆಯಾಗೋದಾರೆ ವಸತಿ ಶಾಲೆಗೆ ಅಗತ್ಯವೇನಿದೆ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಡಮಕ್ಕಳ ಶಿಕ್ಷಣ ಹಾಗೂ ವಸತಿ ಸೌಲಭ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ.ಸರ್ಕಾರದ ವ್ಯವಸ್ಥೆಯನ್ನೇ ಹಾಳುಗೆಡವುವ ಅಧಿಕಾರಿಗಳ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

0
0 views