logo

ಹುಳಿಯಾರಿನಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ

**ರಕ್ಷಾಬಂಧನ: ಮಾನಸಿಕ ಶಾಂತಿಯ ಸಂಕಲ್ಪ**
-----------------------
ಹುಳಿಯಾರು: ಇಲ್ಲಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಬಿ.ಕೆ. ಗೀತಕ್ಕನವರ ನೇತೃತ್ವದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಪವಿತ್ರ ಹಬ್ಬದ ಪ್ರಯುಕ್ತ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ರಾಖಿ ಕಟ್ಟಿ ಶುಭ ಕೋರಲಾಯಿತು.

ಈ ವೇಳೆ ಆಶ್ರಮದ ಸಂಚಾಲಕರಾದ ಬ್ರಹ್ಮಕುಮಾರಿ ಗೀತಕ್ಕ ಮಾತನಾಡಿ, ರಕ್ಷಾಬಂಧನ ಕೇವಲ ಸಹೋದರ ಸಂಬಂಧದ ಸಂಕೇತವಲ್ಲ, ಇದು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಗಳ ದ್ಯೋತಕ ಎಂದರು.

ಹಬ್ಬದ ಆಚರಣೆಯ ಭಾಗವಾಗಿ ಪಟ್ಟಣ ಪಂಚಾಯಿತಿ, ಎಸ್.ಬಿ.ಐ. ಬ್ಯಾಂಕ್, ಶಿರಾ ಟೌನ್ ಕೋ ಆಪರೇಟಿವ್ ಬ್ಯಾಂಕ್, ಕೆನರಾ ಬ್ಯಾಂಕ್, ಮೈಸೂರು ಬ್ಯಾಂಕ್ ಹಾಗೂ ಧರ್ಮಸ್ಥಳ ಮಂಜುನಾಥ ಕಚೇರಿ ಸೇರಿದಂತೆ ಹಲವೆಡೆಗೆ ತೆರಳಿ ಎಲ್ಲರಿಗೂ ರಾಖಿ ಕಟ್ಟಿ, ಸಿಹಿ ಹಂಚಿ ಶುಭ ಕೋರುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಕೆ. ಗೀತಕ್ಕನವರು ಮಾತನಾಡುತ್ತಾ, ರಕ್ಷಾ ಬಂಧನ ಕೇವಲ ಒಂದು ದಾರ ಕಟ್ಟುವ ಹಬ್ಬವಲ್ಲ. ಇದು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಮತ್ತು ಪರಸ್ಪರ ರಕ್ಷಣೆಯ ಸಂಕಲ್ಪದ ಪ್ರತೀಕವಾಗಿದೆ. ರಕ್ಷಾ ಬಂಧನದ ಮೂಲ ಉದ್ದೇಶ ಪರಮಾತ್ಮನ ಶ್ರೀರಕ್ಷೆಯು ಸದಾ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ. ಈ ದಿನ ನಾವು ಸಮಾಜದ ಶಾಂತಿ ಮತ್ತು ಸೌಹಾರ್ದತೆಗಾಗಿ ಒಗ್ಗಟ್ಟಿನಿಂದ ದುಡಿಯುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಇತರರಿಗಾಗಿ ಒಳ್ಳೆಯ ಕೆಲಸ ಮಾಡುವ ಮೂಲಕ ನಾವು ಸಮಾಜಕ್ಕೆ ಮಾದರಿಯಾಗಬೇಕು. ನಮ್ಮ ಕೈಲಾದಷ್ಟು ಉತ್ತಮ ಕಾರ್ಯಗಳನ್ನು ಮಾಡಿ ಅನೇಕರಿಗೆ ಸಹಾಯ ಮಾಡಬೇಕು. ನಾವೆಲ್ಲರೂ ಒಂದೇ ಮತ್ತು ಈ ಜಗತ್ತು ಒಂದು ಕುಟುಂಬ ಎಂಬ ಭಾವನೆ ಹೊಂದಿದಾಗ ಮನಸ್ಸಿಗೆ ಶಾಂತಿ ಸಿಗುತ್ತದೆ. ಮನಸ್ಸಿನ ಅಶಾಂತಿಯನ್ನು ದೂರ ಮಾಡಿಕೊಳ್ಳುವ ಮೂಲಕ ನಾವೆಲ್ಲರೂ ಸೌಹಾರ್ದಯುತವಾಗಿ ಇರಬೇಕು. ಪರಸ್ಪರ ಸಹಕರಿಸಬೇಕು ಮತ್ತು ದುರಾಶೆಯಿಂದ ದೂರವಿರಬೇಕು, ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಶ್ರಮಿಸಬೇಕು ಎಂದರು

ಔಷಧಗಳಿಂದಲೇ ಸಂಪೂರ್ಣ ಆರೋಗ್ಯ ದೊರೆಯುವುದಿಲ್ಲ, ಮನಸ್ಸಿನ ಶಾಂತಿಯು ಮುಖ್ಯ, ಧ್ಯಾನ ಯೋಗಗಳು ಮನಸ್ಸನ್ನು ಆರೋಗ್ಯಕರವಾಗಿ ಮತ್ತು ಶಾಂತವಾಗಿ ಇರಿಸುತ್ತದೆ. ಇದರಿಂದಾಗಿ ದೇಹ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಚಂದನ ಅಕ್ಕ, ಲಲಿತಮ್ಮ, ದುರ್ಗರಾಜು, ತಿಮ್ಮಯ್ಯ, ರಾಜಣ್ಣ, ನಿಜಲಿಂಗಪ್ಪ, ಸುಧಕ್ಕ ಮತ್ತು ರಾಮಚಂದ್ರಣ್ಣ ಉಪಸ್ಥಿತರಿದ್ದರು.

12
5803 views