
ಡಿ ಎಸ್ ಎಸ್ ಸಂಘಟನೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ಗುರುಮಿಠಕಲ್ : ತಾಲೂಕಿನ ಕೊಂಕಲ್ ಗ್ರಾಮದ ವಿದ್ಯಾರ್ಥಿ ಆನಂದ್ NEET ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್(MBBS) ಪಡೆದ ಹಾಗೂ ವಿಧ್ಯಾರ್ಥಿನಿ ಕು.ಜಗ್ಗಮ್ಮ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆಯಾಗಿದ್ದಾಳೆ. ಕಾರಣ ದಲಿತ ಸಂಘರ್ಷ ಸಮಿತಿ ( ಸಾಗರ ಬಣ ) ತಾಲೂಕ ಸಂಚಾಲಕ ರಂಗಸ್ವಾಮಿ ನೇತೃತ್ವದಲ್ಲಿ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಂಗಸ್ವಾಮಿ ಅವರು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಪಿಯುಸಿಯಲ್ಲಿ ಶೇ 94 % ಅಂಕ ಪಡೆಯುವ ಮೂಲಕ ಅಂಗನವಾಡಿ ಕಾರ್ಯಕರ್ತೆಯಾಗಿ ಹಾಗೂ ಮತ್ತೊಬ್ಬ ಪ್ರತಿಭೆ ಸರಕಾರಿ ಕನ್ನಡ ಮಾದ್ಯಮ ಶಾಲೆಯಲ್ಲಿ ಓದಿದ ಶಾಲೆಯ ನೆಚ್ಚಿನ ವಿದ್ಯಾರ್ಥಿ ಆನಂದ NEET ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್(MBBS) ಪಡೆಯುವ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡಿರುತ್ತಾನೆ ಇದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಚಾರ ಎಂದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಲ್ಲರೆಡ್ಡಿ ಪಾಟೀಲ ಪಂಚಾಯಿತಿ ಅಧ್ಯಕ್ಷರು, ಮಹದೇವಮ್ಮ ಗಂ ಬಸಪ್ಪ ಉಪಾಧ್ಯಕ್ಷರು,ಆನಂದ್ ಕಟ್ಟೆಲ ಸದಸ್ಯರು, ಚಂದ್ರಪ್ಪ ಕೋಳಿ ಸಮಾಜದ ಮುಖಂಡರು, ಶಿವು ಕಾವಲಿ ಕೋಲಿ ಸಮಾಜ ಮುಖಂಡರು,ರಾಜಪ್ಪ ದುಪ್ಪಲ್ಲಿ ಡಿ ಎಸ್ ಎಸ್ ಗ್ರಾಮ ಘಟಕ ಅಧ್ಯಕ್ಷರು,ಭೀಮಪ್ಪ ಬಾಯಿ ಕಾಡಿ, ಶಾಂತಪ್ಪ ಯಾಳಗಿ ಸರ್
ಹಾಗೂ ಕೊಂಕಲ್ ಗ್ರಾಮದ ಅಂಬೇಡ್ಕರ್ ನಗರದ ಯುವಕರು ಭಾಗಿಯಾಗಿದ್ದರು.