logo

ಹರ್ ಗರ್ ತಿರಂಗಾ ಪೂರ್ವಭಾವಿ ಸಭೆ

ದೇವನಹಳ್ಳಿ: ಭಾರತ ಸ್ವತಂತ್ರವಾದ ಬಳಿಕ ದೇಶವನ್ನು 6 ದಶಕಗಳಿಗೂ ಹೆಚ್ಚು ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಧ್ವಜ ಅಂದರೆ ಏನು ರಾಷ್ಟ್ರಧ್ವಜದ ಮಹತ್ವ ಏನು, ರಾಷ್ಟ್ರಧ್ವಜವನ್ನು ಹೇಗೆ ಗೌರವಿಸಬೇಕು ದೇಶದ ಮನೆಮನೆಗೂ ರಾಷ್ಟ್ರಧ್ವಜ ನೀಡಿ ಅದರ ಮಹತ್ವ ಸಾರಿ ದೇಶವನ್ನು ಗೌರವಿಸುವುದನ್ನು ಪ್ರಚಾರ ಮಾಡುವ ಕೆಲಸ ಎಂದಿಗೂ ಮಾಡಲಿಲ್ಲ ಅದೇ ನರೇಂದ್ರಮೋದಿಯವರು ಪ್ರಧಾನಿಯಾದ 11 ವರ್ಷಗಳಿಂದ ಪ್ರತೀ ಮನೆ ಅಂಗಡಿ ವಾಣಿಜ್ಯ ಕಟ್ಟಡಗಳ ಮೇಲೆ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಾರಿಸುವ ಮೂಲಕ ಹರ್ ಗರ್ ತಿರಂಗಾ ಎಂಬುದನ್ನು ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ಎಂ.ರವಿಕುಮಾರ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹರ್ ಗರ್ ತಿರಂಗಾ ಪೂರ್ವಭಾವಿ ಸಭೆ, ರಕ್ಷಾಬಂಧನ್ ಹಾಗೂ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿ ನರೇಂದ್ರ ಮೊದಿಯವರು ಪ್ರತೀ ಮನೆಮನಗಳಲ್ಲಿ ರಾಷ್ಟ್ರಪ್ರೇಮ ತುಂಬಿ ಸ್ವಾತಂತ್ರ್ಯ ದಿನವನ್ನು ದೊಡ್ಡಹಬ್ಬವಾಗಿ ಆಚರಿಸುವಂತೆ ಮಾಡಿರುವುದು ನಮ್ಮ ಬಿಜೆಪಿ, ನಮ್ಮ ಮೋದಿ ಅವರು ಜಿಲ್ಲೆಯಾದ್ಯಂತ ಹರ್ ಗರ್ ತಿರಂಗಾಯಾತ್ರೆ ಯಶಸ್ವಿಗೊಳಿಸಲು ನಾಲ್ಕೂ ತಾಲೂಕುಗಳಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಮಾಜಿ ಶಾಸಕ ಜಿ. ಚಂದ್ರಣ್ಣ ಮಾತನಾಡಿ, ನಮಗೆ ದೇಶ ಮೊದಲು ನಂತರ ಪಕ್ಷ ಮೊದಲು ಪಕ್ಷ ಉಳಿದರೆ ನಾವು ಪಕ್ಷ ಬಲಿಷ್ಟವಾಗಿದ್ದರೆ ಮುಖ್ಯಮಂತ್ರಿ ಶಾಸಕರು ಎಲ್ಲರೂ ಇರುತ್ತಾರೆ ಹಾಗಾಗಿ ಎಲ್ಲಾ ಸ್ತಾನಗಳು ಪದನಿಮಿತ್ತ ಆದರೆ ಪಕ್ಷ ಪಕ್ಷದ ತೀರ್ಮಾನಗಳು ಮುಖ್ಯವಾಗಲಿದೆ ಹಾಗಾಗಿ ಸ್ಥಾನಮಾನಗಳ ಬಗ್ಗೆ ಆಸೆಪಟ್ಟವರು ಅದೇ ರೀತಿ ಪಕ್ಷ ಸಂಘಟನೆಗೂ ಹೆಚ್ಚಿನ ಒತ್ತು ನೀಡಬೇಕು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ ಮಾತನಾಡಿ, ಮೋದಿಯವರು 11 ವರ್ಷಗಳಿಂದ ಇಡೀ ವಿಶ್ವವೇ ಭಾರತವನ್ನು ತಲೆ ಎತ್ತಿ ನೋಡುವಂತೆ ಮಾಡಿದ್ದಾರೆ ಇಂದು ಪ್ರತೀ ಮನೆಗಳ ಮೇಲೆ ಆ15 ರಂದು ಹರ್ ತಿರಂಗಾ ಹಾರಿಸಲು ಕರೆ ನೀಡಿದ್ದಾರೆ ಎಂದರು.

ಇದೆ ವೇಳೆ ಎಸ್.ಸಿ. ಮೋರ್ಚ ಅಧ್ಯಕ್ಷ ಬುಳ್ಳಹಳ್ಳಿ ಎಂ. ರಾಜಪ್ಪ, ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ್, ಬಿ.ಕೆ. ನಾರಾಯಣಸ್ವಾಮಿ, ದೇಸೂ ನಾಗರಾಜ್, ಬೂದಿಗೆರೆ ಪ್ರಭು, ಶ್ಯಾನಪನಹಳ್ಳಿ ರವಿ, ಭಗವಾನ್, ರಾಮು ಮುಂತಾದವರಿದ್ದರು.

0
1650 views