logo

ಕೋಲಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜಿಲ್ಲಾ ಕಚೇರಿ ಮುಂದೆ ಬಿಜೆಪಿ ವತಿಯಿಂದ ಪ್ರತಿಭಟನೆ

ಕೋಲಾರ, ಆ. 11 — ಕರ್ನಾಟಕ ಸಿದ್ದರಾಮಯ್ಯ ಸರ್ಕಾರ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ದುರ್ಬಳಿಕೆ ಮಾಡುತ್ತಿರುವುದನ್ನು ಖಂಡಿಸಿ ಇಂದು ಕೋಲಾರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಜೋರಾದ ಪ್ರತಿಭಟನೆ ನಡೆಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಹಾಗೂ ಮಾಜಿ ಸಂಸದ ಮುನಿಸ್ವಾಮಿ ರವರ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ, "ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ನಿಧಿಯನ್ನು ತಕ್ಷಣ ವಾಪಸ್ ನೀಡಬೇಕು" ಎಂದು ಘೋಷಣೆ ಕೂಗಿದರು.

ನಂತರ, ಜಿಲ್ಲಾಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿ, ದುರ್ಬಳಕೆಗೆ ಒಳಗಾದ ನಿಧಿಯನ್ನು ಶೀಘ್ರವೇ ಮರುಹಂಚಿಕೆ ಮಾಡುವಂತೆ ಹಾಗೂ ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಾಜಿ ಸಂಸದರು ಮುನಿಸ್ವಾಮಿ, ಕೆಜಿಎಫ್ ಮಾಜಿ ಶಾಸಕರು ಸಂಪಂಗಿ, ಜಿಲ್ಲಾ ಅಧ್ಯಕ್ಷರು ಓಂ ಶಕ್ತಿ ಚಲಪತಿ, ಮಾಜಿ ಜಿಲ್ಲಾ ಅಧ್ಯಕ್ಷರು ವೇಣುಗೋಪಾಲ್. ಇನ್ನೂ ಹಲವು ಪದಾಧಿಕಾರಿಗಳು ಮುಖಂಡರುಗಳು. ಭಾಗವಹಿಸಿದ್ದರು.


1
40 views