
ಚಿಕ್ಕಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಎಂಟನೇ ವಾರ್ಡ್ ನ ಸುಬ್ರಹ್ಮಣ್ಯಚಾರಿ ಅವಿರೋಧ ಆಯ್ಕೆ
ಚಿಕ್ಕಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಎಂಟನೇ ವಾರ್ಡ್ ನ ಸುಬ್ರಹ್ಮಣ್ಯಚಾರಿ ಅವಿರೋಧ ಆಯ್ಕೆ ಕಳೆದ ಎರಡು ವರ್ಷಗಳಿಂದ ಚಿಕ್ಕಬಳ್ಳಾಪುರದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಹಲವಾರು ವಿವಾದಗಳ ನಡುವೆಯೂ ಕೊನೆಗೂ ಸ್ಥಾಯಿ ಸಮಿತಿಯ ಅಧ್ಯಕ್ಷರ ಸ್ಥಾನವನ್ನು ಸುಬ್ರಹ್ಮಣ್ಯಚಾರಿ ವಹಿಸಿಕೊಂಡಿದ್ದಾರೆ. ಸ್ಥಾಯಿ ಸಮಿತಿಯ ಚುನಾವಣೆಯು ಕಾನೂನು ಬದ್ಧವಾಗಿ ನಡೆದಿಲ್ಲವೆಂದು ನಗರಸಭಾ ಸದಸ್ಯರಾದಂತಹ ವಕೀಲರು ಹಾಗಿರುವ ಮಠ ಮಪ್ಪನವರು ಅಂಬೇಡ್ಕರ್ ಭಾವಚಿತ್ರವನ್ನು ಹಿಡಿದುಕೊಂಡು ಪ್ರತಿಭಟನೆ ಮಾಡಿದರು. ನಗರಸಭೆಯ ಆಯುಕ್ತರು ಮತ್ತು ಕೆಲವು ಹಿರಿಯ ಮುಖಂಡರು ನಿಯಮಾನುಸಾರ ಚುನಾವಣೆಯನ್ನು ನಡೆಸದೆ ಏಕಾಏಕಿ ಅಧ್ಯಕ್ಷರನ್ನು ಮತ್ತು ಸ್ಥಾಯಿ ಸಮಿತಿಗೆ ಸದಸ್ಯರನ್ನು ನೇಮಿಸಿಕೊಂಡಿದ್ದಾರೆ . ಕಳೆದ ತಿಂಗಳು ಸಾಮಾನ್ಯ ಸಭೆ ಕರೆದಿದ್ದ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚಿಸಿಯೇ ಇಲ್ಲ ಇವರಿಗೆ ಬೇಕಾದವರನ್ನು ನೇಮಿಸಿಕೊಂಡಿದ್ದಾರೆ ನಾನು ಕಾನೂನು ಹೋರಾಟಕ್ಕೆ ಸಿದ್ಧವಾಗಿದ್ದೇನೆ ಎಂದು ಮಠ-ಮಪ್ಪನವರು ತಿಳಿಸಿದರು. ನಗರಸಭೆ ಆಯುಕ್ತರನ್ನು ಈ ವಿಷಯದ ಬಗ್ಗೆ ಕೇಳಿದಾಗ ನಿಯಮಾನಸಾರವೇ ನಾವು ಸ್ಥಾಯಿ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಒತ್ತಡವು ಇಲ್ಲ. ಈ ವಿಷಯದಲ್ಲಿ ಯಾರಿಗಾದರೂ ಬಾದೀತರಾಗಿದ್ದರೆ ಅವರು ನ್ಯಾಯಾಲಯದ ಮೋರೆ ಹೋಗಬಹುದು ಎಂದು ತಿಳಿಸಿದರು
ಸ್ಟೈಲ್ಸ್ ಮತ್ತು ಅಧ್ಯಕ್ಷರ ಗಾಯಕಿ ಆಗಿರುವಂತ ಸುಬ್ರಹ್ಮಣ್ಯಚಾರಿ ರವರು ಮಾತನಾಡುತ್ತಾ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 31 ನಗರಸಭಾ ಸದಸ್ಯರಿದ್ದು ಅದರಲ್ಲಿ 12 ಜನ ನನ್ನನ್ನ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ಕಡಿಮೆ ಅವಧಿ ಇರುವಂತಹ ಈ ಸಂದರ್ಭದಲ್ಲಿ ನಗರದ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಲು ಪ್ರಯತ್ನಿಸುತ್ತೇನೆ ನಗರದ ಅಭಿವೃದ್ಧಿಯೇ ನನ್ನ ಮೂಲ ಗುರಿ ಎಂದು ತಿಳಿಸಿದರು