logo

ಭಗೀರಥ ಸಮಾಜದಿಂದ ಶ್ರೀ ಕೃಷ್ಣ ವೇಶಭೂಷಣ ಸ್ಪರ್ಧೆ

ಬ್ಯಾಡಗಿ ಪಟ್ಟಣದ ಗಾಂಧಿನಗರದಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ಸ್ನೇಹ ಸದನದ ಶಿಶುಪಾಲನ ಕೇಂದ್ರದ ಅಂಗನವಾಡಿ ಮಕ್ಕಳಿಗೆ ಶ್ರೀ ಭಗೀರಥ ಉಪ್ಪಾರ ಸಮಾಜ ಸಂಘ ಬ್ಯಾಡಗಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಗಾಂಧಿನಗರದ ಹಿಂದುಳಿದ ವರ್ಗಗಳ ಪುಟ್ಟ ಪುಟ್ಟ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಕಂಗೊಳಿಸುತ್ತಿದ್ದವು. ಅಲ್ಲಿನ ಶಿಕ್ಷಕಿ ಸರಸ್ವತಿ ಮಾತನಾಡಿ ಉಪ್ಪಾರ ಸಮಾಜದ ಅಧ್ಯಕ್ಷ ಶ್ರೀ ಮಂಜುನಾಥ ಉಪ್ಪಾರ ಇವರು ಬ್ಯಾಡಗಿಯ ಅತಿ ಹಿಂದುಳಿದ ಪ್ರದೇಶವಾದ ಗಾಂಧಿನಗರದ ಈ ಚಿಕ್ಕ ಅಂಗನವಾಡಿ ಕೇಂದ್ರವನ್ನು ಗುರುತಿಸಿ ಇಲ್ಲಿನ ಅತಿ ಕಡುಬಡ ಹಿಂದುಳಿದ ವರ್ಗಗಳ ಮಕ್ಕಳಿಗೆ ವೇಷಭೂಷಣದ ಸ್ಪರ್ಧೆಯನ್ನು ಏರ್ಪಡಿಸಿ ಮಕ್ಕಳಿಗೆ ಒಂದು ಉತ್ತಮ ಅವಕಾಶ ನೀಡಿದ್ದಾರೆ ಭಾಗವಹಿಸಿದ ಎಲ್ಲ ಮಕ್ಕಳಿಗೆ ಟಿಫನ್ ಬ್ಯಾಗ್ ಕೊಡುಗೆಗಳನ್ನು ನೀಡಿದ್ದಾರೆ. ಅಧ್ಯಕ್ಷರಿಗೂ ಹಾಗೂ ಸಂಘದ ಎಲ್ಲ ಸದಸ್ಯರಿಗೂ ಶಿಶುಪಾಲನ ಕೇಂದ್ರದ ಪರವಾಗಿ ಧನ್ಯವಾದ ತಿಳಿಸಿದರು. ಸ್ನೇಹ ಸದನದ ನಾಲ್ಕು ಶಿಶುಪಾಲನ ಕೇಂದ್ರಗಳಿಗೆ ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಸಹಾಯಧನ ದೊರಕುತ್ತಿತ್ತು ಈಗ ಅದನ್ನು ರದ್ದುಪಡಿಸಲಾಗಿದೆ. ಇವುಗಳನ್ನು ಯಾವಾಗ ಬೇಕಾದರೂ ಬಂದು ಮಾಡುವ ಸಾಧ್ಯತೆ ಇದೆ ಈ ಅಂಗನವಾಡಿಗಳನ್ನು ಅವಲಂಬಿಸಿ ನಾಲ್ಕು ಜನ ಶಿಕ್ಷಕಿಯರು ನಾಲ್ಕು ಜನ ಸಹ ಶಿಕ್ಷಕಿಯರು ಅಡುಗೆ ಮಾಡುವವರು ಜೀವನೋಪಾಯಕ್ಕೆ ಅವಲಂಬಿತರಿದ್ದರು ನಮಗೆಲ್ಲರಿಗೂ ಮುಂದಿನ ಜೀವನೋಪಾಯಕ್ಕೆ ಕುತ್ತು ಬಂದಿದೆ ಈ ಕಷ್ಟವನ್ನು ಅರಿತು ಸಾರ್ವಜನಿಕರು ಪಟ್ಟಣದ ಮುಖಂಡರು ರಾಜಕಾರಣಿಗಳು ಏನಾದರೂ ಸಹಾಯ ಮಾಡಬೇಕೆಂದು ಅಥವಾ ಸಹಾಯ ಮಾಡಿಸಬೇಕೆಂದು ಸಮಾಜಸೇವಕ ಮಂಜುನಾಥ ಉಪ್ಪಾರ ಅವರ ಮೂಲಕ ವಿನಂತಿಸಿಕೊಂಡರು.
ನಂತರ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ ಇಂದು ಅತೀ ಹಿಂದುಳಿದ ಪ್ರದೇಶ ಗಾಂಧಿನಗರದ ಕಡುಬಡವರ ಮಕ್ಕಳನ್ನು ಇಲ್ಲಿ ಸುಂದರ ವೇಷಭೂಷಣದಲ್ಲಿ ನೋಡಿ ಮನ ತುಂಬಿ ಬಂದಿದೆ ಇಂದಿನ ಕೃಷ್ಣ ಜನ್ಮಾಷ್ಟಮಿ ಅರ್ಥಪೂರ್ಣವಾಗಿ ಆಚರಿಸುವಂತಾಗಿದೆ ಆ ಕೃಷ್ಣನು ಇವರೆಲ್ಲರ ಬಾಳಿನಲ್ಲಿ ಸದಾ ಸಂತೋಷ ಸುಖ ನೀಡಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷ ಮಂಜುನಾಥ ಉಪ್ಪಾರ, ಕಾರ್ಯದರ್ಶಿ ಲಿಂಗರಾಜ ಹರ್ಲಾಪುರ, ಮುಖಂಡರಾದ ಶಿವಮೂರ್ತಿ ಉಪ್ಪಾರ, ಮಾಲತೇಶ ಉಪ್ಪಾರ, ಖಜಾಂಚಿ ಚಂದ್ರಶೇಖರ ಆಟದವರ, ಕೃಷ್ಣಪ್ಪ ಉಪ್ಪಾರ, ಮಹಿಳಾ ಮುಖಂಡರಾದ ಶ್ರೀಮತಿ ಲಕ್ಷ್ಮಿ ಉಪ್ಪಾರ, ದೀಪಾ, ಅನುಪಮ ಇನ್ನಿತರರು ಉಪಸ್ಥಿತರಿದ್ದರು

5
507 views