logo

ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು


ಬೆಳಗಾವಿ: ದರೋಡೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಹೊಡೆದ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿ ಇಂದು ಬೆಳ್ಳಂಬೆಳ್ಳಗೆ ನಡೆದಿದೆ.

ದರೋಡೆ, ಗ್ಯಾಂಗ್ ರೇಪ್ ಆರೋಪಿ ರಮೇಶ್ ಕಿಲ್ಲಾರ್ ಗೆ ಬೆಳಗಿನ ಜಾವ 6 ಗಂಟೆಗೆ ಆರೋಪಿ ಬಂಧಿಸಲು ಹೋದಾಗ ಘಟನೆ ನಡೆದಿದೆ.

ಪೊಲೀಸ್ ಪೇದೆ ಷರೀಫ್ ದಫೇದಾರ್ ಗೆ ಚಾಕು ಇರಿದು ಪರಾರಿಯಾಗುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪಿಎಸ್‌ಐ ಪ್ರವೀಣ್ ಗೊಂಗೊಳ್ಳಿ ಎಚ್ಚರಿಕೆ ನೀಡಿದರೂ ದಾಳಿ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಹಿನ್ನೆಲೆ ಆರೋಪಿ ಕಾಲಿಗೆ ಗುಂಡೇಟು ಹೊಡೆದಿದ್ದಾರೆ.

ಡಕಾಯಿತಿ, ದರೋಡೆ, ಸಾಮೂಹಿಕ ಅತ್ಯಾಚಾರ, ಅಕ್ರಮ ಶಸ್ತ್ರಾಸ್ತ್ರ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಗುಂಡಿನ ಏಟು ನೀಡಿದ್ದಾರೆ. ಗಾಯಗೊಂಡ ಆರೋಪಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

33
1895 views