logo

ಶ್ರೀ ವಿನಾಯಕ ಗೆಳೆಯರ ಸೇವಾ ಟ್ರಸ್ಟ್ ವತಿಯಿಂದ 15ನೇ ವರ್ಷದ ಶ್ರೀ ಆಶ್ವಾರೂಡ ಗಣೇಶ ವಿಸರ್ಜನೆ ಕಾರ್ಯಕ್ರಮ



ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ 15ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 27ರಂದು ಸಂಜೆ ವಿಶೇಷ ಶ್ರೀ ಅಶ್ವರೋಡ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.

ಇದರಂತೆ ಪ್ರತಿ ದಿನ ಲಕ್ಷ್ಮಿ ದೇವಿಯ ಸಾಮೂಹಿಕ ಕುಂಕುಮ ಅರ್ಚನೆ, ಅಭಿಷೇಕ, ಮಹಾ ಮಂಗಳಾರತಿ
ಸಹಸ್ರ ನಾಮ ಮೋದಕ ಹೋಮ,
ಸಾಮೂಹಿಕ ಭಸ್ಮ ಅರ್ಚನೆ,ಹಾಗೂ ಪ್ರತಿ ದಿನ ಬರುವಂತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನು ಮಾಡುತ್ತಿದ್ದರು.

02ನೇ ತಾರೀಕು ಮಂಗಳವಾರದಂದು ಸಂಜೆ 6ಗಂಟೆಗೆ ಸುಪ್ರಸಿದ್ದ ಸಾದಲಿ ಸುರೇಂದರ್ ಕಲಾ ತಂಡದಿಂದ "ಸಾಸುಲು ಚಿನ್ನಮ್ಮ" ಹರಿಕತೆಯನ್ನು ಅದ್ದೂರಿಯಾಗಿ
ನಡೆಸಲಾಗಿತ್ತು. ಪ್ರತಿ ದಿನ ಫಲ, ಪುಷ್ಪ,ಪಂಚಾಮೃತ,ಅಭಿಷೇಕ ಪೂಜೆ ಯನ್ನು ಮಾಡುತ್ತಿದ್ದರು.

ಅದೇ ರೀತಿ ವಿಸರ್ಜನೆ ಕಾರ್ಯಕ್ರಮಕ್ಕೆ ವಿಶೇಷವಾಗಿ ಕೇರಳ ತೊರೆಯತ್ತಂ ನೃತ್ಯ ತಂಡ ಮತ್ತು ಮುನೇಶ್ವರ ತಮಟೆ ವಾದ್ಯ,
ನಾದಸ್ವರ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಹೂವಿನ ಪಲ್ಲಕ್ಕಿಯಲ್ಲಿ ಗಣಪತಿಯ ಉತ್ಸವವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಸಾವಿರಾರು ಜನ ಭಕ್ತಾದಿಗಳೊಂದಿಗೆ ಭವ್ಯ ಮೆರವಣಿಗೆಯನ್ನು ನಡೆಸಿದ ನಂತರ ವಿಸರ್ಜನೆಯನ್ನು ಮಾಡಲಾಯಿತು.

ಈ ವಿಸರ್ಜನಾ ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಗೆಳೆಯರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಮೋಹನ್, ಕಾರ್ಯದರ್ಶಿಯಾದ ಲೋಕೇಶ್, ಸದಸ್ಯರಾದ ಬಾಬುರೆಡ್ಡಿ,ಮತ್ತು ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ನಾಮಗೊಂಡ್ಲು ಗ್ರಾಮಸ್ಥರು ಭಾಗವಹಿಸಿದ್ದರು.

2
165 views