ತಾಳಿಕೋಟಿ ತಾಲ್ಲೂಕಿನ ಕಲಿಕೇರಿ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಯೋಜನೆಗೆ ಚಾಲನೆ
📰 ತಾಳಿಕೋಟಿ:ತಾಲೂಕಿನ ಕಲಿಕೇರಿ ವಿದ್ಯುತ್ ವಿತರಣಾ ಕೇಂದ್ರದಿಂದ ಆ ಭಾಗದ ರೈತರ ಹೊಲಗಳಿಗೆ ಬೆಳಗಿನ 7 ಗಂಟೆಗೆ ನಿಯಮಿತವಾಗಿ ವಿದ್ಯುತ್ ಪೂರೈಸುವ ಮಹತ್ವದ ಯೋಜನೆಗೆ ಮಂಗಳವಾರ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಭೀಮನಗೌಡ (ರಾಜುಗೌಡ) ಬಿ. ಪಾಟೀಲ ಅವರು ಚಾಲನೆ ನೀಡಿದರು.ಈ ಯೋಜನೆ ಜಾರಿಗೆ ಬರುವ ಮೂಲಕ ರೈತರಿಗೆ ನೀರಾವರಿ ಕಾರ್ಯಗಳಲ್ಲಿ ಅನುಕೂಲವಾಗಲಿದೆ. ಹೊಲಗಳಿಗೆ ಬೆಳಗಿನ ವೇಳೆಯಲ್ಲೇ ವಿದ್ಯುತ್ ದೊರೆಯುವುದರಿಂದ ಕೃಷಿ ಕಾರ್ಯಗಳಲ್ಲಿ ಸುಗಮತೆ ಒದಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ ಸಂಗನಗೌಡ ಗಬಸಾವಳಗಿ ವಿವಾ ನ್ಯೂಸ್ ಜಿಲ್ಲಾ ವರದಿಗಾರರು ವಿಜಯಪುರ