ವಿಜಯಪುರದಲ್ಲಿ ಭಾರೀ ದಾಳಿ – ₹1.36 ಕೋಟಿ ಮೌಲ್ಯದ ನಕಲಿ ಕ್ರಿಮಿನಾಶಕ ಬಯಲು
ವಿಜಯಪುರ: ಜಿಲ್ಲೆಯಲ್ಲಿ ನಕಲಿ ಕ್ರಿಮಿನಾಶಕ ತಯಾರಿಕಾ ಘಟಕ ಬಯಲಾಗಿದ್ದು, ಕೃಷಿ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ನಡೆಸಿದ ಭಾರೀ ದಾಳಿಯಲ್ಲಿ ₹1,36,98,523 ಮೌಲ್ಯದ ನಕಲಿ ಔಷಧಗಳು ವಶಪಡಿಸಲ್ಪಟ್ಟಿವೆ.
👉 ಕೆಐಎಡಿಬಿ ಪ್ರದೇಶದ ಗೋದಾಮಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಕೊಂಡಗೂಳಿ ಗ್ರಾಮದ ವಿದ್ಯಾಸಾಗರ ಮಲ್ಲಾಬಾದಿ (42) ಮತ್ತು ಕಲಬುರ್ಗಿ ಜಿಲ್ಲೆಯ ಬೊಳನಿ ಗ್ರಾಮದ ಅಮರ ರೆಡ್ಡಿ (19) ಬಂಧಿತರಾಗಿದ್ದಾರೆ.
ಆರೋಪಿಗಳು “ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೋಟೆಕ್ಷನ್” ಹೆಸರಿನ ಬೋರ್ಡ್ ಹಾಕಿಕೊಂಡು ಗೋದಾಮಿನಲ್ಲಿ ನಕಲಿ ಕ್ರಿಮಿನಾಶಕ ತಯಾರಿಸುತ್ತಿದ್ದರು. ನಂತರ ಅದಕ್ಕೆ “ಲೈಫ್ ಅಗೋ ಕೆಮಿಕಲ್” ಕಂಪನಿಯ ಲೇಬಲ್ ಅಂಟಿಸಿ ಸಂಗ್ರಹಿಸಿ, ರೈತರಿಗೆ ಮಾರಾಟ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
🚨 ಈ ದಾಳಿಯಲ್ಲಿ ಎಪಿಎಂಸಿ ಪಿಎಸ್‌ಐ ಬಸವರಾಜ ಎ. ತಿಪರಡ್ಡಿ, ಸಹಾಯಕ ಕೃಷಿ ನಿರ್ದೇಶಕ ಅಮಗೊಂಡ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕಿ ರೇಷ್ಮಾ ಸುತಾರ ಹಾಗೂ ಸಿಬ್ಬಂದಿ ತಂಡ ಪಾಲ್ಗೊಂಡಿದ್ದರು.
📂 ಈ ಕುರಿತು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.