logo

ಸ್ನೇಹಿತನ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಸ್ನೇಹಿತರು.

ಸ್ನೇಹಿತನ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಸ್ನೇಹಿತರು.

ಸೇಡಂ:- : "ಒಳ್ಳೆಯ ಸ್ನೇಹಿತರು ವಜ್ರಗಳಂತೆ ಅಮೂಲ್ಯ, ಅಪರೂಪ ಮತ್ತು ಶಾಶ್ವತ" ಮತ್ತು "ಕತ್ತಲೆಯಲ್ಲಿ ಒಂಟಿಯಾಗಿ ನಡೆಯುವುದಕ್ಕಿಂತ ಸ್ನೇಹಿತನೊಂದಿಗೆ ನಡೆಯುವುದು ಉತ್ತಮ" ಎಂಬುದು ನಿಜವಾದ ಸ್ನೇಹದ ಮಹತ್ವವನ್ನು ಸಾರುತ್ತದೆ. ಅಂತಹದೇ ಘಟನೆಯೊಂದು ಸ್ನೇಹಿತನ ಹುಟ್ಟು ಹಬ್ಬ ದಿನದಂದು ನಡೆದಿದೆ.

ಸೇಡಂ ತಾಲೂಕಿನ ಶಿಲಾರಕೋಟ್ ಗ್ರಾಮದ ಮೇದಕ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಡಾ.ಮಧುಸೂಧನ್ ರೆಡ್ಡಿ ಪಾಟೀಲ್ ಮತ್ತು ಶ್ರೀಮತಿ ಜ್ಯೋತಿ ಮಧುಸೂಧನ್ ರೆಡ್ಡಿ ಪಾಟೀಲ್ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರು ಶಿಲಾರಕೋಟ್ ಅವರ ಪುತ್ರ ಅಮರನಾಥ್ ರೆಡ್ಡಿ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ ಆದರೆ ಇದೇ ಸೆಪ್ಟೆಂಬರ್ ೧೬ರಂದು ಅಮರನಾಥ್ ಅವರ ಜನ್ಮ ದಿನ ಇತ್ತು ಅವರ ಸ್ನೇಹಿತರು ತಮ್ಮ ಸ್ನೇಹಿತನ ಶಿಕ್ಷಣ ಉತ್ತಮ ರೀತಿಯಲ್ಲಿ ಮುಗಿಸಿಕೊಂಡು ಬಂದು ಉನ್ನತ ಮಟ್ಟಕ್ಕೆ ಏರಲೆಂದು ಭಾವಿಸಿ ಸ್ನೇಹಿತನ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಅದೃಷ್ಟ ಇಲ್ಲದಿದ್ದರೂ ಆತನ ಜನ್ಮ ದಿನವನ್ನು ವಿಶೇಷವಾಗಿ ಆಚರಣೆ ಮಾಡಬೇಕುನ್ನುವ ಉದ್ದೇಶದಿಂದ ಮನೀಶ್, ನಾಗರಾಜ್, ಅನಿರುದ್, ಕಣ್ಣಾ, ಆಕಾಶ್, ಶ್ರೀಮನ್, ಉದಯ್ ಕಿರಣ್, ರಾಹುಲ್, ಅಖಿಲ್ ಗೌಡ್, ವೆಂಕಟ್ ರತ್ನಂ ಇವರೆಲ್ಲ ಸೇರಿ ಉಷಾ ಫೌಂಡೇಷನ್ ವತಿಯಿಂದ ಅನಾಥರಿಗೆ ಮತ್ತು ಬಡವರಿಗೆ ಅನ್ನದಾನ ಮಾಡುವ ಮೂಲಕ ಆಚರಣೆ ಮಾಡಿದರು.

ನನ್ನ ಮಗನಿಗೆ ಇಂತಹ ಸ್ನೇಹಿತರು ಇರುವುದು ನನಗೆ ತುಂಬ ಖುಷಿ ಆಗುತ್ತಿದೆ ಇಂತಹ ಕಾರ್ಯಕ್ರಮಗಳು ಸಮಾಜದ ಯುವಜನತೆಗೆ ಮಾದರಿಯಾಗಲಿವೆ ಎಂದು ಡಾ.ಮಧುಸೂಧನ್ ರೆಡ್ಡಿ ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿದರು.

ವರದಿ ವೆಂಕಟಪ್ಪ ಕೆ ಸುಗ್ಗಾಲ್.

1
57 views