ತುಮಕೂರಿನಲ್ಲಿ ಬಸವ ಸಂಸ್ಕೃತಿ ಜಾಗೃತಿ ಜಾಥಾ
ಚಿಕ್ಕಕನಾಯಕನಹಳ್ಳಿ ರ್ನಾಟಕ ಲಿಂಗಾಯಿತ ಮಠಾಧೀಶರ ಒಕ್ಕೂಟದ ವತಿಯಿಂದ ಬಸವಣ್ಣನವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 1ರಿಂದ 30ರವರೆಗೆ ಬಸವ ಸಂಸ್ಕೃತಿ ಜಾಗೃತಿ ಅಭಿಯಾನ ನಡೆಯುತ್ತಿದೆ. ಇದರ ಅಂಗವಾಗಿ ಜಾಥಾ ಸೆಪ್ಟೆಂಬರ್ 27ರಂದು ಬೆಳಗ್ಗೆ 10:30ಕ್ಕೆ ತುಮಕೂರು ನಗರಕ್ಕೆ ಆಗಮಿಸಲಿದೆ.
ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಗೌರವಾಧ್ಯಕ್ಷರಾಗಿದ್ದಾರೆ. ಗುಬ್ಬಿ ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು ಅಧ್ಯಕ್ಷರಾಗಿದ್ದು, ಅಂದು ಇಡೀ ದಿನ ಸಾರ್ವಜನಿಕ ಸಭೆ, ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಜಾಥಾ ಸೆಪ್ಟೆಂಬರ್ 18ರಂದು ತಿಪಟೂರಿನ ಕೆರಗೋಡಿ ಶ್ರೀಗಳಿಂದ ಚಾಲನೆ ಪಡೆದಿದ್ದು, 19ರಂದು ಚಿಕ್ಕನಾಯಕನಹಳ್ಳಿಗೆ, 20ರಂದು ತಮ್ಮಡಿಹಳ್ಳಿ, ಕುಪ್ಪೂರು, ಮತಿಘಟ್ಟ, ಹಂದನಕೆರೆ, ಎಣ್ಣೆಗೆರೆ ಮೂಲಕ ಯಳನಡು, 21ರಂದು ಹುಳಿಯಾರು, ನಂದಿಹಳ್ಳಿ, ಮುದ್ದೇನಹಳ್ಳಿ, ಅಣೆಕಟ್ಟೆ ಕಡೆಗೆ, 22ರಂದು ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಆಗಮಿಸಿ ನಂತರ ತುರುವೇಕೆರೆಗೆ ಪಯಣಿಸಲಿದೆ.
ಈ ಜಾಥಾದಲ್ಲಿ ಬಸವಾದಿ ಶರಣರ ಚಿಂತನೆಗಳು, ಆಶಯಗಳು ಹಾಗೂ ಸಹಬಾಳ್ವೆ–ಸಮಾನತೆಯ ಸಂದೇಶವನ್ನು ಜನತೆಗೆ ತಲುಪಿಸಲಾಗುವುದು ಎಂದು ಉಭಯ ಶ್ರೀಗಳು ಮಾಧ್ಯಮ ಘೋಷ್ಠಿಯಲ್ಲಿ ತಿಳಿಸಿದ್ದಾರೆ.