
*ಒತ್ತುವರಿಯಾದ ಸರ್ಕಾರಿ ಭೂಮಿ ಕಾಪಾಡುವಲ್ಲಿ ಅಧಿಕಾರಿಗಳು ವಿಫಲ ಕೆ ಆರ್ ಎಸ್ ಪಕ್ಷ ಆರೋಪ.*
*ಒತ್ತುವರಿಯಾದ ಸರ್ಕಾರಿ ಭೂಮಿ ಕಾಪಾಡುವಲ್ಲಿ ಅಧಿಕಾರಿಗಳು ವಿಫಲ ಕೆ ಆರ್ ಎಸ್ ಪಕ್ಷ ಆರೋಪ.*
*ಗಂಗಾವತಿ.*
ಇಂದು ಗಂಗಾವತಿ ತಾಲೂಕಿನ ಬಸಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 54/*/3 ವಿಸ್ತೀರ್ಣ 1 ಎಕರೆ 36 ಗುಂಟೆ ಭೂಮಿ ಬಸಪಟ್ಟಣ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಗಾಗಿ ಮೀಸಲಿಟ್ಟ ಸರ್ಕಾರಿ ಗಾಯರಾಣ ಭೂಮಿಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಈ ಸರ್ವೇ ಭೂಮಿಯಲ್ಲಿ ಸದ್ಯ ಭತ್ತವನ್ನು ನಾಟಿ ಮಾಡಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಯಾವುದೇ ಭಯ ಆತಂಕ ಇಲ್ಲದೇ ಸರ್ಕಾರದ ನೀತಿ-ನಿಯಮಗಳನ್ನು ಉಲ್ಲಂಘಿಸಿದ್ದಾರೆ.ಇದನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತುವರಿಯಾದ ಭೂಮಿಯನ್ನ ಕಾಪಾಡಿ ಅದ್ದುಬಸ್ತು ಮಾಡಿ, ಸಾರ್ವಜನಿಕರ ಉಪಯೋಗಕ್ಕೆ ಮೀಸಲಿರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.ಅಧಿಕಾರಿಗಳು ನಿರ್ಲಕ್ಷ ವಹಿಸಿ ಪ್ರಭಾವಗಳ ಒತ್ತಡಕ್ಕೆ ಮಣಿದು ಯಾವುದೇ ಸೂಕ್ತ ಕ್ರಮ ಕಾನೂನು ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಒತ್ತುವರಿಯಾದ ಭತ್ತದ ಭೂಮಿಗೆ ಭೇಟಿ ನೀಡಿ ಮಾಹಿತಿ ತಿಳಿಸಿ.
ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕನಕಪ್ಪ ಉಡೆಜಾಲಿ ಮಾತನಾಡಿ ಇದೇ ಗ್ರಾಮದ ಸರ್ವೆ ನಂಬರ್ 37/1/6 ವಿಸ್ತೀರ್ಣ 3 ಎಕರೆ 27 ಗುಂಟೆ ರುದ್ರ ಭೂಮಿ ಇದ್ದು ಇದನ್ನು ಅಲ್ಲಿಯ ಅಕ್ಕಪಕ್ಕದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿ ಕೊಂಡಿದ್ದಾರೆ.ಸದ್ಯಕ್ಕೆ ಗ್ರಾಮದ ರುದ್ರ ಭೂಮಿಯು ಒಂದು ಎಕರೆ ಮಾತ್ರ ಉಳಿದಿದ್ದು ಭೂಮಿಯನ್ನು ಉಳಿಸಿ ಕಾಪಾಡುವ ಕೆಲಸದಲ್ಲಿ ವಿಫಲರಾದ ಗ್ರಾಮ ಆಡಳಿತದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ತಹಶೀಲ್ದಾರರಮೇಲೆ ಜಿಲ್ಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಒತ್ತುವರೆಯಾದ ರುದ್ರಭೂಮಿಯನ್ನ ತೆರವುಗೊಳಿಸಿ ನಾಗರಿಕರ ಅನುಕೂಲಕ್ಕೆ,ಸೌಲಭ್ಯಕ್ಕೆ ಅನುವು ಮಾಡಬೇಕೆಂದು ಒತ್ತಾಯಿಸಿದರು.
ಬಸಪಟ್ಟಣ ಗ್ರಾಮದಲ್ಲಿ ನೂರಾರು ಎಕ್ಕರೆ ಭೂಪ್ರದೇಶವು ಗೈರಾಣು ಹಾಗೂ ಸರ್ಕಾರಿ ಭೂಮಿಯಾಗಿದ್ದು ಸ್ಥಳೀಯ ಪ್ರಭಾವಿ ವ್ಯಕ್ತಿಗಳು ವಿವಿಧ ಪಕ್ಷಗಳ ಮುಖಂಡರು ಅದನ್ನ ಒತ್ತುವರಿ ಮಾಡಿ ತಮ್ಮ ವೈಯಕ್ತಿಕ ,ಖಾಸಗಿ ಕೆಲಸಗಳಿಗೆ ಉಪಯೋಗಿಸುತ್ತಿರುವುದು ಕಂಡು ಬಂದಿದೆ. ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಭೂಮಿಯನ್ನು ಕಾಪಾಡಬೇಕು ಇಲ್ಲದಿದ್ದಲ್ಲಿ ಮುಂದಿನ ಅಕ್ಟೋಬರ್ ಎರಡರಂದು ಗಂಗಾವತಿ ತಾಲೂಕಿನ ಮಹಾತ್ಮ ಗಾಂಧಿ ರುತ್ತದ ಬಳಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಗ್ರಾಮದ ಸರ್ಕಾರಿ ಭೂಮಿಯ ಉಳಿವಿಗಾಗಿ ಉಗ್ರವಾದ ಹೋರಾಟ,ಉಪಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನೆ ,ಪಕ್ಷದ ಮುಖಂಡರಾದಮೈನುದ್ದೀನ್,ಮಹಬೂಬ್ ಸಾಬ್,ದಾದಾಪೀರ್,ಗಣೇಶ್ ಶಿಂದೆ,ದಮ್ಮೂರ್ ಮಾಬುಸಾಬ್,ಪೀರ್ ಸಾಬ್,ಬಾಸುಸಾಬ್, ಅಹಮದ್ ಸಾಬ್, ಮಲ್ಲಪ್ಪ ಬಾರ್ಕೆರ್, ದೇವಪ್ಪ ಹಡಪದ, ಡಿಶ್ ಮುರ್ತುಜಾ,ವೀರೇಶ ಉಡುಮಕಲ್ ಎಂ. ಬಸವರಾಜ್,ಅಕ್ಬರ್. ಸೇರಿದಂತೆ ಅನೇಕರು ಭಾಗವಹಿಸಿದ್ದರು.