logo

ದೇಶದಲ್ಲಿ ಮತಕಳ್ಳತನ ನಡೆಯುತ್ತಿದೆ ಎಂದು ಆರೋಪ

🔥🔥🔥ಪ್ರಕಟಣೆ 🔥🔥🔥

*ಪೂರ್ವ ಭಾವಿ ಸಬೆ*

ದಿನಾಂಕ:22/09/2025

ದೇಶದಲ್ಲಿ ಮತಕಳ್ಳತನ ನಡೆಯುತ್ತಿದೆ ಎಂದು ಆರೋಪಿಸಿರುವ ಲೋಕಸಭೆಯ ವಿರೋದ ಪಕ್ಷದ ನಾಯಕರಾಗಿರುವ ಶ್ರೀ ರಾಹುಲ್ ಗಾಂದಿಯವರು ಮತಕಳ್ಳತನದ ವಿರುದ್ದ ಜನ ಜಾಗೃತಿ ಮೂಡಿಸುತ್ತಿದ್ದು
ಇದಕ್ಕೆ ಬೆಂಬಲವಾಗಿ ಸುಳ್ಯ ವಿಧಾನ ಸಭ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ಮತ್ತು ಪ್ರತಿಭಟಣಾ ಸಭೆ ಸಪ್ಟೆಂಬರ್ 22 ರಂದು , 2025 ಸೋಮವಾರ ದಂದು ನಡೆಯಲಿದೆ, ಈ ಮೆರವಣಿಗೆ ಅನುಗ್ರಹ ಸಭಾ ಭವನದ ಎದುರುಗಡೆಯಿಂದ ಕಡಬ ಮುಖ್ಯ ಪೇಟೆಯವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ.
ಈ ಪಂಜಿಣ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುಂಚೂಣಿ ಘಟಕದ ಅಧ್ಯಕ್ಚರುಗಳು, ಪಧಾಧಿಕಾರಿಗಳು, ಬೂತ್ ಸಮಿತಿಯ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು, ಎಲ್ಲಾ ನಾಮ ನಿರ್ಧೇಶಿತ ಸದಸ್ಯರುಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳು, ಮಾಜಿ ತಾಲೂಕ್ ಪಂಚಾಯತ್ ಸದಸ್ಯರುಗಳು, ಪಟ್ಟಣ ಪಂಚಾಯತ್ ನ ಸದಸ್ಯರುಗಳು, ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು
ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು , ಸುಳ್ಯ ವಿಧಾನ ಸಭಾ ಕ್ಷೇತ್ರದ ಎಲ್ಲ ಯುವ ಕಾಂಗ್ರೆಸ್ ನ ಸದಸ್ಯರುಗಳು ಹಾಗು ಕಾರ್ಯಕರ್ತರು ಮತ್ತು ಸಂವಿಧಾನ ಪ್ರೇಮಿಗಳು ಮತ್ತು ಸಮಾನ ಮನಸ್ಕ ಚಿಂತಕರು, ಮತದಾರರು ಭಾಗವಹಿಸಿ ಜಾಗೃತರಾಗಿ ಪವಿತ್ರ ಮತದಾನದ ಮೌಲ್ಯವನ್ನು ಎತ್ತಿ ಹಿಡಿದು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲು
ಒಗ್ಗಟ್ಟಾಗಲು ಬೇಕಾಗಿ ಬಾಗವಹಿಸಿ ಯಶಸ್ವಿಗೊಳಿಸಬೇಕಾಗಿದೆ.

*ಅಭಿಲಾಷ್ ಪಿಕೆ*
*ಅಧ್ಯಕ್ಷರು ಕಡಬ ಬ್ಲಾಕ್ ಕಾಂಗ್ರೆಸ್*

*ಫೈಝಲ್ ಎಸ್.ಇ.ಎಸ್*
*ಅಧ್ಯಕ್ಷರು, ಯೂತ್ ಕಾಂಗ್ರೆಸ್ ಸುಳ್ಯವಿಧಾನ ಸಭಾ ಕ್ಷೇತ್ರ*

2
3248 views