logo

ಕಸಮುಕ್ತ ಹುಳಿಯಾರು ನಮ್ಮೆಲ್ಲರ ಗುರಿ

ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಇನ್ನು ಮುಂದೆ ಕಸದ ವಾಹನ ನಿಗದಿತ ಸಮಯಕ್ಕೆ ಬರುವ ವ್ಯವಸ್ಥೆಯನ್ನು ಪಂಚಾಯಿತಿ ಜಾರಿಗೊಳಿಸಿದೆ. ನಾಗರಿಕರು ಕಸವನ್ನು ಬೀದಿ ಬದಿಯಲ್ಲಿ ಹಾಕದೆ ನೇರವಾಗಿ ಕಸದ ವಾಹನಕ್ಕೆ ಮಾತ್ರ ನೀಡುವಂತೆ ಹಾಗೂ ಹಸಿ ಕಸ–ಒಣ ಕಸಗಳನ್ನು ಪ್ರತ್ಯೇಕವಾಗಿ ನೀಡುವಂತೆ ಪಂಚಾಯಿತಿ ಮನವಿ ಮಾಡಿದೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ವಿ. ಮಂಜುನಾಥ್ ಅವರು ಮಾತನಾಡಿ – “ಹುಳಿಯಾರವನ್ನು ಕಸಮುಕ್ತ ಪಟ್ಟಣವನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕು” ಎಂದು ಹೇಳಿದ್ದಾರೆ.

ಸ್ವಚ್ಛ ಮತ್ತು ಸುಂದರ ಹುಳಿಯಾರ ನಿರ್ಮಾಣಕ್ಕೆ ನಾಗರಿಕರಿಂದ ಅಗತ್ಯ ಸಹಕಾರ ಲಭಿಸಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.

0
0 views