ಆರ್ಥಿಕ ಸಾಮಾಜಿಕ ಸಮೀಕ್ಷೆ ವೇಳೆ ಹಿಂದು-ರೆಡ್ಡಿ ಎಂದೇ ಬರೆಸಿ : ಅಶೋಕರಡ್ಡಿ ಮನವಿ
ಯಾದಗಿರಿ : ಹಿಂದುಳಿದ ವರ್ಗಗಳ ಸಾಮಾಜಿಕ ಸಮಿಕ್ಷೆ ಆರ್ಥಿಕ (ಜಾತಿ ಜನಗಣತಿ ) ವೇಳೆ ನಮ್ಮ ಸಮುದಾಯದವರು ಧರ್ಮದ ಕಾಲಂ ನಲ್ಲಿ ಹಿಂದು ಜಾತಿ ಕಾಲಂ ನಲ್ಲಿ ರೆಡ್ಡಿ ಎಂದು ಬರೆಸುವಂತೆ ರೆಡ್ಡಿ ಸಮಾಜದ ಯುವ ಮುಖಂಡ ಅಶೋಕರೆಡ್ಡಿ ವಂಕಸಂಬ್ರ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ರೆಡ್ಡಿ ಸಮಾಜದ ಜಾಗೃತಿ ಸಲುವಾಗಿ ಮತ್ತೆ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯದ ಹಿತಕ್ಕಾಗಿ ಹಿಂದು ರೆಡ್ಡಿ ಎಂದೇ ನಮೂದಿಸಿ ಎಂದು ಸಮಾಜದ ಬಂಧುಗಳಿಗೆ ಮನವಿ ಮಾಡಿದ್ದಾರೆ.ಸಮಾಜದ ಏಳಿಗೆ ಮತ್ತು ಒಗ್ಗಟ್ಟು ಮೂಡಿಸಲು ಎಲ್ಲಾ ನಮ್ಮ ಸಮಾಜದ ಹಿರಿಯರು ಮತ್ತು ಯುವಕರು ಸಂಘಟಿತರಾಗಬೇಕು ಎಂದು ಅವರು ತಿಳಿಸಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ತಾಯಿ ಕೃಪೆಗೆ ಪತ್ರ ರಾಗಬೇಕು ಎಂದು ಕರೆ ನೀಡಿದ್ದಾರೆ.