ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲನಗೌಡ ಜನ್ಮದಿನ ಆಚರಣೆ ||
ಹತ್ತಿಕುಣಿ ಅವರದ್ದು ಆದರ್ಶ ವ್ಯಕ್ತಿತ್ವ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುರಕುಂದಿ
ಯಾದಗಿರಿ : ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ನಾಯಕತ್ವವನ್ನು ಸಮಾಜ ಯಾವಾಗಲೂ ಒಪ್ಪಿಕೊಳ್ಳುತ್ತದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ತಿಳಿಸಿದರು.
ಬುಧವಾರ ನಗರದಲ್ಲಿ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಹತ್ತಿಕುಣಿ ಅವರ ಜನ್ಮ ದಿನದಲ್ಲಿ ಭಾಗವಹಿಸಿ ಮಾತನಾಡಿ, ಮಲ್ಲನಗೌಡ ಅವರು ಅತ್ಯಂತ ಸರಳ ಜೀವಿಯಾಗಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ವ್ಯತ್ವಿತ್ವ ಹೊಂದಿದ್ದಾರೆ. ಹಲವು ಬಾರಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರೂ ಸಹ ಅವರಲ್ಲಿ ಕಿಂಚಿತ್ತೂ ಆಡಂಬರವಿಲ್ಲ ಎಂದರು.
ಈ ವೇಳೆ ಮಾತನಾಡಿದ ಹತ್ತಿಕುಣಿ, ಜನಸೇವೆ ಎಂಬುದು ದೇವರ ಸೇವೆ ಎಂದು ನಮಗೆ ಹಿರಿಯ ಸ್ವಾತಂತ್ರ್ಯ ಸೇನಾನಿ ದಿ.ವಿಶ್ವನಾಥರಡ್ಡಿ ಮುದ್ನಾಳ್ ಪರಿಪಾಠ ಹಾಕಿದ್ದಾರೆ. ಅವರ ಆಶಿರ್ವಾದ ಮತ್ತು ಮಾಜಿ ಶಾಸಕರಾಗಿದ್ದ ದಿ.ವೀರಬಸವಂತರಡ್ಡಿ ಮತ್ತು ವೆಂಕಟರಡ್ಡಿ ಮುದ್ನಾಳ್ ಅವರ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ವೆಂಕಟರಡ್ಡಿಗೌಡ ಗೋದ್ವಾಮಿ, ಬಸ್ದುಗೌಡ ನಾಯ್ಕಲ್, ಗೋವಿಂದಪ್ಪ ಕೊಂಚಟ್ಟಿ, ಮಲ್ಲನಗೌಡ ಅನಕಸೂಗುರು, ವಿಷ್ಣು ಹತ್ತಿಕುಣಿ, ಶ್ರೀಕಾಂತ್ ಸುಂಗಲಕರ, ಮರಿಲಿಂಗಪ್ಪ ಕೊಂಚಟ್ಟಿ ಇದ್ದರು.