
ಸೆಪ್ಟೆಂಬರ್ 28 ರಿಂದ ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್–3 ಆಡಿಷನ ಪ್ರಾರಂಭ: ಗುರು ಬಂಡಿ
ಜನನಿ ಜನಮ ಭೂಮಿ ಸುದ್ದಿ ಜಾಲ
ಕಲಬುರಗಿ:
ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರು ಬಂಡಿ ಅವರು ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್–3ರ ಕುರಿತು ಮಾಹಿತಿ ನೀಡಿದರು.
28-09-2025, ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕನ್ನಡ ಭವನ, ತಿಮ್ಮಾಪೂರ ಸರ್ಕಲ್, ಕಲಬುರಗಿಯಲ್ಲಿ ಆಡಿಷನ್ ಕಾರ್ಯಕ್ರಮ ನಡೆಯಲಿದೆ.
ಗುರು ಬಂಡಿ ಮಾತನಾಡಿ,
ಈಗಾಗಲೇ ಯಶಸ್ವಿಯಾಗಿ ಸೀಸನ್–1 ಮತ್ತು 2 ಪೂರ್ಣಗೊಂಡಿದ್ದು ಜನರಿಂದ ಅದ್ಭುತ ಪ್ರತಿಕ್ರಿಯೆ ದೊರಕಿದೆ.
ಈ ಬಾರಿ ಸೀಸನ್–3 ಎರಡು ತಿಂಗಳ ಕಾಲ ನಡೆಯಲಿದ್ದು, ಒಟ್ಟು ಐದು ಸುತ್ತುಗಳು ಇರಲಿವೆ.
ಗ್ರಾಂಡ್ ಫಿನಾಲೆ ನವೆಂಬರ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಹುಮಾನ ವಿವರಗಳು:
ಪ್ರಥಮ ಬಹುಮಾನ – ರೂ. 51,000
ದ್ವಿತೀಯ ಬಹುಮಾನ – ರೂ. 21,000
ತೃತೀಯ ಬಹುಮಾನ – ರೂ. 11,000
ಇದೇ ಜೊತೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ನೀಡಿ ಸ್ಪರ್ಧಿಗಳನ್ನು ಗೌರವಿಸಲಾಗುವುದು.
ಈ ಸೀಸನ್‌ನಲ್ಲಿ ಇಡೀ ಕರ್ನಾಟಕ ರಾಜ್ಯದ ಸಂಗೀತಾಭಿಮಾನಿಗಳು ಹಾಗೂ ಪ್ರತಿಭಾವಂತರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ಭಾಗವಹಿಸಲು ಸಂಪರ್ಕಿಸಿ:
9880962222, 8310403084
ಈ ಸಂದರ್ಭದಲ್ಲಿ ಈಶ್ವರ್ ಹೆಗ್ಗಾ, ಸಚಿನ್ ಪೂಜಾರಿ, ಪ್ರದೀಪ್ ಓಂಕಾರ್, ಅನಿಲ್ ಬಂಡಿ, ಸಾಗರ ಭಾವಿ, ಶಿವಕುಮಾರ್ ಪಾಟೀಲ್, ಬೀರಪ್ಪ ಪೂಜಾರಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.