logo

ಭಾರತೀಯ ಜನಸಂಘದ ನೇತಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಮಾಲಾರ್ಪಣೆ ಸಲ್ಲಿಸಿದ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ

ಸಂಘಟನಾ ಚತುರ,ಪ್ರಖರ ವಾಗ್ಮಿ, ಬರಹಗಾರ, ಅಂತ್ಯೋದಯ ಪರಿಕಲ್ಪನೆಯ ಹರಿಕಾರ, *ಭಾರತೀಯ ಜನಸಂಘದ ನೇತಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ* ಅವರ ಜಯಂತಿಯಂದು ಕೆಂಪವಾಡದ ಕೇಂದ್ರ ಕಛೇರಿಯಲ್ಲಿ *ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ* ಅವರು ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿದರು.

ಈ ಸಮಯದಲ್ಲಿ ಬಿಜೆಪಿ ಕಾಗವಾಡ ಮಂಡಲ ಅಧ್ಯಕ್ಷರಾದ ಶ್ರೀ ಅರುಣಕುಮಾರ ಗಣೇಶವಾಡಿ, ಕಾಗವಾಡ ಮತಕ್ಷೇತ್ರದ ಬಿಜೆಪಿ ಪಕ್ಷದ ಯುವ ನಾಯಕರು ಹಾಗೂ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀನಿವಾಸ ಶ್ರೀಮಂತ ಪಾಟೀಲ, ಮುಖಂಡರಾದ ಶ್ರೀ ಕಿರಣ ಯಂದಗೌಡರ, ಶ್ರೀ ಮಹಾನಿಂಗ ಜನವಾಡ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಋಷಿವಾಣಿ ಕನ್ನಡದಿನ ಪತ್ರಿಕೆ ಸಂಪಾದಕರು : ಮಹಾದೇವ ಮಗದುಮ್

52
4509 views