logo

ಪಂಥಗಳನ್ನು ಮಿರುವುದು, ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ.

ಬುಕರ್ ಪ್ರಶಸ್ತಿ ವಿಜೇತ ಬಾನು ಮೇಡಂ ಅವರಿಗೆ.

ಶಬ್ದಗಳ ಮೂಲಕ ಉತ್ತರಿಸುವೆನು ಎನ್ನುವ ಬಾನು ಮುಸ್ತಾಕ್ ಅವರು ಅವರ ವಿರೋಧಿ ಸಿದ್ಧಾಂತದವರನ್ನು ದ್ವೇಷ ಮಾಡುತ್ತಾರೆ ಎನ್ನುವ ಪೂರ್ವಗ್ರಹ ಪೀಡಿತರಾಗಿಯೇ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಖಾತೆಯ ಸಾಮಾಜಿಕ ಜಾಲತಾಣದಲ್ಲಿ ಅವರು ತಮಗೆ ಕೇಳಿರುವ ಯಾವ ಪ್ರಶ್ನೆಗೂ ಉತ್ತರಿಸದೆ ಉದ್ದುದ್ದ ಭಾಷಣದ ರೀತಿ ಬರೆದಿದ್ದಾರೆ ಹೊರತು ಅಲ್ಲಿ ಯಾವ ಪ್ರಶ್ನೆಗೂ ಉತ್ತರಿಸುವ ಗೋಜಿಗೆ ಹೋಗಿಲ್ಲ.

ಈ ಎಡ ಪಂತಿಯ ರಿಗೆ ಒಂದು ರೀತಿಯ ಕಾಯಿಲೆಯಿದೆ ಅದು ಏನೆಂದರೆ ಅವರು ತಮಗೆ ತಾವೇ ಕೊಟ್ಟುಕೊಂಡ್ ಬಿರುದುಗಳಿವೆ ಬುದ್ದಿಜೀವಿಗಳು, ಹೋರಾಟಗಾರರು, ಮಾನವೀಯತೆವುಳ್ಳವರು, ಪ್ರಗತಿಪರರು ಇನ್ನು ಇವೆ. ಇವರು ತಾವು ಯಾರಿಗೆ ಬೇಕಾದರೂ, ಏನಾದರೂ ಪ್ರಶ್ನಿಸಬಹುದು ಅದಕ್ಕೆ ಅಂಭೆಡ್ಕರ್ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹಕ್ಕನ್ನು ಭಾರತೀಯರಿಗೆ ಕೊಟ್ಟಿದ್ದಾರೆ ಎನ್ನುತ್ತಾರೆ, ಆದರೆ ಅದೇ ಸಂವಿಧಾನ ದ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹಕ್ಕನ್ನು ಅವರನ್ನು ವಿರೋಧಿಸುವವರು ಉಪಯೋಗಿಸಿ ಅವರನ್ನೇ ಪ್ರಶ್ನಿಸಿದರೆ ಅದು ದ್ವೇಷ, ಕುಹೂಕ, ಕೆಟ್ಟ ಮಾನಸಿಕತೆ ಎನ್ನುತ್ತಾರೆ. ಇದೆ ಇವರು ಇಲ್ಲಿಯವರೆಗೆ ಮಾಡಿಕೊಂಡು ಬಂದ ಒಂದು ಕೆಟ್ಟ ಪದ್ಧತಿ. ಆದರೆ ಈಗ ಸಾಮಾಜಿಕ ಜಾಲತಾಣ ಬಹಳ ಪ್ರಬಲವಾಗಿ ಎಲ್ಲಾ ವಿಷಯವನ್ನು ಎಲ್ಲರಿಗೂ ತಲುಪಿಸುವುದರಿಂದ ಸತ್ಯ ಯಾವುದು ಸುಳ್ಳು ಯಾವುದು ಎಂದು ಬಲು ಬೇಗ ಅರ್ಥವಾಗುತ್ತದೆ. ಇದರಿಂದ ಅನೇಕರ ಮುಖವಾಡಗಳು ಕಳಚಿ ಬೀಳುತ್ತವೆ.

ಪೂರ್ವಾಗ್ರಹ ಇಲ್ಲದ ಯಾವ ಮನುಷ್ಯನೂ ಸಿಗಲಾರ.ಜೀವದ ಮೂಲ ಸ್ವಭಾವ, ದೇಶ, ಕಾಲ, ಮತ, ಪಂಥ, ವೖಚಾರಿಕತೆ, ವಿಧ್ಯೆ, ಸಾಹಚರ್ಯದ ಪ್ರಭಾವದೊಂದಿಗೆ ಹುಟ್ಟಿನ ಜಾತಿ, ಮತ, ಪಂಥಗಳ ಶ್ರಧ್ಧೆಯನ್ನು ಮೀರುವ ಜನ ಸಿಗುವುದೇ ವಿರಳ.ಅದು ಯಾವುದೇ ಪಂಥದವನಾಗಲಿ ಸುಮ್ಮನೆ ಭಾಷಣಕ್ಕೆ ಪ್ರಚಾರಕ್ಕೆ ನಾವು ಜ್ಯಾತ್ಯಾತೀತ ಎನ್ನುವವರು ಜಾತಿಯಾಧಾರಿತ ಸೌಲಭ್ಯವನ್ನು ಪಡೆಯುತ್ತಾರೆ.

ಬಹುಶಃ ಒಂದು ಪೀಳಿಗೆಗೆ ಯೋಚಿಸುವ ಅಬ್ಯಾಸ ಮಾಡಿಸಿದ್ದೇ ಕುವೆಂಪು, ಬೇಂದ್ರೆ, ಕಾರಂತ, ಭೈರಪ್ಪ, ನಿರಂಜನ ರಂತವರೆ.ಹಾಗೆ ನೋಡಿದರೆ ಭೈರಪ್ಪ ಅವರ ಕಾಂದಬರಿ ಗಳನ್ನು ಓದಿದಷ್ಟು ಅರ್ಧ ಜನರು ಕುವೆಂಪು ಅವರ ಕಾದಂಬರಿಗಳನ್ನು ಓದಿಲ್ಲ ಎನ್ನುವುದು ನನ್ನ ವಯಕ್ತಿಕ ಅನಿಸಿಕೆ. ಅವರು ಕೂಡ ಒಂದು ಸಿದ್ಧಾಂತ ಕ್ಕೆ ಕಟ್ಟುಬಿದ್ದೆ ಸಾಹಿತ್ಯ ಕೃತಿಗಳನ್ನು ರಚಿಸಿದ್ದು. ಆಮೇಲೆ
ಇನ್ನೊಂದು ಮುಖ್ಯವಾದ ವಿಷಯ ಎಂದರೆ ಬಹುತೇಕ ಸಾಹಿತಿಗಳು ಇಲ್ಲಿಯ ಬಹುಸಂಖ್ಯೆಯ ಧರ್ಮ, ಆಚಾರ, ವಿಚಾರಗಳನ್ನು, ವಿಮರ್ಶೆಸಿ ಟೀಕೆ, ಟಿಪ್ಪಣಿ ಮಾಡಿದರೆ ಹೊರತು, ಅಲ್ಪಸಂಖ್ಯೆತಾ ( ಮುಸ್ಲಿಂ, ಜೈನ, ಬೌದ್ಧ, ಸಿಖ್ ) ಸಮುದಾಯಗಳ ಬಗ್ಗೆ ಒಂದು ಸೊಲ್ಲು ಕೂಡ ಎತ್ತಲಿಲ್ಲ ಅಲ್ಲಿಯೂ ಕೂಡ ಸಾಕಷ್ಟು ಮೂಢನಂಬಿಕೆಗಳು, ಕಟ್ಟರ್ ಮೂಲಭೂತಿವಾದಿತನ ಎಲ್ಲವು ಇತ್ತು ಆದರೆ ಅದನ್ನು ಯಾರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ ಎನ್ನುವುದು ಕೂಡ ಸರ್ವಕಾಲಿಕ ಸತ್ಯ.
ಪೂರ್ವಾಗ್ರಹದಲ್ಲೂ ಬಲ, ಎಡ, ಸ್ತ್ರೀ, ದಲಿತ, ನವ್ಯ ಎಂಬ ಅಪಸವ್ಯಗಳೇ ಅಲ್ಲವೇ ಜನರ ಮೆದುಳಿನಲ್ಲಿ ತಮ್ಮ ಸೀಮಿತ ಜ್ಞಾನನವನ್ನೂ ಅಪಾರ ಅಜ್ಞಾನವನ್ನೂ ತುಂಬಿ ಭಾರತೀಯ ತತ್ವ ಶಾಸ್ತ್ರದ ಅವನತಿ ಮತ್ತು ಅಶ್ರಧ್ಧೆಗೆ ಕಾರಣವಾದದ್ದು? ಇಲ್ಲಿಯ ಆಚರಣೆಗಳು ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ಲೇಬಲ್ ಒತ್ತಿ ಸಂಪೂರ್ಣ ವಾಗಿ ಶರಾ ಬರೆದು ಬಿಟ್ಟರು, ಇಲ್ಲಿಯ ಆಧ್ಯಾತ್ಮಿಕತೆಯೂ ಪ್ರಪಂಚದಲ್ಲಿ ಎಲ್ಲಿಯೂ ಇರದಷ್ಟು ಸಮೃದ್ಧವಾಗಿತ್ತು. ವ್ಯಕ್ತಿತ್ವ ವಿಕಸನದ ಮಾರ್ಗಸೂಚಿಯಂತೆ ಇತ್ತು ಅದೆನ್ನೆಲ್ಲವನ್ನು ನಾವು ಕಡೆಗಣಿಸಿ ಬ್ರಿಟಿಷ್ ಆಡಳಿತಕ್ಕೆ, ಮೊಗಲ್ ಆಡಳಿತಕ್ಕೆ ಜೋತು ಬಿದ್ದು ಬಿಟ್ಟೇವು ಎಷ್ಟರ ಮಟ್ಟಿಗೆ ಎಂದರೆ ಬ್ರಿಟಿಷರು ಬರದಿದ್ದರೆ ಮೇಲ್ವರ್ಗದ ವರಿಗೆ ಮಾತ್ರ ಶಿಕ್ಷಣವಿತ್ತು ಅವರೇ ಕಡ್ಡಾಯ ಶಿಕ್ಷಣ ದ ಕಾನೂನು ಮಾಡಿದರು ಎಂದು ಇನ್ನು ಪೂರ್ವಗ್ರಹವನ್ನೇ ತಲೆಯಲ್ಲಿ ತುಂಬಿಕೊಂಡಿದ್ದಾರೆ.

ಭೈರಪ್ಪ ನವರು ಪೂರ್ವಗ್ರಹ ಪೀಡಿತರಾಗಿ ಮುಸ್ಲಿಂ ಸಮುದಾಯದ ಬಗ್ಗೆ ತಮ್ಮ ಆವರಣ ಕಾದಂಬರಿಯಲ್ಲಿ ಬರೆದಿದ್ದಾರೆ ಎಂದು ಶರಾ ಒತ್ತುವವರು ಅಂದೇ ಅದನ್ನು ವಿರೋಧಿಸಬೇಕಿತ್ತು, ಇಲ್ಲಾ ಭೈರಪ್ಪ ಅವರೊಂದಿಗೆ ಚರ್ಚಿಸಬೇಕಿತ್ತು ಅಲ್ಲವೇ. ಇನ್ನು ಪಾಕಿಸ್ತಾನ, ಬಾಂಗ್ಲಾದೇಶದ ಮುಸ್ಲಿರ ಅಟ್ಟಹಾಸ ಹಾಗೂ ಕಾಶ್ಮೀರ ಪಂಡಿತರ ನರಮೇಧಾ, ಇರಾಕಿನಲ್ಲಿ ಝಜಿಯಂರ ನರಮೇಧ, ಇಸ್ರೇಲ್ ಮೇಲೆ ನಿರಂತರ ದಾಳಿ,ಭಾರತದಲ್ಲಿ ಹಿಂದೂ ದೇವರ ಮೆರವಣಿಗೆಯಲ್ಲಿ ಕಲ್ಲು ತೂರಾಟ ಇವೆಲ್ಲವನ್ನೂ ಈ ಪ್ರಗತಿಪರರು ಎನಿಸಿಕೊಂಡವರು ಪ್ರಶ್ನಿಸಿದ್ದಾರೆಯೇ.

ಭೈರಪ್ಪನವರು ಪೂರ್ವಗ್ರಹ ಪೀಡಿತರಾಗಿಯೇ ಬರೆದಿದ್ದರೆ ಅವರು ಒಂದು ವಾರದ ಮಟ್ಟಿಗೆ ಏಕೆ ಮೇಡಂ ನಿಮ್ಮ ಮನೆಯಲ್ಲಿ ಬಂದು ಇರಬೇಕಾಗಿತ್ತು, ನಿಮ್ಮ ಸಮುದಾಯದ ಬಗ್ಗೆ ತಿಳಿದುಕೊಳ್ಳಬೇಕಿತ್ತು, ಅವರಿಗೆ ಇರುವ ಜನಪ್ರಿಯತೆಗೆ ಅವರು ಇದನ್ನು ಅರಿಯದೆ ಬರೆದಿದ್ದರು ಕೂಡ ಓದುವ ವರ್ಗವಿತ್ತು ಎನ್ನುವ ಸೂಕ್ಷ್ಮ ಕೂಡ ನಿಮಗೆ ತಿಳಿಲಿಲ್ಲವೇ?

ಯಾವ ಪ್ರಶಸ್ತಿ ಪಡೆಯಲು ಯಾವ ರೀತಿಯ ತಂತ್ರಗಾರಿಕೆಯ ಉಪಯೋಗ ಬೇಕೆಂದು ಬಲ್ಲವರೆಲ್ಲಾ ಪೂರ್ವಾಗ್ರಹ ರಹಿತರೇ?
ಕಾಪಿ ಪೇಸ್ಟ್ ಮಾಡಿ PhDಗಳಾಗುವವರು, ತಾವೇ ಸ್ವ ಪ್ರಗತಿಪರರು ಎಂದು ಬೀಗುವವರು ಹೀಗೆ ಬೇರೆಯವರು ಪ್ರಶ್ನಿಸಿದರೆ ಅದು ದ್ವೇಷವಾಗಿ ಕಾಣುತ್ತದೆ, ಯಾವಾಗ ಪ್ರಶ್ನೆಗೆ ನಮ್ನಲ್ಲಿ ಉತ್ತರ ಇರುವುದಿಲ್ಲವೋ ಆಗ ಅದು ದ್ವೇಷ ಆಗುತ್ತದೆ ಮತ್ತು ಎಲ್ಲವು ಇವರಿಗೆ ಪೂರ್ವಗ್ರಹದಂತೆ ಕಾಣುತ್ತದೆ ಏಕೆಂದರೆ ಇವರು ಆ ಪ್ರಶ್ನೆಯಿಂದ ತಪ್ಪಿಸಿಕೊಳ್ಳಬೇಕಲ್ಲ. ಬಿಂದುವಿನಷ್ಟು ಅರಿವಿನಿಂದ ಮಹಾಜ್ಞಾನಿಗಳೆಂದು ಬೀಗುವ ಪರಿ ಕಂಡು ಅಸಹ್ಯವಾಗುತ್ತಿದೆ. ಅನಂತ ಸಾಗರದ ಬಿಂದುವಿನಷ್ಟು ಅರಿತೆನೆಂಬವರಷ್ಟೇ ಭೖರಪ್ಪನವರಂತೆ ಬಾಗುವರು.
ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಡೆದರಲ್ಲ ಅವರು ನಿಜವಾದ ಪೂರ್ವಗ್ರಹ ಪೀಡಿತರು, ಬಹುಷಃ ಕಾರ್ನಡ ರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಿದ್ದೆ ಪ್ರಪಂಚದ ಎಂಟನೇ ಅದ್ಭುತ ಅದನ್ನು ಇವರು ಪ್ರಶ್ನಿಸುವುದಿಲ್ಲ?

ಪ್ರಶ್ನಿಸುವುದು ಎಲ್ಲರ ಹಕ್ಕು.

7
5 views